ಮೂಲ್ಕಿ(ಜು.31): ಮೂಲ್ಕಿಯ ನ್ಯಾಯವಾದಿ ಭಾಸ್ಕರ ಹೆಗ್ಡೆ ಅವರ ಪತ್ನಿ ಸುಮನಾ ಬಿ ಹೆಗ್ಡೆ ಮತ್ತು ಪುತ್ರಿ ಸಮೀಕ್ಷಾ ಬಿ. ಹೆಗ್ಡೆ ವಾಟ್ಸ್‌ಆ್ಯಪ್‌ನಲ್ಲಿ ಸ್ವರಚಿತ ಹಾಡುಗಳ ಮೂಲಕ ಜನರಿಗೆ ಕೋವಿಡ್‌-19 ಬಗ್ಗೆ ಜಾಗೃತಿ ಮೂಡಿಸುವ ಹಾಗೂ ಪ್ರತಿಯೊಬ್ಬರ ಮನೆಗಳಲ್ಲೂ ಕೊರೋನಾ ಬಗ್ಗೆ ಎಚ್ಚರಿಕೆಯಿಂದಿರುವ ಬಗ್ಗೆ ಪ್ರಯತ್ನ ಮಾಡುವ ಕಾರ್ಯ ಮಾಡಿದ್ದಾರೆ.

ನ್ಯಾಯವಾದಿ ಭಾಸ್ಕರ ಹೆಗ್ಡೆಯವರ ಪತ್ನಿ ಸುಮನಾ ಪ್ರಸ್ತುತ ಕೆನರಾ ಬ್ಯಾಂಕ್‌ನ ಮೂಲ್ಕಿ ಶಾಖೆಯ ಉದ್ಯೋಗಿಯಾಗಿದ್ದು ಬ್ಯಾಂಕ್‌ನ ಕನ್ನಡ ಕೂಟದಲ್ಲಿ ಹವ್ಯಾಸಿ ಬರಹಗಾರರ ಕೂಟದ ಸಕ್ರಿಯ ಸದಸ್ಯರಾಗಿದ್ದಾರೆ.

'ಬೆಡ್‌ ಇಲ್ಲ': ಮಂಗಳೂರಲ್ಲೂ ಶುರುವಾಯ್ತು ಹೊಸ ಗೋಳು, ಪ್ರಭಾವಿಗಳಿಗಷ್ಟೇ ಸೌಲಭ್ಯ

ಅವರ ಪುತ್ರಿಯಾದ ಸಮೀಕ್ಷಾ ಕಾನೂನು ಪದವಿಯ ವಿದ್ಯಾರ್ಥಿನಿ. ಕೊರೋನಾ ಬಗ್ಗೆ ಇವರು ಸ್ವರಚಿಸಿ ಹಾಡಿದ ದೃಶ್ಯಗಳು ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿವೆ. ಕಳೆದ ನಾಲ್ಕು ತಿಂಗಳಿಂದ ಕೊರೋನಾ ಶುರುವಾದ ಬಳಿಕದ ಲಾಕ್‌ಡೌನ್‌ ಹಾಗೂ ನಂತರದ ದಿನಗಳಲ್ಲಿ ವಿವಿಧ ರೀತಿಯಲ್ಲಿ ಹಾಡುಗಳನ್ನು ರಚಿಸಿದ್ದು ಜನಮನ್ನಣೆಯನ್ನು ಪಡೆದುಕೊಂಡಿವೆ.