ಬೆಂಗಳೂರು: ಕಲುಷಿತ ನೀರು ಕುಡಿದು 30ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ
ಅಪಾರ್ಟ್ಮೆಂಟ್ ಬಿಲ್ಡರ್ಸ್ ವಿರುದ್ಧ ಪರಪ್ಪನ ಆಗ್ರಹಾರ ಪೊಲೀಸ್ ಠಾಣೆಗೆ ದೂರು ನೀಡಿದ ಸಿಂಗಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ. ಕಲುಷಿತ ನೀರು ಸೇವನೆಯಿಂದ ಮಕ್ಕಳು ಅಸ್ವಸ್ಥರಾಗಿದ್ದಾರೆ ಅಂತ ದೂರಿನಲ್ಲಿ ಉಲ್ಲೇಖ

ಕಿರಣ್.ಕೆ.ಎನ್.ಏಷ್ಯಾನೆಟ್ ಸುವರ್ಣ ನ್ಯೂಸ್.ಬೆಂಗಳೂರು
ಬೆಂಗಳೂರು(ಜೂ.08): ಆಕಾಶೆತ್ತರದ ಆ ಅಪಾರ್ಟ್ಮೆಂಟ್ ನೋಡಿದ್ರೆ. ಇಲ್ಲಿರುವರೆಲ್ಲರದು ಐಷಾರಾಮಿ ಜೀವನ ಅಂತ ಎಂತವರಿಗೂ ಅನ್ನಿಸುತ್ತೆ. ಆದ್ರೆ ವಿಪರ್ಯಾಸ ಏನು ಅಂದ್ರೆ ಅದೇ ಅಪಾರ್ಟ್ಮೆಂಟ್ ನಲ್ಲಿ ಕಲುಷಿತ ನೀರು ಕುಡಿದು 132 ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾಗಿದ್ದು ರಾಜಧಾನಿ ಬೆಂಗಳೂರಿನ ಅಪಾರ್ಟ್ಮೆಂಟ್ ಗಳ ಕರಾಳ ಮುಖವನ್ನ ಅನಾವರಣ ಮಾಡಿದೆ..
ಈ ಅಪಾರ್ಟ್ಮೆಂಟ್ ನ ನೋಡಿದ್ರೆ ಎಂತವರಿಗೂ ಇಲ್ಲಿರುವರೆಲ್ಲ ಐಷಾರಾಮಿ ಜೀವನ ಮಾಡ್ತಾ ಇರ್ತಾರೆ ಅಂತಲೇ ಅನ್ನಿಸೋದು.ಆದ್ರೆ ಇಷ್ಟು ಐಷರಾಮಿಯಾಗಿ ಕಾಣಿಸುವ ಈ ಮಹಾವೀರ್ ರ್ಯಾಂಚಸ್ ನಲ್ಲಿ ಕಲುಷಿತ ನೀರು ಕುಡಿದು 120 ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾಗಿದ್ದಾರೆ ಎಂದ್ರೆ ನೀವೆಲ್ಲ ನಂಬಲೇಕು. ಹೌದು ಕಳೆದೆರಡು ದಿನಗಳಿಂದ ಕಲುಷಿತ ನೀರು ಕುಡಿದು ನಾಲ್ಕುಮಕ್ಕಳು ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ರೆ ಉಳಿದ ಮಕ್ಕಳು ವಾಂತಿ, ಜ್ವರ ದಿಂದ ಬಳಲುತ್ತಿದ್ದಾರೆ. ಶಾಲೆಗೆ ಹೋದ ಮಕ್ಕಳಿಗೆ ಶಾಲೆಯಲ್ಲೆ ಆನಾರೋಗ್ಯ ಕಾಣಿಸಿಕೊಂಡು ಮನೆಗೆ ವಾಪಸ್ಸಾಗುತ್ತಿದ್ದಾರೆ...
ರಾಯಚೂರು ಆಯ್ತು, ಈಗ ಕೊಪ್ಪಳದಲ್ಲಿ ಕಲುಷಿತ ನೀರು ಸೇವನೆಗೆ ಮಹಿಳೆ ಬಲಿ: 10 ಮಂದಿ ಅಸ್ವಸ್ಥ
ಮಹಾವೀರ್ ರಂಚಸ್ ಅಪಾರ್ಟ್ಮೆಂಟ್ ನಲ್ಲಿ ಸುಮಾರು ಐದನೂರಕ್ಕೂ ಹೆಚ್ಚು ಕುಟುಂಬಗಳು ವಾಸವಿವೆ. ಆದ್ರೆ ಇಲ್ಲಿಗೆ ನೀರು ಸರಬರಾಜಗುವ ಟ್ಯಾಂಕ್ ಗಳನ್ನ ಕಳೆದ ಐದಾರು ವರ್ಷಗಳಿಂದ ಕ್ಲೀನ್ ಮಾಡಿಲ್ಲ. ಈ ಬಗ್ಗೆ ಅಪಾರ್ಟ್ಮೆಂಟ್ ಆಡಳಿತ ವರ್ಗಕ್ಕೆ ಸಾಕಷ್ಡು ಬಾರಿದೂರುನೀಡಿದ್ರು ಇದರ ಬಗ್ಗೆ ಅಪಾರ್ಟ್ಮೆಂಟ್ ಆಡಳಿತ ಮಂಡಳಿ ತಲೆಕೆಡಿಸಿಕೊಂಡಿಲ್ಲ. ಹೀಗೆ ಎರಡು ದಿನಗಳಿಂದ ಮಕ್ಕಳಲ್ಲಿ ಹೆಚ್ಚಿನ ಆನಾರೋಗ್ಯ ಕಂಡುಬಂದ ಕಾರಣ, ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಮಕ್ಕಳನ್ನ ಪರೀಶಿಲನೆ ಮಾಡಿ ಆನಾರೋಗ್ಯಕ್ಕೆ ಕಲುಷಿತ ನೀರೇ ಕಾರಣ ಅಂತ ಪರಪ್ಪನ ಆಗ್ರಹಾರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸದ್ಯ ಅಪಾರ್ಟ್ಮೆಂಟ್ ಬ್ಯುಲ್ಡರ್ಸ್ ಮೇಲೆ ಪರಪ್ಪನ ಆಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸ್ರು ಆರೋಪಿಗಳ ಹುಡುಕಾಟ ಮಾಡ್ತಾ ಇದ್ದಾರೆ. ಆದ್ರೆ ನೂರಾರು ಮಕ್ಕಳ ಜೀವದ ಜೊತೆ ಚೆಲ್ಲಾಟ ಆಡುತ್ತಿರುವ ಬ್ಯುಲ್ಡರ್ಸ್ ಗೆ ಸರಿಯಾದ ಬುದ್ದಿ ಕಲಿಸಬೇಕಿದೆ.