karnataka Politics : ಚಿಕ್ಕಮಗಳೂರು: ಚುನಾವಣೆಯಲ್ಲಿ ಅಲ್ಪಸಂಖ್ಯಾತರಿಗೇ ಹೆಚ್ಚು ಟಿಕೆಟ್‌

  • ಚುನಾವಣೆಯಲ್ಲಿ ಅಲ್ಪಸಂಖ್ಯಾತರಿಗೇ ಹೆಚ್ಚು ಟಿಕೆಟ್‌
  • 9 ಮುಸ್ಲಿಂ, 3 ಕ್ರಿಶ್ಚಿಯನ್‌ ಸೇರಿ ಒಟ್ಟು 12 ಕ್ಷೇತ್ರದಲ್ಲಿ ಅಲ್ಪಸಂಖ್ಯಾತರು ಸ್ಪರ್ಧಿಸಲು ಅವಕಾಶ 
More tickets for minorities in Town  Municipality election  chikkamagaluru snr

ಚಿಕ್ಕಮಗಳೂರು (ಜ.05): ನಗರಸಭೆ ಚುನಾವಣೆಯಲ್ಲಿ (Election ) ಅಲ್ಪಸಂಖ್ಯಾತರಿಗೆ ಹೆಚ್ಚು ಸ್ಥಾನಗಳಲ್ಲಿ ಸ್ಪರ್ಧಿಸಲು ಅವಕಾಶ ಮಾಡಿಕೊಡುವ ಮೂಲಕ ಕಾಂಗ್ರೆಸ್‌ (Cogress) ಪಕ್ಷ ನ್ಯಾಯ ಒದಗಿಸಿದೆ. ಪಕ್ಷದಿಂದ ಈ ಸಮುದಾಯಕ್ಕೆ ಅನ್ಯಾಯ ಆಗಿಲ್ಲ ಎಂದು ಕಾಂಗ್ರೆಸ್‌ (Congress) ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ನಯಾಜ್‌ ಅಹ್ಮದ್‌ ಹೇಳಿದರು. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರಸಭೆಯ 35 ವಾರ್ಡ್‌ಗಳಲ್ಲಿ 9 ಮುಸ್ಲಿಂ, 3 ಕ್ರಿಶ್ಚಿಯನ್‌ ಸೇರಿ ಒಟ್ಟು 12 ಕ್ಷೇತ್ರದಲ್ಲಿ ಅಲ್ಪಸಂಖ್ಯಾತರು ಸ್ಪರ್ಧಿಸಲು ಅವಕಾಶ ನೀಡಲಾಗಿತ್ತು. ಅದರಲ್ಲಿ 6 ಸ್ಥಾನ ಗೆದ್ದಿದ್ದೇವೆ ಎಂದರು.

ಸೋಮವಾರ ಕಾಂಗ್ರೆಸ್‌ ಆತ್ಮಾವಲೋಕನ  ಸಭೆಯಲ್ಲಿ ಗೊಂದಲ ಮೂಡಿಸಿದವರು ಕಾಂಗ್ರೆಸ್‌ ಪಕ್ಷದವರಲ್ಲ, ಅಲ್ಪಸಂಖ್ಯಾತರಿಗೆ ಅನ್ಯಾಯವಾಗಿದೆ ಎಂಬ ಅನಗತ್ಯ ಗೊಂದಲ ಎಬ್ಬಿಸಲು ಮುಂದಾಗಿದ್ದರು. ಈ ಬಗ್ಗೆ ಪಕ್ಷದಿಂದ ಉಚ್ಛಾಟನೆಗೊಂಡಿರುವ ಸಿ.ಎನ್‌.ಅಕ್ಮಲ್‌ ಮತ್ತು ಅವರ ಸಹೋದರ ಅಜ್ಮಲ್‌ ( ಅವರು ಮಾಡಿರುವ ಆರೋಪಗಳು  ಸತ್ಯಕ್ಕೆ ದೂರ ಎಂದು ಹೇಳಿದರು.

ಕೆಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಅಲ್ಪಮತಗಳ ಅಂತರದಿಂದ ಸೋತಿದ್ದು, ಇದಕ್ಕೂ ಕೂಡ ಇವರೇ ಕಾರಣರಾಗಿದ್ದಾರೆ. ಅಲ್ಪಸಂಖ್ಯಾತರ ಹೆಸರು ಹೇಳಿಕೊಂಡು ಸುಖಾಸುಮ್ಮನೆ ಗೊಂದಲ ಉಂಟುಮಾಡುವುದು ಸರಿಯಲ್ಲ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಕಾರ್ಯದರ್ಶಿ ಶಿವಾನಂದಸ್ವಾಮಿ, ನಗರಸಭೆ ನೂತನ ಸದಸ್ಯರಾದ ಜಾವಿದ್‌, ಖಲಂದರ್‌, ಶಾದಾಬ್‌ ಅಲಂಖಾನ್‌, ಮುಖಂಡರಾದ ಮಲ್ಲೇಶಸ್ವಾಮಿ, ಹಿರೇಮಗಳೂರು ಪುಟ್ಟಸ್ವಾಮಿ ಉಪಸ್ಥಿತರಿದ್ದರು.

ಅಲ್ಪಸಂಖ್ಯಾತರ ಮುಖಂಡರ ಮೇಲೆ ದೌರ್ಜನ್ಯ: ಅಕ್ಮಲ್‌  : ಜಿಲ್ಲೆಯ ಕೆಲವು ಕಾಂಗ್ರೆಸ್‌ (Congress) ನಾಯಕರು ಅಲ್ಪಸಂಖ್ಯಾತ ಮುಖಂಡರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಕೆಪಿಸಿಸಿ (KPCC) ಕಿಸಾನ್‌ ಸೆಲ್‌ ಸಂಚಾಲಕ ಸಿ.ಎನ್‌.ಅಕ್ಮಲ್‌ ಆರೋಪಿಸಿದರು.  ಕಾಂಗ್ರೆಸ್‌ ಮುಖಂಡರಾದ ಡಾ. ಬಿ.ಎಲ್‌. ಶಂಕರ್‌, ಡಾ. ಡಿ.ಎಲ್‌. ವಿಜಯ್‌ಕುಮಾರ್‌, ಡಾ.ಅಂಶುಮಂತ್‌, ಬಿ.ಎಂ.ಸಂದೀಪ್‌ ಇವರು ಜಿಲ್ಲೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ದಮನ ಮಾಡುವ ಕುತಂತ್ರ ಮಾಡುತ್ತಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಈ ತಂಡ ಬಿಜೆಪಿಯ ‘ಬಿ’ ತಂಡವಾಗಿದೆ. ಪರೋಕ್ಷವಾಗಿ ಬಿಜೆಪಿ ಪಕ್ಷಕ್ಕೆ ಬೆಂಬಲ ವ್ಯಕ್ತಪಡಿಸುತ್ತಿದೆ. ಈ ಹಿಂದಿನ ಎಲ್ಲ ಚುನಾವಣೆಗಳ ಅಂಕಿಅಂಶಗಳನ್ನು ತೆಗೆದುಕೊಂಡರೆ ಈ ತಂಡದ ಕೊಡುಗೆ ಕಾಂಗ್ರೆಸ್‌ಗೆ ಶೂನ್ಯ ಎಂದರು.

ದಲಿತರು, ಅಲ್ಪಸಂಖ್ಯಾತರ ಮತಗಳನ್ನು ಪಡೆದು ಆ ಸಮುದಾಯದ ನಾಯಕರ ಮೇಲೆಯೇ ದಮನಕಾರಿ ನೀತಿಯನ್ನು ಅನುಸರಿಸುತ್ತಿದ್ದಾರೆ. ಅಲ್ಪಸಂಖ್ಯಾತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಅವರ ನಾಯಕತ್ವ ಮುಗಿಸಲು ಹೊರಟಿದ್ದಾರೆ. ತಕ್ಷಣ ರಾಜ್ಯ ಮಟ್ಟದ ನಾಯಕರು ಹಾಗೂ ಉಸ್ತುವಾರಿ ವಹಿಸಿರುವ ನಾಯಕರು ಇವರ ಮೇಲೆ ಶಿಸ್ತು ಕ್ರಮ ಕೈಗೊಂಡು ನ್ಯಾಯ ಒದಗಿಸಿಕೊಡಬೇಕು ಎಂದು ಮನವಿ ಮಾಡುತ್ತೇನೆ ಎಂದರು.

ಭಿನ್ನಮತ ಸ್ಫೋಟ :   ಕಾಂಗ್ರೆಸ್‌ (Congress) ಮುಖಂಡರ ವಿರುದ್ಧ ಪಕ್ಷದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಸೋಮವಾರ ನಡೆಯಿತು.  ಆತ್ಮಾವಲೋಕನ ಸಭೆಯಲ್ಲಿ (Meeting) ಪಕ್ಷದ ಕೆಲವು ಕಾರ್ಯಕರ್ತರು ಜಿಲ್ಲಾಧ್ಯಕ್ಷರು ಒಳಗೊಂಡಂತೆ ಅನೇಕ ಮುಖಂಡರ ವಿರುದ್ದ ಸಿಡಿದೆದ್ದ ಪರಿಣಾಮ ಸಭೆಯಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ವಿಧಾನ ಪರಿಷತ್‌ (MLC Election) ಹಾಗೂ ನಗರಸಭೆ ಚುನಾವಣೆಯಲ್ಲಿ ಪಕ್ಷ ಸೋಲಲು ಪಕ್ಷದ ಕೆಲವು ಮುಖಂಡರೇ ನೇರ ಕಾರಣ ಎಂದು ಯುವಕರ ಗುಂಪು ಆರೋಪಿಸಿತು. ಪಕ್ಷದ ಕಾರ್ಯಕರ್ತರನ್ನು ಸಮಾಧಾನ ಪಡಿಸಲು ಮುಖಂಡರು ಮುಂದಾದರೂ ಮಣಿಯದೆ ಅಸಮಾಧಾನ ವ್ಯಕ್ತಪಡಿಸಿದರು.

ಇನ್ನೊಂದು ಬಣ ಕಾಂಗ್ರೆಸ್‌ ಪಕ್ಷ ಅಲ್ಪಸಂಖ್ಯಾತರನ್ನು ಕಡಗಣಿಸಿದೆ, ಅನೇಕ ಮುಖಂಡರು ಬಿಜೆಪಿ (BJP) ಎಜೆಂಟರಂತೆ ಕೆಲಸ ಮಾಡಿ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ದೂರಿದರು.  ಸಿ.ಎನ್‌.ಅಕ್ಮಲ್‌ ಪಕ್ಷದಿಂದ ಉಚ್ಚಾಟನೆಗೊಳಿಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿ ಲಾಕ್‌ಡೌನ್‌ (Lockdown) ಸಂದರ್ಭದಲ್ಲಿ ಅಕ್ಮಲ್‌ ಪಕ್ಷದ ಬಾವುಟದೊಂದಿಗೆ ಆಹಾರದ ಕಿಟ್‌ ವಿತರಣೆ, ಸ್ಯಾನಿಟೈಜರ್‌ ಸಿಂಪಡಣೆ ಸೇರಿದಂತೆ ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡಿದ್ದಾರೆ. ಆದರೆ, ಚುನಾವಣೆಯಲ್ಲಿ (election) ಅವರಿಗೆ ಪಕ್ಷ ಯಾವುದೇ ಜವಾಬ್ದಾರಿ ನೀಡದೇ ಕಡೆಗಣಿಸಿದೆ ಎಂದು ಕಾರ್ಯಕರ್ತರು ಆರೋಪಿಸಿದರು.

ಕೆಲವೊಂದು ವಾರ್ಡ್‌ಗಳಲ್ಲಿ ಅಲ್ಪಸಂಖ್ಯಾತರನ್ನು ಕಡೆಗಣಿಸಿ ಟಿಕೆಟ್‌ ನೀಡಲಾಗಿದೆ. ಕಾಂಗ್ರೆಸ್‌ನಲ್ಲಿದ್ದು ಬಿಜೆಪಿ (BJP) ಹಾಗೂ ಆರ್‌ಎಸ್‌ಎಸ್‌ (RSS) ಪರವಾಗಿ ಕೆಲಸ ಮಾಡಲಾಗಿದೆ ಎಂದು ದೂಷಿಸಿದರು.

ಸಭೆಯಲ್ಲಿ ಗೊಂದಲ ಉಂಟಾಗಿದ್ದ ಸಂದರ್ಭದಲ್ಲಿ ಮುಖಂಡರು ಸಮಧಾನ ಪಡಿಸುವ ನಿಟ್ಟಿನಲ್ಲಿ ಪ್ರಯತ್ನ ಪಟ್ಟರೂ ಆರಂಭದಲ್ಲಿ ಕಾರ್ಯಕರ್ತರು ಸ್ಪಂದಿಸಲಿಲ್ಲ. ನಂತರದಲ್ಲಿ ಪರಿಸ್ಥಿತಿ ತಿಳಿಯಾಯ್ತು.

Latest Videos
Follow Us:
Download App:
  • android
  • ios