ತುಮಕೂರು : ಕೆಲ ತಿಂಗಳ ಹಿಂದಷ್ಟೇ ಚಾಮರಾಜನಗರದಲ್ಲಿ ನಡೆದ ಪ್ರಸಾದ ದುರಂತ ಮಾಸುವ ಮುನ್ನ ಇದೀಗ ತುಮಕೂರಿನಲ್ಲಿ ಮತ್ತೊಂದು ದುರಂತವಾಗಿದೆ. ಹರಿಸೇವೆ ಪ್ರಸಾದ ಸೇವಿಸಿ ಓರ್ವ ಬಾಲಕ ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾದ ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ನಿಡಗಲ್ಲು ವೀರಭಧ್ರ ಸ್ವಾಮಿ ದೇವಾಲಯದಲ್ಲಿ ನಡೆದಿದೆ. 

"

ದೇವರ ಪ್ರಸಾದ ಸೇವಿಸಿ 45 ಭಕ್ತರು ಅ​ಸ್ವಸ್ಥ

ಸೋಮವಾರ ದೇವಾಲಯಕ್ಕೆ ತೆರಳಿದ್ದ ಶಿರಾ ಮೂಲದ ಭಕ್ತರು ಇಲ್ಲಿ ನೀರಿನ ಕೊರತೆ ಇರುವ ಕಾರಣದಿಂದ ಇಲ್ಲಿರುವ ತೊಟ್ಟಿಯ ನೀರನ್ನೇ ಬಳಸಿ ಅಡುಗೆ ತಯಾರಿಸಿದ್ದರು. 

ಚಿಂತಾಮಣಿ ವಿಷ ಪ್ರಸಾದದಲ್ಲೂ ವಿಷಕನ್ಯೆ ಕೈವಾಡ?

ಊಟ ಸೇವಿಸಿದ ಕೆಲ ಹೊತ್ತಿನಲ್ಲಿ ಭಕ್ತರಿಗೆ ವಾಂತಿ ಭೇದಿ ಆರಂಭವಾಗಿದ್ದು, ತೊಟ್ಟಿ ನೀರಿನ ಅಶುದ್ಧತೆಯಿಂದಲೇ ಸಮಸ್ಯೆಯಾಗಿರಬಹುದು ಎಂದು ಶಂಕಿಸಲಾಗಿದೆ.  

ಅಸ್ವಸ್ಥ ಭಕ್ತರನ್ನು ಶಿರಾ ಆಸ್ಪತ್ರೆಗೆ ದಾಖಲಿಸಲಾಗಿದ್ದು,  11 ವರ್ಷದ ಬಾಲಕನೋರ್ವ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ.