'ಬಿಜೆಪಿಗೆ ಹಿಡಿಶಾಪ ಹಾಕಿ ನೂರಾರು ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆ'
ಕೇಂದ್ರ ಮತ್ತು ರಾಜ್ಯದಲ್ಲಿನ ಜನ ವಿರೋಧಿ, ರೈತ ವಿರೋಧಿ, ಕಾರ್ಮಿಕ ವಿರೋಧಿ ಬಿಜೆಪಿ ಸರ್ಕಾರದ ಧೋರಣೆಗೆ ಬೇಸತ್ತ ಜನತೆ| ಯಾಕಾದರೂ ಬಿಜೆಪಿಗೆ ಅಧಿಕಾರ ಕೊಟ್ಟಿದ್ದೇವೆ ಎಂದು ಬಿಜೆಪಿಗೆ ಹಿಡಿಶಾಪ ಹಾಕುತ್ತಿರುವ ಜನತೆ: ಜಿ.ಎಸ್. ಪಾಟೀಲ|
ರೋಣ(ಏ.16): ತಾಲೂಕಿನ ಬೊಮ್ಮಸಾಗರ ಗ್ರಾಮದಲ್ಲಿ 100ಕ್ಕೂ ಹೆಚ್ಚು ಕಾರ್ಯಕರ್ತರು ಬಿಜೆಪಿ ತೊರೆದು ಜಿಲ್ಲಾ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಜಿ.ಎಸ್. ಪಾಟೀಲ ಸಮ್ಮುಖದಲ್ಲಿ ಗ್ರಾಮದ ದುರ್ಗಾದೇವಿ ಸಮುದಾಯ ಭವನದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಪಕ್ಷದ ಶಾಲು, ಹೂ ಮಾಲೆ ಹಾಕಿ ಬರಮಾಡಿಕೊಂಡ ಜಿ.ಎಸ್. ಪಾಟೀಲ, ಕೇಂದ್ರ ಮತ್ತು ರಾಜ್ಯದಲ್ಲಿನ ಜನ ವಿರೋಧಿ, ರೈತ ವಿರೋಧಿ, ಕಾರ್ಮಿಕ ವಿರೋಧಿ ಬಿಜೆಪಿ ಸರ್ಕಾರದ ಧೋರಣೆಗೆ ಜನತೆ ಬೇಸತ್ತಿದ್ದಾರೆ. ಯಾಕಾದರೂ ಬಿಜೆಪಿಗೆ ಅಧಿಕಾರ ಕೊಟ್ಟಿದ್ದೇವೆ ಎಂದು ಜನತೆ ಬಿಜೆಪಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಕಾಂಗ್ರೆಸ್ ತತ್ವ ಸಿದ್ಧಾಂತ, ಈ ಹಿಂದೆ ಅಧಿಕಾರದಲ್ಲಿದ್ದಾಗ ಕೈಗೊಂಡ ಅಭಿವೃದ್ಧಿ ಕಾರ್ಯಗಳು ಇಂದಿಗೂ ಜನರ ಮನಸ್ಸಿನಲ್ಲಿದ್ದು, ಕಾಂಗ್ರೆಸ್ ಆಡಳಿತವನ್ನು ಮೆಚ್ಚಿದ್ದಾರೆ. ಈ ದಿಶೆಯಲ್ಲಿ ಬಿಜೆಪಿ ಧೋರಣೆಗೆ ಬೇಸತ್ತು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ ಎಂದರು.
ಗದಗ: ಹೆದ್ದಾರಿ ಅಭಿವೃದ್ಧಿ ಹೆಸರಿನಲ್ಲಿ ರೈತರಿಗೆ ಅನ್ಯಾಯ
ರೋಣ ಬ್ಲಾಕ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ವೀರಣ್ಣ ಶೆಟ್ಟರ್, ಎಪಿಎಂಸಿ ಸದಸ್ಯ ಪರಶುರಾಮ ಅಳಗವಾಡಿ ಮಾತನಾಡಿದರು. ಈ ವೇಳೆ ಜಿಪಂ ಉಪಾಧ್ಯಕ್ಷೆ ಮಂಜುಳಾ ಹುಲ್ಲಣ್ಣವರ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿ.ಆರ್. ಗುಡಿಸಾಗರ, ಶರಣಗೌಡ ಪಾಟೀಲ (ಸರ್ಜಾಪುರ) ಶ್ರೀಕಾಂತ ಜಾಲಿಹಾಳ, ಸಾಂತಪ್ಪ ಜಾಲಿಹಾಳ ಉಪಸ್ಥಿತರಿದ್ದರು.
ಕಾಂಗ್ರೆಸ್ ಸೇರ್ಪಡೆಗೊಂಡವರು
ನಿಂಗನಗೌಡ ಅಂಟರದಾನಿ, ಪಡಿಯಪ್ಪ ರಕ್ಕಸಗಿ, ಫಕೀರಪ್ಪ ತಳವಾರ, ಈರನಗೌಡ ಅಂಟರದಾನಿ, ಮುತ್ತಪ್ಪ ತಳವಾರ, ಶರಣಪ್ಪ ಆನಂದಗಿರಿ, ನಾಗಪ್ಪ ಮಾವಿನಗಿಡದ, ಬಾಲಪ್ಪ ಕಾಳಪ್ಪನವರ, ಬಸವರಾಜ ಕಳಸಣ್ಣವರ, ಭೀಮನಗೌಡ ಅಂಟರದಾನಿ, ಜಯಪ್ಪ ಕಾಳಪ್ಪನವರ, ಶಾಂತಪ್ಪ ಲಗಳಿ, ಮುತ್ತಪ್ಪ ಲಗಳಿ, ಬಸವರಾಜ ರಕ್ಕಸಗಿ, ಶಿವಾನಂದ ಕೆಂಗಾರ, ಶೇಖಪ್ಪ ನರೇಗಲ್ಲ, ಶಾಂತಪ್ಪ ಕುಂಕದ, ಹೊನಕೇರಪ್ಪ ಕುಂಕದ, ಮಲ್ಲಪ್ಪ ಆನಂದಗಿರಿ, ನಾಗಪ್ಪ ಕೆಂಗಾರ, ಭೀಮಣ್ಣ ಹುಲ್ಲಣ್ಣವರ, ಸುಭಾಸಚಂದ್ರ ಮೂಲಿಮನಿ ಸೇರಿದಂತೆ 100ಕ್ಕೂ ಹೆಚ್ಚು ಹಿರಿಯ ಮುಖಂಡರು, ಯುವಕರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.