ಬೆಂಗಳೂರು [ಜ.31]:  ಬಿಬಿಎಂಪಿಯ ಶಾಲಾ-ಕಾಲೇಜಿನ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಶೀಘ್ರವೇ ಪ್ರತಿದಿನ ಬೆಳಗ್ಗೆ ಲಘು ಉಪಾಹಾರ ಸಿಗಲಿದೆ.

ಬಿಬಿಎಂಪಿಯ ವಿವಿಧ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಎಸ್ಸೆಸ್ಸೆಲ್ಸಿಯ 1,932 ವಿದ್ಯಾರ್ಥಿಗಳಿಗೆ ಹಾಗೂ ಪಾಲಿಕೆಯ ವಿವಿಧ ಕಾಲೇಜಿನಲ್ಲಿ ದ್ವಿತೀಯ ಪಿಯು ವಿದ್ಯಾಭ್ಯಾಸ ಮಾಡುತ್ತಿರುವ 1,948 ವಿದ್ಯಾರ್ಥಿಗಳಿಗೆ ಪ್ರತಿದಿನ ಬೆಳಗ್ಗೆ ಲಘು ಉಪಹಾರ ನೀಡಲು ಪಾಲಿಕೆ ತೀರ್ಮಾನಿಸಿದೆ. ಉಪಹಾರ ನೀಡಲು ಬಿಬಿಎಂಪಿಯು ಅಕ್ಷಯ ಪಾತ್ರ ಫೌಂಡೇಷನ್‌ ನೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಈ ಶಾಲೆಯಲ್ಲಿ ಒಬ್ಬ ಪ್ರಿನ್ಸಿಪಲ್, ಒಬ್ಬ ಶಿಕ್ಷಕಿ, ಒಬ್ಬಳೇ ವಿದ್ಯಾರ್ಥಿನಿ...

ಈ ಕುರಿತು ಪ್ರತಿಕ್ರಿಯೆ ನೀಡಿದ ಪಾಲಿಕೆ ಶಿಕ್ಷಣ ವಿಭಾಗದ ಸಹಾಯಕ ಆಯುಕ್ತ ನಾಗೇಂದ್ರ ನಾಯ್ಕ್, ಬಿಬಿಎಂಪಿಯ ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶ ಉತ್ತಮಗೊಳಿಸುವ ನಿಟ್ಟಿನಲ್ಲಿ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ನಡೆಸಲಾಗುತ್ತಿದೆ. ಹೀಗಾಗಿ, ವಿದ್ಯಾರ್ಥಿಗಳು ಪ್ರತಿದಿನ ಬೆಳಗ್ಗೆ ಬೇಗ ಶಾಲೆ- ಕಾಲೇಜಿಗೆ ಆಗಮಿಸುತ್ತಾರೆ. ಅವರಿಗೆ ಉಪಹಾರದ ಸಮಸ್ಯೆ ಆಗಬಾರದು ಎಂಬ ಕಾರಣಕ್ಕೆ ಪರೀಕ್ಷೆ ಮುಗಿಯುವವರೆಗೆ ಪಾಲಿಕೆಯಿಂದಲೇ ಉಪಹಾರ ನೀಡುವುದಕ್ಕೆ ತೀರ್ಮಾನಿಸಲಾಗಿದೆ. ಇದರಿಂದ ಪಾಲಿಕೆಯ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯು ಅಧ್ಯಯನ ಮಾಡುತ್ತಿರುವ 3,880 ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ವಿವರಿಸಿದರು.

ಈ ಶಾಲೆಯಲ್ಲಿ ಒಬ್ಬ ಪ್ರಿನ್ಸಿಪಲ್, ಒಬ್ಬ ಶಿಕ್ಷಕಿ, ಒಬ್ಬಳೇ ವಿದ್ಯಾರ್ಥಿನಿ..

ಎಸ್ಸೆಸ್ಸೆಲ್ಸಿಯ ವಿದ್ಯಾರ್ಥಿಗಳಿಗೆ ಮಾರ್ಚ್ 26ರವರೆಗೆ ಹಾಗೂ ದ್ವಿತೀಯ ಪಿಯುಸಿಯ ವಿದ್ಯಾರ್ಥಿಗಳಿಗೆ ಮಾಚ್‌ರ್‍ 3ರವರೆಗೆ ಲಘು ಉಪಹಾರ ನೀಡಲು ನಿರ್ಧರಿಸಲಾಗಿದೆ. ಈಗಾಗಲೇ ಅಕ್ಷಯ ಪಾತ್ರ ಫೌಂಡೇಷನ್‌ನಿಂದ ಬಿಬಿಎಂಪಿಯ ಶಾಲೆಗಳಿಗೆ ಮಧ್ಯಾಹ್ನದ ಊಟ ಸರಬರಾಜು ಆಗುತ್ತಿದ್ದು, ಇದರೊಂದಿಗೆ ಉಪಾಹಾರವನ್ನು ಸಹ ನೀಡುವಂತೆ ಕೋರಲಾಗಿದೆ. ಉಪ್ಪಿಟ್ಟು, ಚಿಫ್ಸ್‌, ಕೇಕ್‌ ರೀತಿಯ ಉಪಹಾರ ನೀಡುವ ಬಗ್ಗೆ ಪರಿಶೀಲಿಸುವಂತೆ ಕೋರಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.