ರಂಗಾಯಣ ನಿರ್ದೇಶಕರ ಹುದ್ದೆಗೆ 60ಕ್ಕೂ ಹೆಚ್ಚು ಅರ್ಜಿ!

ರಾಜ್ಯದಲ್ಲಿ ಮೈತ್ರಿ ಸರ್ಕಾರ ಪತನವಾಗಿ ಬಿಜೆಪಿ ಸರ್ಕಾರ ಅಧಿಕಾರ ಬಂದ ನಂತರ ರಂಗಾಯಣ ನಿರ್ದೇಶಕರನ್ನು ವಜಾ ಮಾಡಲಾಗಿತ್ತು. ಇದೀಗ ನಾಲ್ಕೂ ರಂಗಾಯಣಗಳಿಗೆ ನಿರ್ದೇಶಕರನ್ನು ನೇಮಿಸಲು ಕಾಲ ಸನ್ನಿಹಿತವಾಗಿದ್ದು, ಇನ್ನು ಎರಡು, ಮೂರು ದಿನಗಳಲ್ಲಿ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆಯಿದೆ.

More Than 60 Applications For Rangayana Director Post

ಮೈಸೂರು (ನ. 25): ರಾಜ್ಯದಲ್ಲಿ ಮೈತ್ರಿ ಸರ್ಕಾರ ಪತನವಾಗಿ ಬಿಜೆಪಿ ಸರ್ಕಾರ ಅಧಿಕಾರ ಬಂದ ನಂತರ ರಂಗಾಯಣ ನಿರ್ದೇಶಕರನ್ನು ವಜಾ ಮಾಡಲಾಗಿತ್ತು. ಇದೀಗ ನಾಲ್ಕೂ ರಂಗಾಯಣಗಳಿಗೆ ನಿರ್ದೇಶಕರನ್ನು ನೇಮಿಸಲು ಕಾಲ ಸನ್ನಿಹಿತವಾಗಿದ್ದು, ಇನ್ನು ಎರಡು, ಮೂರು ದಿನಗಳಲ್ಲಿ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆಯಿದೆ.

ಎರಡು ತಿಂಗಳ ಹಿಂದಷ್ಟೇ ಮೈಸೂರು ರಂಗಾಯಣ ನಿರ್ದೇಶಕಿ ಭಾಗೀರಥಿ ಬಾಯಿ ಕದಂ, ಶಿವಮೊಗ್ಗ ರಂಗಾಯಣ ನಿರ್ದೇಶಕ ಡಾ. ಗಣೇಶ್‌ ನೀನಾಸಂ ಅವರನ್ನು ಹುದ್ದೆಯಿಂದ ವಜಾಗೊಳಿಸಲಾಗಿತ್ತು. ನಂತರ ರಂಗಸಮಾಜ ಸದಸ್ಯರನ್ನು ತೆಗೆದು ಹಾಕಿ ಹೊಸದಾಗಿ 7 ಮಂದಿಯನ್ನು ನೇಮಿಸಿ ಸರ್ಕಾರ ಆದೇಶಿಸಿತ್ತು.

ಮತಯಾಚಿಸಲು ಹೋಗಿ ಮುಖಭಂಗ; ವಿಶ್ವನಾಥ್‌ಗೆ ಯುವಕರಿಂದ ಸಖತ್ ತರಾಟೆ!

ಈ 7 ಮಂದಿ ತಲಾ 3 ಮಂದಿಯ ಹೆಸರನ್ನು ನಿರ್ದೇಶಕರ ಹುದ್ದೆಗೆ ಸೂಚಿಸಲು ನಿರ್ಧರಿಸಿದ್ದಾರೆ. ಈಗಾಗಲೇ ವ್ಯಕ್ತಿಗಳ ಸೂಚನೆ ಪ್ರಕ್ರಿಯೆ ಅಂತಿಮ ಹಂತ ತಲುಪಿದ್ದು, ಈ ಪೈಕಿ ಮೈಸೂರು, ಶಿವಮೊಗ್ಗ, ಧಾರವಾಡ, ಕಲ್ಬುರ್ಗಿ ರಂಗಾಯಣಗಳಿಗೆ ಯಾರು ನೇಮಕವಾಗುತ್ತಾರೆ ಎಂಬುದಷ್ಟೇ ಗೊತ್ತಾಗಬೇಕಿದೆ.

60 ಮಂದಿ ಅರ್ಜಿ ಸಲ್ಲಿಕೆ?:

ರಂಗ ಸಮಾಜದ ಮೂಲಗಳ ಪ್ರಕಾರ ರಂಗಾಯಣ ನಿರ್ದೇಶಕರ ಹುದ್ದೆಗೆ ಬರೋಬ್ಬರಿ 60 ಅರ್ಜಿಗಳು ಸಲ್ಲಿಕೆಯಾಗಿರುವ ಮಾಹಿತಿ ಖಚಿತವಾಗಿದೆ. ಈ ನಡುವೆ ರಂಗ ಸಮಾಜ ಸದಸ್ಯರೂ ತಮ್ಮ ಆಪ್ತ ವಲಯದ ಕಲಾವಿದರ ಹೆಸರನ್ನು ಸೂಚಿಸಿದ್ದಾರೆ. ಅಲ್ಲದೆ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಕೂಡ ಮಧ್ಯಪ್ರವೇಶಿಸಿದ್ದು, ರಂಗಭೂಮಿಗೆ ಸಂಬಂಧಪಡದವರ ಹೆಸರನ್ನು ಸೂಚಿಸಿದೆ ಎಂಬ ಮಾಹಿತಿ ತಿಳಿದುಬಂದಿದೆ.

ಅರಸು ಕರ್ಮಭೂಮಿಯಲ್ಲಿ ಟಫ್‌ ಫೈಟ್‌; ವಿಶ್ವನಾಥ್‌ಗೆ ಪ್ರತಿಷ್ಠೆಯ ಪ್ರಶ್ನೆ

ಮೈಸೂರಿನ ರಂಗಾಯಣಕ್ಕೆ ಪ್ರಮುಖರ ಹೆಸರು

ಬಿ.ವಿ. ಕಾರಂತರು ಸ್ಥಾಪಿಸಿರುವ ರಂಗಾಯಣಕ್ಕೆ ನಿರ್ದೇಶಕರಾಗುವುದೆಂದರೆ ಅದೊಂದು ಪದೋನ್ನತಿ ಎಂಬ ಹಿರಿಮೆಯಿದೆ. ಹೀಗಾಗಿ ಮೈಸೂರು ರಂಗಾಯಣಕ್ಕೆ ನಿರ್ದೇಶಕರಾಗಲು ಹಲವು ಮಂದಿ ತುದಿಗಾಲಲ್ಲಿ ನಿಂತಿದ್ದಾರೆ. ಈ ಪೈಕಿ ಪ್ರಮುಖವಾಗಿ ನಟ ಮಂಡ್ಯ ರಮೇಶ್‌, ಲೇಖಕ ಅಡ್ಡಂಡ ಕಾರ್ಯಪ್ಪ, ಹಿರಿಯ ರಂಗಕರ್ಮಿ ಮಾಲತಿ ಸುಧೀರ್‌ ಹಾಗೂ ಕಲಾವಿದ ಮೈಮ್‌ ರಮೇಶ್‌ ಹೆಸರು ಕೇಳಿ ಬರುತ್ತಿದೆ. ಈ ಪೈಕಿ ಅಥವಾ ಅಚ್ಚರಿಯ ವ್ಯಕ್ತಿಗಳು ನೇಮಕವಾಗುವ ಸಂಭವವೂ ಇದೆ.

ರಂಗ ಸಮಾಜದ ಸದಸ್ಯರೆಲ್ಲರೂ ತಲಾ 3 ಮಂದಿಯ ಹೆಸರು ಸೂಚಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ನಿರ್ದೇಶಕ ಹುದ್ದೆಗೆ ನೇಮಕ ಪ್ರಕ್ರಿಯೆ ಅಂತಿಮ ಹಂತ ತಲುಪಿದ್ದು, ಸದ್ಯದಲ್ಲಿಯೇ ನಾವೇ ಸುದ್ದಿಗೋಷ್ಠಿ ನಡೆಸಿ ಹೆಸರು ಪ್ರಕಟಿಸುತ್ತೇವೆ.

-ಜೀವನ್‌ರಾಂ ಸುಳ್ಯ, ರಂಗ ಸಮಾಜದ ಸದಸ್ಯರು.

ನಾನು ರಂಗಾಯಣದಲ್ಲಿ 27 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದೇನೆ. ಮಂಗಳೂರು ರಂಗಾಯಣ ಆರಂಭವಾಗಿದ್ದರೆ ನನ್ನ ಹುಟ್ಟೂರಿನಲ್ಲಿ ಸೇವೆ ಸಲ್ಲಿಸಲು ಉತ್ಸುಕನಾಗಿದ್ದೆ. ಆದರೆ ಮೈಸೂರಿನಲ್ಲಿಯೇ ಕಲಾ ಸೇವೆ ಮಾಡಲು ಅವಕಾಶ ನೀಡಿದರೆ ರಂಗಾಯಣವನ್ನು ಬೆಳೆಸುತ್ತೇನೆ.

-ಮೈಮ್‌ ರಮೇಶ್‌, ರಂಗಾಯಣದ ನಿವೃತ್ತ ಕಲಾವಿದರು.

ರಾಜ್ಯದಲ್ಲಿ ಮೈತ್ರಿ ಸರ್ಕಾರ ಪತನವಾಗಿ ಬಿಜೆಪಿ ಸರ್ಕಾರ ಅಧಿಕಾರ ಬಂದ ನಂತರ ರಂಗಾಯಣ ನಿರ್ದೇಶಕರನ್ನು ವಜಾ ಮಾಡಲಾಗಿತ್ತು. ಇದೀಗ ನಾಲ್ಕೂ ರಂಗಾಯಣಗಳಿಗೆ ನಿರ್ದೇಶಕರನ್ನು ನೇಮಿಸಲು ಕಾಲ ಸನ್ನಿಹಿತವಾಗಿದ್ದು, ಇನ್ನು ಎರಡು, ಮೂರು ದಿನಗಳಲ್ಲಿ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆಯಿದೆ.

ಎರಡು ತಿಂಗಳ ಹಿಂದಷ್ಟೇ ಮೈಸೂರು ರಂಗಾಯಣ ನಿರ್ದೇಶಕಿ ಭಾಗೀರಥಿ ಬಾಯಿ ಕದಂ, ಶಿವಮೊಗ್ಗ ರಂಗಾಯಣ ನಿರ್ದೇಶಕ ಡಾ. ಗಣೇಶ್‌ ನೀನಾಸಂ ಅವರನ್ನು ಹುದ್ದೆಯಿಂದ ವಜಾಗೊಳಿಸಲಾಗಿತ್ತು. ನಂತರ ರಂಗಸಮಾಜ ಸದಸ್ಯರನ್ನು ತೆಗೆದು ಹಾಕಿ ಹೊಸದಾಗಿ 7 ಮಂದಿಯನ್ನು ನೇಮಿಸಿ ಸರ್ಕಾರ ಆದೇಶಿಸಿತ್ತು.

ಈ 7 ಮಂದಿ ತಲಾ 3 ಮಂದಿಯ ಹೆಸರನ್ನು ನಿರ್ದೇಶಕರ ಹುದ್ದೆಗೆ ಸೂಚಿಸಲು ನಿರ್ಧರಿಸಿದ್ದಾರೆ. ಈಗಾಗಲೇ ವ್ಯಕ್ತಿಗಳ ಸೂಚನೆ ಪ್ರಕ್ರಿಯೆ ಅಂತಿಮ ಹಂತ ತಲುಪಿದ್ದು, ಈ ಪೈಕಿ ಮೈಸೂರು, ಶಿವಮೊಗ್ಗ, ಧಾರವಾಡ, ಕಲ್ಬುರ್ಗಿ ರಂಗಾಯಣಗಳಿಗೆ ಯಾರು ನೇಮಕವಾಗುತ್ತಾರೆ ಎಂಬುದಷ್ಟೇ ಗೊತ್ತಾಗಬೇಕಿದೆ.

60 ಮಂದಿ ಅರ್ಜಿ ಸಲ್ಲಿಕೆ?:

ರಂಗ ಸಮಾಜದ ಮೂಲಗಳ ಪ್ರಕಾರ ರಂಗಾಯಣ ನಿರ್ದೇಶಕರ ಹುದ್ದೆಗೆ ಬರೋಬ್ಬರಿ 60 ಅರ್ಜಿಗಳು ಸಲ್ಲಿಕೆಯಾಗಿರುವ ಮಾಹಿತಿ ಖಚಿತವಾಗಿದೆ. ಈ ನಡುವೆ ರಂಗ ಸಮಾಜ ಸದಸ್ಯರೂ ತಮ್ಮ ಆಪ್ತ ವಲಯದ ಕಲಾವಿದರ ಹೆಸರನ್ನು ಸೂಚಿಸಿದ್ದಾರೆ. ಅಲ್ಲದೆ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಕೂಡ ಮಧ್ಯಪ್ರವೇಶಿಸಿದ್ದು, ರಂಗಭೂಮಿಗೆ ಸಂಬಂಧಪಡದವರ ಹೆಸರನ್ನು ಸೂಚಿಸಿದೆ ಎಂಬ ಮಾಹಿತಿ ತಿಳಿದುಬಂದಿದೆ.

Latest Videos
Follow Us:
Download App:
  • android
  • ios