ರಾಮನಗರದಲ್ಲಿ 130ಕ್ಕೂ ಅಧಿಕ ಜಾನುವಾರಿಗೆ ಕಾಲುಬಾಯಿ ರೋಗ
* ಜಾನುವಾರುಗಳಲ್ಲಿ ಕಾಣಿಸಿಕೊಂಡ ಕಾಲುಬಾಯಿ ರೋಗ ಲಕ್ಷಣ
* ರಾಸುಗಳಿಗೆ ಚುಚ್ಚು ಮದ್ದು ಹಾಕಿದ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ
* ಜಾನುವಾರುಗಲಿಗೆ ಮುಂದುವರೆದ ಚಿಕಿತ್ಸೆ
ರಾಮನಗರ(ಜೂ.06): ಕೊರೋನಾ ಎರಡನೇ ಅಲೆ ಭೀತಿಯ ನಡುವೆಯೇ ರಾಮನಗರ ಜಿಲ್ಲೆಯಲ್ಲಿ ಕೆಲವೆಡೆ 130ಕ್ಕೂ ಅಧಿಕ ಜಾನುವಾರುಗಳಲ್ಲಿ ಕಾಲುಬಾಯಿ ಜ್ವರ ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.
ರಾಮನಗರ ತಾಲೂಕು ಬಿಡದಿ ಹೋಬಳಿಯ ಬೈರಮಂಗಲ, ಇಟ್ಟಮಡು, ವಡ್ಡರದೊಡ್ಡಿ, ಕೂಟಗಲ್ ಹೋಬಳಿಯ ಲಕ್ಷ್ಮೀಪುರ, ಚನ್ನಪಟ್ಟಣ ತಾಲೂಕಿನ ಸೋಗಾಲ ಹಾಗೂ ಕನಕಪುರ ತಾಲೂಕಿನ ಕೊಳ್ಳಿಗಾನಹಳ್ಳಿ ಸೇರಿದಂತೆ ಕೆಲ ಗ್ರಾಮಗಳಲ್ಲಿ ಜಾನುವಾರುಗಳಲ್ಲಿ ಕಾಲುಬಾಯಿ ರೋಗ ಲಕ್ಷಣ ಕಾಣಿಸಿಕೊಂಡಿವೆ.
ಗೋವುಗಳನ್ನು ಸಾವಿನ ಬಾಯಿಗೆ ದೂಡಿರುವುದು ಎಂಥ ಗೋರಕ್ಷಣೆ?: ಬಿಜೆಪಿ ಸರ್ಕಾರದ ವಿರುದ್ಧ HDK ಕಿಡಿ
ಜಿಲ್ಲೆಯಲ್ಲಿ ಸುಮಾರು 130 ರಿಂದ 135 ಜಾನುವಾರುಗಳು ಕಾಲುಬಾಯಿ ರೋಗಕ್ಕೆ ತುತ್ತಾಗಿವೆ. ಈ ಪ್ರಕರಣಗಳು ವರದಿಯಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ರಾಸುಗಳಿಗೆ ಚುಚ್ಚು ಮದ್ದು ಹಾಕಿದ್ದು, ಚಿಕಿತ್ಸೆ ಮುಂದುವರೆದಿದೆ.