ಸುಮಾರು 30 ವರ್ಷದಿಂದ ಚುನಾವಣೆಯೇ ನಡೆಯದ ಈ ಊರಲ್ಲಿ ಇದೀಗ ಚುನಾವಣೆ ನಡೆಯುತ್ತಿದೆ.  ಲೋಕಲ್ ಫೈಟ್ ರಂಗೇರಿದೆ. 

ಬಳ್ಳಾರಿ (ಡಿ.15):  30 ವರ್ಷಗಳಿಂದ ಗ್ರಾಮ ಪಂಚಾಯತಿ ಚುನವಣೆಯೇ ನಡೆಯದ ಗ್ರಾಮದಲ್ಲಿ ಲೋಕಲ್ ಫೈಟ್‌ಗೆ ಭರ್ಜರಿ ತಯಾರಿ ನಡೆದಿದೆ.

ಬಳ್ಳಾರಿ ತಾಲೂಕಿನ ಕಪ್ಪಗಲ್ಲು ಗ್ರಾಮ ಪಂಚಾಯಿತಿಗೆ 30 ವರ್ಷಗಳ ಬಳಿಕ ಚುನಾವಣೆ ಮೊದಲ ಬಾರಿಗೆ ಚುನಾವಣೆ ನಡೆಯುತ್ತಿದೆ. ಇಷ್ಟು ವರ್ಷಗಳ ಕಾಲ ಇಲ್ಲಿ ಯಾವುದೇ ಚುನಾವಣೆ ನಡೆದಿರಲಿಲ್ಲ. 

6 ಸಾವಿರ ಮತದಾರರು, 19 ಗ್ರಾಮ ಪಂಚಾಯತಿ ಸದಸ್ಯ ಸ್ಥಾನಗಳನ್ನ ಹೊಂದಿರುವ ಕಪ್ಪಗಲ್ಲು ಪಂಚಾಯತಿಯಲ್ಲಿ ಇದೀಗ 30 ವರ್ಷಗಳ ಕಾಲ ಚುನಾವಣೆ ನಡೆಯುತ್ತಿದೆ. 

ಸಿಂಧೂನೂರು: ಗ್ರಾಮ ಎಲೆಕ್ಷನ್‌ನಲ್ಲಿ ಸ್ಥಾನ ಹರಾಜು, 9 ಜನರ ವಿರುದ್ಧ ಕೇಸ್ ಬುಕ್

ಇಲ್ಲಿ ಸತತ 30 ವರ್ಷಗಳಿಂದ 19 ಸದಸ್ಯರನ್ನ ಅವಿರೋಧವಾಗಿ ಆಯ್ಕೆ ಮಾಡಿಕೊಂಡು ಬರಲಾಗುತಿತ್ತು. ಆದರೆ ಮೊದಲ ಬಾರಿಗೆ ಇದೀಗ ಇಲ್ಲಿ ಚುನಾವಣೆ ನಡೆಸಲು ಗ್ರಾಮಸ್ಥರು ಸಜ್ಜಾಗಿದ್ದಾರೆ. ಎಲ್ಲ ಸಮುದಾಯದ ಮುಖಂಡರು ಹಾಗೂ ಗ್ರಾಮದ ಹಿರಿಯರು ಕುಳಿತು ಒಮ್ಮತ ದಿಂದ ಸದಸ್ಯರ ಆಯ್ಕೆ ಮಾಡುತ್ತಿದ್ದರು. ಆದರೆ ಈಗ 30 ವರ್ಷಗಳ‌‌ ನಡೆಗೆ ಬ್ರೇಕ್ ಬಿದ್ದಿದೆ.

 ಕೆಲವರ ಅಧಿಕಾರ ದಾಹ ಹಾಗೂ ಗ್ರಾಮದ ಯುವಕರ ರಾಜಕೀಯ ಬಯಕೆಯಿಂದ ಅವಿರೋಧ ಆಯ್ಕೆಗೆ ಬ್ರೇಕ್ ಬಿದ್ದಿದೆ. ಇಷ್ಟು ದಿನ ಚುನಾವಣೆ ನಡೆಯದಿದ್ದರೂ ಸುಸಜ್ಜಿತ ರಸ್ತೆ, ಕುಡಿಯೋ ನೀರು, ಒಳ ಚರಂಡಿ ಸೇರಿ ಎಲ್ಲ ಸೌಲಭ್ಯಗಳನ್ನ ಮಾಡಲಾಗಿತ್ತು‌. ಮೇಲಾಗಿ ಗ್ರಾಮದಲ್ಲಿ ರಾಜಕೀಯ ಮೇಲಾಟವಿಲ್ಲದೇ ಎಲ್ಲರೂ ಒಗ್ಗಟ್ಟಾಗಿ ಕಾರ್ಯನಿರ್ವಹಿಸಿಕೊಂಡು ಹೋಗುತ್ತಿದ್ದರು. 

ಆದರೆ ಈ ಬಾರಿ 30 ನಾಮಪತ್ರ ಸಲ್ಲಿಕೆಯಾಗಿದ್ದು, ಇಲ್ಲಿಯೂ ಈ ಬಾರಿ ಚುನಾವಣೆ ಕಾವು ರಂಗೇರಿದೆ.