Asianet Suvarna News Asianet Suvarna News

ಪ್ರಯೋಗದ ಹಂತದ ಔಷಧವನ್ನೂ ಕೊರೋನಾ ರೋಗಿಗೆ ನೀಡಲು ಒಪ್ಪಿಗೆ!

ಪ್ರಯೋಗದ ಹಂತದ ಔಷಧವನ್ನೂ ಕೊರೋನಾ ರೋಗಿಗೆ ನೀಡಲು ಒಪ್ಪಿಗೆ| ನಿಯಮಗಳಿಗೆ ತಿದ್ದುಪಡಿ ಮಾಡಲು ಮುಂದಾದ ಕೇಂದ್ರ ಆರೋಗ್ಯ ಇಲಾಖೆ| ಮಾರಾಟಕ್ಕೆ ಅನುಮೋದನೆ ಪಡೆಯದಿರುವ ಔಷಧವನ್ನು ಮಾನವೀಯತೆಯ ದೃಷ್ಟಿಯಿಂದ ಬಳಕೆ

Centre Plans Compassionate Use Of Under Trial Drugs For Severe Coronavirrus Cases
Author
Bangalore, First Published Jun 9, 2020, 11:00 AM IST | Last Updated Jun 9, 2020, 11:49 AM IST

ನವದೆಹಲಿ(ಜೂ.09): ಇನ್ನೂ ಪ್ರಯೋಗದ ಹಂತದಲ್ಲಿರುವ ಔಷಧವನ್ನೂ ಕೂಡ ಅತ್ಯಂತ ಗಂಭೀರ ಸ್ಥಿತಿಯಲ್ಲಿರುವ ಕೊರೋನಾ ರೋಗಿಗಳಿಗೆ ನೀಡಲು ಅನುಕೂಲವಾಗುವಂತೆ ನಿಯಮಗಳಿಗೆ ತಿದ್ದುಪಡಿ ಮಾಡಲು ಕೇಂದ್ರ ಆರೋಗ್ಯ ಇಲಾಖೆ ಮುಂದಾಗಿದೆ.

ಈ ಸಂಬಂಧ ಕರಡು ಅಧಿಸೂಚನೆ ಹೊರಡಿಸಿದ್ದು, ಜಗತ್ತಿನ ಯಾವುದೇ ಭಾಗದಲ್ಲಿ ಕ್ಲಿನಿಕಲ್‌ ಟ್ರಯಲ್‌-3ನೇ ಹಂತದಲ್ಲಿರುವ (ಮನುಷ್ಯರ ಮೇಲೆ ಪ್ರಯೋಗ), ಆದರೆ ಇನ್ನೂ ಮಾರಾಟಕ್ಕೆ ಅನುಮೋದನೆ ಪಡೆಯದಿರುವ ಔಷಧವನ್ನು ಮಾನವೀಯತೆಯ ದೃಷ್ಟಿಯಿಂದ ಗಂಭೀರ ಅನಾರೋಗ್ಯಕ್ಕೆ ಒಳಗಾಗಿರುವ ರೋಗಿಗಳಿಗೆ ನೀಡಬಹುದು ಎಂದು ಅದರಲ್ಲಿ ಹೇಳಲಾಗಿದೆ. ಇದಕ್ಕೆ ಆಕ್ಷೇಪಣೆ ಆಹ್ವಾನಿಸಲಾಗಿದ್ದು, ಇನ್ನು 15 ದಿನದಲ್ಲಿ ಅಂತಿಮ ಆದೇಶ ಪ್ರಕಟವಾಗುವ ಸಾಧ್ಯತೆಯಿದೆ.

ಮರದಿಂದ ಸ್ಯಾನಿಟೈಸರ್ ಯಂತ್ರ ಆವಿಷ್ಕಾರ; 9ರ ಬಾಲಕನಿಗೆ ಕೀನ್ಯ ಅಧ್ಯಕ್ಷನ ಪುರಸ್ಕಾರ!

ಆದರೆ, ಅಂತಿಮ ಅನುಮೋದನೆ ಪಡೆಯದಿರುವ ಇಂತಹ ಔಷಧಗಳನ್ನು ರೋಗಿಗೆ ನೀಡಲು ಆಸ್ಪತ್ರೆ ಹಾಗೂ ಔಷಧ ತಯಾರಕರು ರೋಗಿಯಿಂದ ಅಥವಾ ರೋಗಿಯ ಸಂಬಂಧಿಯಿಂದ ಲಿಖಿತ ಅನುಮತಿ ಪಡೆದಿರಬೇಕು. ನಂತರ ರೋಗಿಗೆ ಈ ಔಷಧ ನೀಡಲು ಆಸ್ಪತ್ರೆಯ ನೈತಿಕ ಸಮಿತಿಯಿಂದ ಹಾಗೂ ಹೊಸ ಔಷಧ ತಯಾರಿಸಲು ಅನುಮತಿ ನೀಡುವ ಕೇಂದ್ರ ಪರವಾನಗಿ ಪ್ರಾಧಿಕಾರದಿಂದ ಒಪ್ಪಿಗೆ ಪಡೆದಿರಬೇಕು. ಈ ಅನುಮತಿಗಳು ದೊರೆತ ಮೇಲೆ ಆ ರೋಗಿಗೆ ಮಾತ್ರ ಔಷಧವನ್ನು ನೀಡಬೇಕು. ಬೇರೆಲ್ಲೂ ಈ ಔಷಧವನ್ನು ಮಾರಾಟ ಮಾಡುವಂತಿಲ್ಲ.

Latest Videos
Follow Us:
Download App:
  • android
  • ios