ಬೆಂಗಳೂರು (ನ.25): ಕಾಲೇಜುಗಳು ಆರಂಭವಾಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ವಿದ್ಯಾರ್ಥಿಗಳು, ಬೋಧಕರು ಹಾಗೂ ಸಿಬ್ಬಂದಿಗೆ ಕೊರೋನಾ ಸೋಂಕು ಪರೀಕ್ಷೆ ಮುಂದುವರೆದಿದ್ದು, ಸೋಂಕಿತ ವಿದ್ಯಾರ್ಥಿಗಳ ಸಂಖ್ಯೆಯೂ ಏರುತ್ತಿದೆ.

ಮಂಗಳವಾರ ಬೆಂಗಳೂರಿನಲ್ಲಿ ಒಟ್ಟು 2,664 ಕೋವಿಡ್‌ ಪರೀಕ್ಷೆ ನಡೆಸಲಾಗಿತ್ತು. ಈ ಪೈಕಿ 27 ವಿದ್ಯಾರ್ಥಿಗಳು ಹಾಗೂ 8 ಶಿಕ್ಷಕರು ಮತ್ತು ಓರ್ವ ಸಿಬ್ಬಂದಿ ಸೇರಿದಂತೆ ಒಟ್ಟು 35 ಮಂದಿಗೆ ಸೋಂಕು ಇರುವುದು ದೃಢಪಟ್ಟಿದೆ. 

ಕೊರೋನಾ ವಾರಿಯರ್ಸ್‌ಗೆ ಇನ್ನೂ ಬಾರದ ಪ್ರೋತ್ಸಾಹಧನ ..

ಇದರೊಂದಿಗೆ ಕಾಲೇಜು ಆರಂಭವಾಗಿ ಇಲ್ಲಿಯವರಗೆ 143 ವಿದ್ಯಾರ್ಥಿಗಳು ಹಾಗೂ 59 ಸಿಬ್ಬಂದಿ ಸೇರಿದಂತೆ ಒಟ್ಟು 202 ಮಂದಿಗೆ ಕೊರೋನಾ ಹಬ್ಬಿದೆ.

ಉಳಿದಂತೆ ಕಾಲೇಜು ಆರಂಭವಾದ ಮೇಲೆ ಇಲ್ಲಿಯವರೆಗೆ ಬಳ್ಳಾರಿ ಜಿಲ್ಲೆಯಲ್ಲಿ 53, ಧಾರವಾಡ ಜಿಲ್ಲೆಯಲ್ಲಿ 11, ಉತ್ತರ ಕನ್ನಡ ಜಿಲ್ಲೆಯಲ್ಲಿ ಐವರಲ್ಲಿ ಸೋಂಕು ಕಾಣಿಸಿಕೊಂಡಿದೆ.