Asianet Suvarna News Asianet Suvarna News

ಬೆಂಗ್ಳೂರಲ್ಲಿ ವಾಡಿಕೆಗಿಂತ ಹೆಚ್ಚು ವರ್ಷಧಾರೆ..!

*  ಅಕ್ಟೋಬರ್‌ನ 15 ದಿನದಲ್ಲೇ 281.6 ಮಿ.ಮೀ. ಮಳೆ
*  ಇದು ವಾಡಿಕೆಗಿಂತ ಶೇ.60ರ ಷ್ಟುಹೆಚ್ಚು
*  2014ರ ಬಳಿಕ ಅಧಿಕ ಮಳೆ
 

More Rain Than Usual in Bengaluru grg
Author
Bengaluru, First Published Oct 17, 2021, 8:04 AM IST
  • Facebook
  • Twitter
  • Whatsapp

ಬೆಂಗಳೂರು(ಅ.17): ನಗರದಲ್ಲಿ ನಾಲ್ಕು ವರ್ಷದ ಬಳಿಕ ಇಡೀ ಅಕ್ಟೋಬರ್‌ ತಿಂಗಳಲ್ಲಿ ಸುರಿಯುವುದಕ್ಕಿಂತ ಹೆಚ್ಚು ಮಳೆ ಕೇವಲ ಕಳೆದ ಹದಿನೈದು ದಿನದಲ್ಲಿ ಸುರಿದಿದೆ. ಬಂಗಾಲಕೊಲ್ಲಿ, ಅರಬ್ಬಿ ಸಮುದ್ರದಲ್ಲಿ(Arabian Sea)ಮಳೆಗೆ ಕಾರಣವಾಗುವ ಹವಾಮಾನ ವಿದ್ಯಮಾನಗಳು ಮತ್ತು ಮುಂಗಾರು ಮಾರುತ ಸಕ್ರಿಯವಾದ ಪರಿಣಾಮ ನಗರದಲ್ಲಿ(Bengaluru) ಭರ್ಜರಿಯಾಗಿ ಮಳೆ(Rain) ಸುರಿದಿದೆ.

ಭಾರತೀಯ ಹವಾಮಾನ ಇಲಾಖೆಯ(Indian Meteorological Department) ನಗರದ ಮಳೆ ಮಾಪನ ಕೇಂದ್ರದಲ್ಲಿ 15 ದಿನಗಳ ಅವಧಿಯಲ್ಲಿ 281.6 ಮಿ.ಮೀ. ಮಳೆ ದಾಖಲಾಗಿದೆ. ಈ ಕೇಂದ್ರದ ವಾಡಿಕೆಯ ಮಳೆ 170.6 ಮಿ.ಮೀ. ಅದೇ ರೀತಿ ಎಚ್‌ಎಎಲ್‌ ವಿಮಾನ ನಿಲ್ದಾಣದ(HAL Airport) ಮಾಪನ ಕೇಂದ್ರದಲ್ಲಿ 276.5 ಮಿಮೀ ಮಳೆ ಸುರಿದಿದೆ. ಇಲ್ಲಿನ ವಾಡಿಕೆಯ ಮಳೆ 166.6 ಮಿಮೀ ಮಳೆ. ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ(Kempegowda International Airport) ಅತಿ ಹೆಚ್ಚು 284.4 ಮಿ.ಮೀ. ಮಳೆ ಬಿದ್ದಿದೆ. ಇದು ಇತ್ತೀಚಿನ ಮಳೆ ಮಾಪನ ಕೇಂದ್ರವಾಗಿರುವ ಕಾರಣ ಇಲ್ಲಿನ ವಾಡಿಕೆ ಮಳೆಯನ್ನು ಗುರುತಿಸಲಾಗಿಲ್ಲ. ಒಟ್ಟಾರೆ ನಗರದಲ್ಲಿ ಅಕ್ಟೋಬರ್‌ ತಿಂಗಳ ವಾಡಿಕೆಯ ಮಳೆಗಿಂತ ಹೆಚ್ಚು ಕಡಿಮೆ ಶೇ.60ರಷ್ಟು ಹೆಚ್ಚು ಮಳೆ ಸುರಿದಿದೆ.

Bengaluru ನಿಲ್ಲದ ವರುಣನ ಆರ್ಭಟ, ಹೊಳೆಯಂತಾಗಿವೆ ರಸ್ತೆಗಳು, ವಾಹನ ಸವಾರರ ಪರದಾಟ

ಅಕ್ಟೋಬರ್‌ 12ರಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆ ಕೇಂದ್ರದಲ್ಲಿ ದಾಖಲೆಯ(Record) 178 ಮಿ.ಮೀ. ಮಳೆಯಾಗಿತ್ತು. ಅಕ್ಟೋಬರ್‌ 16ರಂದು ಎಚ್‌ಎಎಲ್‌ ನಿಲ್ದಾಣದಲ್ಲಿ 60 ಮಿಮೀ ಮಳೆಯಾಗಿದೆ. ಕಳೆದ 15 ದಿನದಲ್ಲಿ ನಗರದಲ್ಲಿ ಹೆಚ್ಚಿನ ದಿನಗಳಲ್ಲಿ ಮಳೆ ಸುರಿದಿದೆ. ಸದ್ಯದ ಹವಾಮಾನ ಮುನ್ಸೂಚನೆಯ ಪ್ರಕಾರ ಮುಂದಿನ ವಾರ ನಗರದಲ್ಲಿ ಮಳೆಯ ಪ್ರಮಾಣ ಕಡಿಮೆ ಆಗಲಿದೆ. ಹಿಂಗಾರು ಮಾರುತಗಳಿಂದ ಅಕ್ಟೋಬರ್‌ ಕೊನೆಯ ವಾರದ ಹೊತ್ತಿಗೆ ನಗರದಲ್ಲಿ ಮಳೆ ಆಗಬಹುದು ಎಂದು ಹವಾಮಾನ ತಜ್ಞರು ಅಭಿಪ್ರಾಯ ಪಡುತ್ತಾರೆ.

ನಗರದಲ್ಲಿ ಜೂನ್‌ನಿಂದ ಸೆಪ್ಟೆಂಬರ್‌ ತನಕ ನಗರದಲ್ಲಿ ವಾಡಿಕೆಯ ಮಳೆಯಾಗಿದೆ. ಸಾಮಾನ್ಯವಾಗಿ ಸೆಪ್ಟೆಂಬರ್‌, ಅಕ್ಟೋಬರ್‌ನಲ್ಲಿ ಹೆಚ್ಚು ಮಳೆಯಾಗುತ್ತದೆ, ಆದರೆ ಈ ಬಾರಿ ಅಕ್ಟೋಬರ್‌ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ನಗರದಲ್ಲಿ 2005ರ ಅಕ್ಟೋಬರ್‌ನಲ್ಲಿ ದಾಖಲೆಯ 605.6 ಮಿಮೀ ಮಳೆಯಾಗಿದೆ. 2014ರ ಅಕ್ಟೋಬರ್‌ನಲ್ಲಿ 343.8 ಮಿಮೀ ಹಾಗೂ 2017ರ ಅಕ್ಟೋಬರ್‌ನಲ್ಲಿ 385.7 ಮಿಮೀ ಮಳೆಯಾಗಿತ್ತು ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
 

Follow Us:
Download App:
  • android
  • ios