Crop insurance: ಮುಂಗಾರು ಹಂಗಾಮಿನ ಮಧ್ಯಂತರ ವಿಮಾ ಪರಿಹಾರ: ಜೋಶಿ

ಪ್ರಧಾನಮಂತ್ರಿ ಫಸಲ್‌ ಭೀಮಾ ಯೋಜನೆಯಡಿ 2022ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾದ ಆಲೂಗಡ್ಡೆ, ಕೆಂಪು ಮೆಣಸಿನಕಾಯಿ, ಹತ್ತಿ, ಗೋವಿನಜೋಳ ಹಾಗೂ ಶೇಂಗಾ ಬೆಳೆದ ರೈತರಿಗೆ ಮಧ್ಯಂತರ ಪರಿಹಾರ ಬಿಡುಗಡೆಯಾಗಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

Monsoon Interim Insurance Solution says pralhad Joshi rav

ಹುಬ್ಬಳ್ಳಿ (ನ.19) : ಪ್ರಧಾನಮಂತ್ರಿ ಫಸಲ್‌ ಭೀಮಾ ಯೋಜನೆಯಡಿ 2022ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾದ ಆಲೂಗಡ್ಡೆ, ಕೆಂಪು ಮೆಣಸಿನಕಾಯಿ, ಹತ್ತಿ, ಗೋವಿನಜೋಳ ಹಾಗೂ ಶೇಂಗಾ ಬೆಳೆದ ರೈತರಿಗೆ ಮಧ್ಯಂತರ ಪರಿಹಾರ ಬಿಡುಗಡೆಯಾಗಲಿದೆ. ಈ ಯೋಜನೆಯಡಿ ನೋಂದಾಯಿಸಿಕೊಂಡಿದ್ದ 630609 ರೈತರಿಗೆ ವಿಮೆ ಹಣ ಬಿಡುಗಡೆಯಾಗಲಿದೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಜಿಲ್ಲೆಯ ಈ ಯೋಜನೆಯಡಿ 63609 ರೈತರಿಗೆ .57 ಕೋಟಿ ಮಧ್ಯಂತರ ಬೆಳೆವಿಮೆ ಪರಿಹಾರ ಮಂಜೂರಾಗಿದೆ ಎಂದು ತಿಳಿಸಿದ್ದಾರೆ.

 

ಹುಬ್ಬಳ್ಳಿ-ದೆಹಲಿ ವಿಮಾನ ಸೇವೆಗೆ ಕೇಂದ್ರ ಸಚಿವ ಜೋಶಿ ಚಾಲನೆ

ಯೋಜನೆಯ ಅನುಷ್ಠಾನ ಕಂಪನಿ ಐಸಿಐಸಿಐ ಲೋಂಬಾರ್ಡ್‌ ಜಿಐಸಿ ಲಿ., ಕಂಪನಿಯ ಮುಖ್ಯ ಕಚೇರಿಯಿಂದ ಬೆಂಗಳೂರಿನ ಪ್ರಾದೇಶಿಕ ಕಚೇರಿಗೆ ಹಣ ವರ್ಗಾವಣೆಯಾಗಿದ್ದು, ಆಧಾರ್‌ ಜೋಡಣೆಯಾಗಿರುವ ರೈತರ ಬ್ಯಾಂಕ್‌ ಖಾತೆಗಳಿಗೆ ಹಣ ಸಂದಾಯ ಮಾಡುವ ಪ್ರಕ್ರಿಯೆ ಪ್ರಾರಂಭಿಸಲಾಗಿದೆ. ಈ ಪ್ರಕ್ರಿಯೆ ಮುಗಿದ ತಕ್ಷಣವೇ ನೇರವಾಗಿ ರೈತರ ಖಾತೆಗಳಿಗೆ ವಿಮಾ ಹಣ ಜಮೆಯಾಗಲಿದೆ. ಸದ್ಯ ಮಧ್ಯಂತರ ವಿಮೆ ಹಣ ಬಿಡುಗಡೆಯಾಗಲಿದ್ದು, ಸಂಪೂರ್ಣ ವಿಮೆಯು ಬೆಳೆ ಕಟಾವು ಸಮೀಕ್ಷಾ ವರದಿ ಸಲ್ಲಿಕೆಯಾದ ನಂತರ ದೊರೆಯಲಿದೆ ಎಂದು ತಿಳಿಸಿದ್ದಾರೆ.

ಈ ಐದು ಬೆಳೆಗಳನ್ನು ಹೊರತುಪಡಿಸಿ ಇನ್ನುಳಿದ ಬೆಳೆಗಳಿಗೆÜ ವಿಮೆ ಮಾಡಿಸಿದ ರೈತರಿಗೆ ಸ್ಥಳೀಯ ನಿರ್ದಿಷ್ಟಪ್ರಕೋಪಗಳ ಪರಹಾರದಡಿ ವಿಮೆ ಪ್ರಕರಣಗಳನ್ನು ಬೆಳೆ ಕಟಾವು ಸಮೀಕ್ಷೆ ಆಧಾರದಲ್ಲಿ ಇತ್ಯರ್ಥಗೊಳಿಸಿ ಬೆಳೆ ಪರಿಹಾರ ಸಂದಾಯ ಪ್ರಕ್ರಿಯೆ ಈಗಾಗಲೇ ಪ್ರಾರಂಭಿಸಲಾಗಿದ್ದು, ಆದಷ್ಟುಬೇಗನೆ ವಿಮಾ ಸಂದಾಯಕ್ಕೆ ಕೃಷಿ ಇಲಾಖೆ ಹಾಗೂ ವಿಮಾ ಕಂಪನಿಗಳ ಉನ್ನತ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ. ಇದಕ್ಕಾಗಿ ಯೋಜನೆ ರೂಪಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಕೃಷಿ ಸಚಿವ ನರೇಂದ್ರಸಿಂಗ್‌ ಅವರಿಗೆ ಧನ್ಯವಾದಗಳನ್ನು ಸಚಿವ ಜೋಶಿ ತಿಳಿಸಿದ್ದಾರೆ.  Hubli - Delhi Flight: ಉತ್ತರ ಕರ್ನಾಟಕದಿಂದ ದೆಹಲಿಗೆ ವಿಮಾನ ಸೇವೆ- ಹುಬ್ಬಳ್ಳಿಯಲ್ಲಿ ಚಾಲನೆ

Latest Videos
Follow Us:
Download App:
  • android
  • ios