‘ಅಂತರ ಬೇಸಾಯದಿಂದ ಅಧಿಕ ಲಾಭ’
ತೆಂಗಿನ ತೋಟದಲ್ಲಿ ಮೆಣಸು, ಅರಿಶಿನ, ಶುಂಠಿ, ಏಲಕ್ಕಿ, ಲವಂಗ ಸೇರಿದಂತೆ ಹಲವಾರು ಅಂತರ ಬೆಳೆಗಳ ಬೇಸಾಯದಿಂದ ರೈತರ ಆರ್ಥಿಕ ಲಾಭ 10ರಷ್ಟುಹೆಚ್ಚಾಗಲಿದೆ ಎಂದು ತಿಪಟೂರು ಕೆವಿಕೆ ವಿಜ್ಞಾನಿ ಗೋವಿಂದೇಗೌಡ ತಿಳಿಸಿದ್ದಾರೆ.
ಕುಣಿಗಲ್ : ತೆಂಗಿನ ತೋಟದಲ್ಲಿ ಮೆಣಸು, ಅರಿಶಿನ, ಶುಂಠಿ, ಏಲಕ್ಕಿ, ಲವಂಗ ಸೇರಿದಂತೆ ಹಲವಾರು ಅಂತರ ಬೆಳೆಗಳ ಬೇಸಾಯದಿಂದ ರೈತರ ಆರ್ಥಿಕ ಲಾಭ 10ರಷ್ಟುಹೆಚ್ಚಾಗಲಿದೆ ಎಂದು ತಿಪಟೂರು ಕೆವಿಕೆ ವಿಜ್ಞಾನಿ ಗೋವಿಂದೇಗೌಡ ತಿಳಿಸಿದ್ದಾರೆ.
ತಾಲೂಕಿನ ಅಮೃತೂರು ಹೋಬಳಿ ಆಲ್ಗೆರೆ ಚನ್ನಪ್ಪ ಅವರ ತೋಟದಲ್ಲಿ ಕುಣಿಗಲ್ ತೆಂಗು ಉತ್ಪಾದಕರ ಕಂಪನಿ ವತಿಯಿಂದ ಏರ್ಪಡಿಸಿದ್ದ ತೆಂಗಿನಲ್ಲಿ ಹೆಚ್ಚುವರಿ ಉತ್ಪಾದನೆ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ತೆಂಗು ಬೆಲೆ ಕುಸಿತದಿಂದ ರೈತರ ಆರ್ಥಿಕ ನಷ್ಟಉಂಟಾಗುತ್ತಿದೆ. ಈ ಸಂದರ್ಭದಲ್ಲಿ ಆಗುವ ಅವಘಡಗಳನ್ನು ತಡೆಯಲು ಅಂತರ ಬೆಳೆ ಪದ್ಧತಿ ಬಹು ಉಪಯೋಗವಾಗುತ್ತದೆ. ತೆಂಗಿನ ತೋಟದಲ್ಲಿ ಕೋಕೋ, ಶುಂಠಿ, ಮೆಣಸು ಸೇರಿದಂತೆ ಮಸಾಲೆ ಪದಾರ್ಥಗಳ ಜೊತೆಗೆ ಹುರುಳಿ, ಅವರೇ ಹಾಗೂ ದ್ವಿದಳ ಧಾನ್ಯದ ಬೆಳೆಗಳನ್ನು ಬೆಳೆಯಲು ಸೂಕ್ತವಾದ ವಾತಾವರಣ ಇದೆ ಎಂದು ರೈತರಿಗೆ ಸಲಹೆ ನೀಡಿದರು.
Karnataka Budget 2023-24: ರೈತರ ಆರ್ಥಿಕ ಸ್ಥಿತಿ ಸುಧಾರಣೆಗೆ ಒತ್ತು; ಭೂ ಸಿರಿ ನೂತನ ಯೋಜನೆ ಘೋಷಣೆ
ತೆಂಗು ಕಂಪನಿಯ ಅಧ್ಯಕ್ಷ ಡಾ.ಕೆ.ನಾರಾಯಣಗೌಡ ಮಾತನಾಡಿ, ವಿದೇಶಿ ಪಾನೀಯಗಳಿಂದ ಮಾನವನ ದೇಹದ ಮೇಲೆ ಅಡ್ಡ ಪರಿಣಾಮಗಳು ಉಂಟಾಗುತ್ತವೆ. ಅಂತಹ ಕ್ರಿಮಿನಾಶಕ ಪದಾರ್ಥಗಳಿಂದ ದೂರ ಮಾಡಿ ದೇಹಕ್ಕೆ ಬೇಕಾದ ಶಕ್ತಿ ಹಾಗೂ ಚೈತನ್ಯ ನೀಡುವ ಎಳನೀರನ್ನು ಸೇವಿಸಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ನಬಾರ್ಡ್ ಅಧಿಕಾರಿಯಾದ ಕೀರ್ತಿಪ್ರಭ, ಕೆವಿಕೆ ವಿಜ್ಞಾನಿಗಳಾದ ಡಾ. ಮನೋಜ್ ಹಾಗೂ ನಿತ್ಯಶ್ರೀ, ತೆಂಗು ಅಭಿವೃದ್ಧಿ ಮಂಡಳಿಯ ಅಧಿಕಾರಿ ಕಿರಣ್ ಕುಮಾರ್, ಯೂನಿಯನ್ ಬ್ಯಾಂಕ್ ನ ಮುಖ್ಯ ವ್ಯವಸ್ಥಾಪಕರಾದ ಮಾರುತೇಶ್ ಹಾಗೂ ವಿಷ್ಣು ಚೈತನ್ಯ ಮಾತನಾಡಿದರು. ಈ ಸಂದರ್ಭದಲ್ಲಿ ಕಂಪನಿಯ ಸಿಓ ಪರಮಶಿವಯ್ಯ, ನಿರ್ದೇಶಕ ಬಚ್ಚೇಗೌಡ, ಫೆಡರೇಶನ್ ಅಧ್ಯಕ್ಷ ಆಲ್ಗೆರೆ ಚೆನ್ನಪ್ಪ ಸೇರಿದಂತೆ ಹಲವಾರು ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ತೋಟಗಾರಿಕಾ ಬೆಳೆಗಳ ಮೌಲ್ಯವರ್ಧನೆಗೆ ಆದ್ಯತೆ
ಬೆಂಗಳೂರು (ಫೆ.17): ತೋಟಗಾರಿಕ ಬೆಳೆಗಳಿಗೆ ಹೆಚ್ಚಿನ ಉತ್ತೇಜನ ನೀಡಲು ಈ ಬಾರಿಯ ಬಜೆಟ್ ನಲ್ಲಿ ಹಲವು ಉಪಕ್ರಮಗಳನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಘೋಷಿಸಿದ್ದಾರೆ. ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ತೋಟಗಾರಿಕೆ ಮಹಾವಿದ್ಯಾಲಯ ಸ್ಥಾಪನೆ ಮಾಡೋದಾಗಿಯೂ ಬಜೆಟ್ ನಲ್ಲಿ ಘೋಷಣೆ ಮಾಡಲಾಗಿದೆ. ರಾಜ್ಯದ 26.21 ಲಕ್ಷ ಹೆಕ್ಟೇರ್ ವಿಸ್ತೀರ್ಣದ ಪ್ರದೇಶದಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯಲಾಗುತ್ತದೆ. ಇದರಿಂದ 66, 263 ಕೋಟಿ ರೂ. ಮೌಲ್ಯದ 242 ಲಕ್ಷ ಮೆಟ್ರಿಕ್ ಟನ್ ವಾರ್ಷಿಕ ಉತ್ಪನ್ನ ದೊರೆಯುತ್ತದೆ. ಇದು ರಾಜ್ಯದ ಕೃಷಿ ವಲಯದ ಒಟ್ಟು ಆದಾಯ ಶೇ.30ರಷ್ಟಾಗಿದೆ. ಇನ್ನು ತೋಟಗಾರಿಕೆ ಬೆಳೆಗಳ ಮೌಲ್ಯವರ್ಧನೆ ಮೂಲಕ ರೈತರ ಆದಾಯ ಹೆಚ್ಚಿಸಲು ಕೂಡ ಸರ್ಕಾರ ಅವಕಾಶ ಕಲ್ಪಿಸಿದೆ ಎಂದು ಸಿಎಂ ತಿಳಿಸಿದ್ದಾರೆ. ಅಡಿಕೆ ಬೆಳೆಗೆ ಬಾಧಿಸುವ ರೋಗಗಳ ನಿರ್ವಹಣೆಗೆ ಕೂಡ ನೂತನ ತಂತ್ರಜ್ಞಾನ ಅಭಿವೃದ್ಧಿಗೆ ಬಜೆಟ್ ನಲ್ಲಿ ಒತ್ತು ನೀಡಲಾಗಿದೆ. ಇದಕ್ಕಾಗಿ ಹಾಗೂ ಉತ್ಪಾದಕತೆ ಹೆಚ್ಚಿಸುವ ಉದ್ದೇಶದಿಂದ ತೀರ್ಥಹಳ್ಳಿಯ ಕೃಷಿ ಮತ್ತು ಸಂಶೋಧನಾ ಕೇಂದ್ರಕ್ಕೆ 10 ಕೋಟಿ ರೂ. ನೆರವು ನೀಡೋದಾಗಿ ಬಜೆಟ್ ನಲ್ಲಿ ಸಿಎಂ ಘೋಷಿಸಿದ್ದಾರೆ.
ಕೃಷಿ ಮತ್ತು ತೋಟಗಾರಿಕಾ ಉತ್ಪನ್ನಗಳ ರಫ್ತು ಮತ್ತು ಸಂಸ್ಕರಣೆ ಉತ್ತೇಜನಕ್ಕೆ ರೈತ ಸಂಪದ ಯೋಜನೆಯಡಿ ಕೆಪೆಕ್ ಸಂಸ್ಥೆ ಮೂಲಕ 100 ಕೋಟಿ ರೂ. ಮೊತ್ತದಲ್ಲಿ ಯೋಜನೆ ರೂಪಿಸಲಾಗುವುದು ಎಂದು ಸಿಎಂ ತಿಳಿಸಿದ್ದಾರೆ. ತೋಟಗಾರಿಕೆ ಇಲಾಖೆ ಅಡಿಯಲ್ಲಿರುವ 12 ತೋಟಗಳಲ್ಲಿ ಉತ್ಪಾದಕತೆ ಹೆಚ್ಚಿಸಲು 'ಒಂದು ತೋಟ, ಒಂದು ಬೆಳೆ' ಯೋಜನೆಯಡಿ 10 ಕೋಟಿ ರೂ.ಗಳ ಒಂದು ಬಾರಿಯ ವಿಶೇಷ ಅನುದಾನ ನೀಡೋದಾಗಿ ಬಜೆಟ್ ನಲ್ಲಿ ಘೋಷಿಸಲಾಗಿದೆ.
ಕರ್ನಾಟಕ ರಾಜ್ಯ ಬಜೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕಿಸಿ
ಪ್ರಮುಖ ಘೋಷಣೆಗಳು:
*ರಾಜ್ಯದಲ್ಲಿ ಆಲೂಗಡ್ಡೆ ಬಿತ್ತನೆಯಲ್ಲಿ ಸ್ವಾವಲಂಬನೆ ಸಾಧಿಸಲು ಮೊದಲ ಬಾರಿಗೆ ಎಪಿಕಲ್ ರೂಟ್ ಕಲ್ಚರ್ ತಂತ್ರಜ್ಞಾನವನ್ನು ಯೋಗ್ಯದರದಲ್ಲಿ ಬೆಳೆಗಾರರಿಗೆ ಪರಿಚಯಿಸಲು ಉದ್ದೇಶಿಸಲಾಗಿದೆ.
*ತೋಟಗಾರಿಕಾ ಇಲಾಖೆಯ ಕ್ಷೇತ್ರಗಳಲ್ಲಿ ಸುಧಾರಿತ ಶ್ರೀಗಂಧಗಳನ್ನು ಉತ್ಪಾದಿಸಿ ರೈತರಿಗೆ ವಿತರಿಸಲಾಗುವುದು.
*ದ್ರಾಕ್ಷಿ ಬೆಳೆಗಾರರಿಗೆ ನೆರವಾಗಲು ಕರ್ನಾಟಕ ದ್ರಾಕ್ಷಿ ಹಾಗೂ ದ್ರಾಕ್ಷಾರಸ ಮಂಡಳಿ ಮುಖಾಂತರ 100 ಕೋಟಿ ರೂ. ವೆಚ್ಚದಲ್ಲಿ ವಿಶೇಷ ಕಾರ್ಯಕ್ರಮ.
*ರೇಷ್ಮೆ ಬೆಳೆಗಾರರಿಗೆ ವೈಜ್ಞಾನಿಕ ದರ ಒದಗಿಸಲು ಹಾಗೂ ಮಾರುಕಟ್ಟೆಯಲ್ಲಿ ಪಾರದರ್ಶಕತೆ ತರಲು ಇ-ಹರಾಜು ಮತ್ತು ಇ-ನಗದು ವ್ಯವಸ್ಥೆ ಅಳವಡಿಸಲಾಗಿದೆ. ಜೊತೆಗೆ ಹೊಸದಾಗಿ ಆರು ಗೂಡು ಪರೀಕ್ಷಾ ಕೇಂದ್ರಗಳು, ಆಧುನಿಕ ರೇಷ್ಮೆಗೂಡು ಮಾರುಕಟ್ಟೆ ಹಾಗೂ ಶೈತ್ಯಾಗಾರ ನಿರ್ಮಾಣ ಮಾಡಲಾಗಿದೆ. ರೇಷ್ಮೆ ಬೆಳೆಯನ್ನು 10 ಸಾವಿರ ಎಕರೆ ಪ್ರದೇಶಕ್ಕೆ ವಿಸ್ತರಣೆ.
*ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಸುತ್ತಮುತ್ತಿನ ಜಿಲ್ಲೆಗಳ ರೇಷ್ಮೆ ಬೆಳೆಗಾರರಿಗೆ ಅನುಕೂಲ ಒದಗಿಸಲು ಶಿಡ್ಲಘಟ್ಟದಲ್ಲಿ ನಬಾರ್ಡ್ ಯೋಜನೆಯಡಿ 75 ಕೋಟಿ ರೂ. ವೆಚ್ಚದಲ್ಲಿ ಹೈಟೆಕ್ ರೇಷ್ಮೆ ಗೂಡು ಮಾರುಕಟ್ಟೆ ನಿರ್ಮಿಸಲಾಗುವುದು.
*ರೇಷ್ಮೆ ಬೆಳೆಗಾರರು ಆಧುನಿಕ ವಿಧಾನಗಳನ್ನು ಬಳಿಕೊಂಡು ಗುಣಮಟ್ಟದ ಕಚ್ಚಾ ರೇಷ್ಮೆ ಉತ್ಪಾದಿಸಲು ನೆರವಾಗಲು 32 ಸ್ವಯಂಚಾಲಿತ ರೀಲಿಂಗ್ ಘಟಕಗಳ ಸ್ಥಾಪನೆಗೆ 10 ಕೋಟಿ ರೂ. ಹಾಗೆಯೇ 100 ರೇಷ್ಮೆ ಬೆಳೆಗಾರರಿಗೆ ಶ್ರೆಡ್ಡರ್ಸ್ ಒದಗಿಸಲು 12 ಕೋಟಿ ರೂ. ನೆರವು