ಪುತ್ರನಿಗೆ ಮಹಾಮಾರಿ ಕೊರೋನಾ ಸೋಂಕು: ಹೃದಯಾಘಾತದಿಂದ ತಾಯಿ ಸಾವು

ಮಗನಿಗೆ ಕೊರೋನಾ ಸೋಂಕು ದೃಢ| ಸೋಂಕಿತನ ತಾಯಿ ಹೃದಯಾಘಾತದಿಂದ ಸಾವು| ಬಾಗಲಕೋಟೆ ಜಿಲ್ಲೆ ಜಮಖಂಡಿಯಲ್ಲಿ ನಡೆದ ಘಟನೆ| ಮೃತಳು ರಕ್ತದೊತ್ತಡ, ಮಧುಮೇಹದಿಂದಲೂ ಬಳಲುತ್ತಿದ್ದರು ಎಂದು ಹೇಳಲಾಗಿದೆ|

Mother Dead After Confirm Coronavirus to her Son in Jamakhandi in Bagalkot district

ಬಾಗಲಕೋಟೆ(ಏ.19): ತನ್ನ ಪುತ್ರನಿಗೆ ಕೊರೋನಾ ಸೋಂಕು ದೃಢಪಟ್ಟಿದೆ ಎಂಬ ವಿಚಾರ ತಿಳಿದು ಸೋಂಕಿತನ ತಾಯಿ ಹೃದಯಾಘಾತದಿಂದ ಅಸುನೀಗಿರುವ ಘಟನೆ ಜಿಲ್ಲೆಯ ಜಮಖಂಡಿಯಲ್ಲಿ ಶನಿವಾರ ರಾತ್ರಿ ನಡೆದಿದೆ. 

ಜಮಖಂಡಿಯಲ್ಲಿರುವ 47 ವರ್ಷದ ವ್ಯಕ್ತಿಗೆ (ಪಿ.381) ಕೊರೋನಾ ಇರುವುದು ಶನಿವಾರ ದೃಢಪಟ್ಟಿತ್ತು. ಈ ವಿಚಾರ ತಿಳಿಯುತ್ತಿದ್ದಂತೆ ನೊಂದುಕೊಂಡ ಆತನ ಅರವತ್ತೇಳು ವರ್ಷದ ತಾಯಿ ತೀವ್ರ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ.

ಕೊರೋನಾ ಆತಂಕದಲ್ಲಿದ್ದ ಡಿಸಿಎಂ ಗೋವಿಂದ ಕಾರಜೋಳಗೆ ಬಿಗ್ ರಿಲೀಫ್..!

ಈಕೆ ರಕ್ತದೊತ್ತಡ, ಮಧುಮೇಹದಿಂದಲೂ ಬಳಲುತ್ತಿದ್ದರು ಎಂದು ಹೇಳಲಾಗಿದೆ. ಪುತ್ರನಿಗೆ ಸೋಂಕು ತಗುಲಿದ್ದರಿಂದ ಇವರ ಗಂಟಲ ದ್ರವ ಸಂಗ್ರಹಿಸಲಾಗಿತ್ತು ಎನ್ನಲಾಗಿದೆ. ಮೃತ ಮಹಿಳೆಯ ಅಂತ್ಯಕ್ರಿಯೆಯನ್ನು ಕೋವಿಡ್‌-19 ನಿಯಮಾವಳಿ ಪ್ರಕಾರ ನಡೆಸುವಂತೆ ಜಿಲ್ಲಾಡಳಿತ ಸೂಚಿಸಿದ್ದು, ಅದರಂತೆಯೇ ಅಂತ್ಯಕ್ರಿಯೆ ನಡೆಯಲಿದೆ ಎಂದು ಬಾಗಲಕೋಟೆ ಜಿಲ್ಲಾಧಿಕಾರಿ ಕ್ಯಾಪ್ಟನ್‌ ರಾಜೇಂದ್ರ ತಿಳಿಸಿದ್ದಾರೆ.
 

Latest Videos
Follow Us:
Download App:
  • android
  • ios