ಹರಪನಹಳ್ಳಿ(ಡಿ.16): ತಾಲೂಕಿನ ಹಲುವಾಗಲು ಗ್ರಾಪಂ ವ್ಯಾಪ್ತಿಯ ಒಳತಾಂಡಾದಲ್ಲಿ 100ಕ್ಕೂ ಹೆಚ್ಚು ಕಾಂಗ್ರೆಸ್‌ ಕಾರ್ಯಕರ್ತರು, ಮುಖಂಡರು ಬಿಜೆಪಿ ಸೇರ್ಪಡೆಗೊಂಡರು.

ಡಾ. ಕಠಾರಿ ನಾಯ್ಕ್‌ ಹಾಗೂ ಮಾಜಿ ಗ್ರಾಪಂ ಸದಸ್ಯೆ ಶಾರದಾ ಬಾಯಿ, ರಾಜು ನಾಯ್ಕ್‌, ಮಲತೇಶ್‌ ಕೃಷ್ಣಮುರ್ತಿ, ತಿರುಕನಾಯ್ಕ್‌, ಲೋಕೇಶ್‌ ನಾಯ್ಕ್‌ ನೇತೃತ್ವದಲ್ಲಿ ಮಂಡಲದ ಬಿಜೆಪಿ ಅಧ್ಯಕ್ಷ ಸತ್ತೂರು ಹಾಲೇಶ್‌ ಅವರ ಸಮ್ಮುಖದಲ್ಲಿ ಸೇರ್ಪಡೆಗೊಂಡರು.

30 ವರ್ಷಗಳಿಂದ ಚುನಾವಣೆಯೇ ನಡೆಯದ ಈ ಊರಲ್ಲಿ ಭರ್ಜರಿ ಫೈಟ್‌ಗೆ ತಯಾರಿ

ತಾಲೂಕು ಬಿಜೆಪಿ ಅಧ್ಯಕ್ಷ ಸತ್ತೂರು ಹಾಲೇಶ್‌ ಅವರು ಪಕ್ಷಕ್ಕೆ ಬಂದ ಕಾಂಗ್ರೆಸ್‌ ಮುಖಂಡರಿಗೆ ಬಿಜೆಪಿ ಶಾಲು ಹಾಕಿ ಧ್ವಜ ಹಿಡಿಸಿ ಅಧಿಕೃತವಾಗಿ ಪಕ್ಷಕ್ಕೆ ಬರಮಾಡಿಕೊಂಡರು. ಪಕ್ಷದ ಹಿರಿಯ ಮುಖಂಡರಾದ ಎಂ.ಪಿ. ನಾಯ್ಕ್‌, ಡಾ. ಮಲಕಪ್ಪ ಅಧಿಕಾರ, ನಿಟ್ಟೂರು ಸಣ್ಣ ಹಾಲಪ್ಪ, ತಾಪಂ ಉಪಾಧ್ಯಕ್ಷ ಮಂಜ್ಯಾ ನಾಯ್ಕ್‌, ಪ್ರಧಾನ ಕಾರ್ಯದರ್ಶಿ ಉದಯಕುಮಾರ, ಒಬಿಸಿ ಮೋರ್ಚಾ ಅಧ್ಯಕ್ಷ ಹಲುವಾಗಲು ದ್ಯಾಮಣ್ಣ, ವೀರಭದ್ರಪ್ಪ ಗ್ರಾಮ ಘಟಕದ ಅಧ್ಯಕ್ಷ ಬಸವರಾಜ್‌ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.