ಮಲೆನಾಡನ್ನು ಕಾಡುತ್ತಿರುವ ಮಂಗನ ಕಾಯಿಲೆ ನಿಧಾನವಾಗಿ ಕರಾವಳಿ ಕಡೆಗೆ ತೆರಳಿತೆ ಎಂಬ ಅನುಮಾನ ಮೂಡಿದೆ. ಉಡುಪಿ ಜಿಲ್ಲೆಯಲ್ಲೂ ಮಂಗನ ಕಾಯಿಲೆ ಆತಂಕ ಶುರುವಾಗಿದೆ.
ಉಡುಪಿ(ಜ.27] ಜಿಲ್ಲೆಯಲ್ಲಿ ಅಸಹಜ ರೀತಿಯಲ್ಲಿ ಮಂಗಗಳ ಮಾರಣ ಹೋಮ ಭಾನುವಾರವೂ ಮುಂದುವರಿದಿದೆ. ಈಗಾಗಲೇ ಜಿಲ್ಲೆಯ ವಿವಿಧ ಭಾಗಗಗಳಲ್ಲಿ ಸುಮಾರು 80ಕ್ಕೂ ಹೆಚ್ಚು ಮಂಗಗಳು ಸತ್ತಿದ್ದು, ಭಾನುವಾರ ಮತ್ತೇ 5 ಮಂಗಗಳ ಶವ ಪತ್ತೆಯಾಗಿವೆ.
ಕುಂದಾಪುರ ತಾಲೂಕಿನ ಸಿದ್ದಾಪುರದಲ್ಲಿ 2, ಯಡಾಡಿಯಲ್ಲಿ, ಆರ್ಡಿ, ಹೊಸಂಗಡಿಗಳಲ್ಲಿ ತಲಾ 1 ಮಂಗಗಳು ಮೃತಪಟ್ಟಿದ್ದು ಪತ್ತೆಯಾಗಿದೆ. ಅದರಲ್ಲಿ ಯಡಾಡಿಯಲ್ಲಿ ಮೃತಪಟ್ಟ ಮಂಗವನ್ನು ಪಶುವೈದ್ಯರು ಶವಪರೀಕ್ಷೆ ನಡೆಸಿ ಪುಣೆ ಪ್ರಯೋಗಾಲಯಕ್ಕೆ ಅಂಗಾಂಗ ಮಾದರಿಯನ್ನು ರವಾನಿಸಿದ್ದಾರೆ. ಆರ್ಡಿ ವ್ಯಾಪ್ತಿಯ ಅರಣ್ಯ ಇಲಾಖೆ ಸಿಬ್ಬಂದಿ ಜ್ವರಕ್ಕೆ ತುತ್ತಾಗಿದ್ದು, ಅವರ ರಕ್ತ ಪರೀಕ್ಷೆ ಮಾಡಲಾಗಿ ಅವರಿಗೆ ಮಂಗನ ಕಾಯಿಲೆ ಇಲ್ಲ ಎಂದು ದೃಡಪಟ್ಟಿದೆ.
ಕರ್ನಲ್ ಮೆಗ್ಗಾನ್ ಮತ್ತು ಮಂಗನ ಕಾಯಿಲೆ..ಒಂದು ನೆನಪು
ಜಿಲ್ಲೆಯಲ್ಲಿ ಇದುವರೆಗೆ 9 ಸೋಂಕಿತರ ರಕ್ತಪರೀಕ್ಷೆ ನಡೆಸಲಾಗಿದ್ದು, ಯಾರಿಗೂ ಇದುವರೆಗೆ ಮಂಗನ ಕಾಯಿಲೆ ದೃಡಪಟ್ಟಿಲ್ಲ ಪ್ರತಿದಿನ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಶಿವಮೊಗ್ಗ ಜಿಲ್ಲೆಯಿಂದ ಶಂಕಿತ ಮಂಗನಕಾಯಿಲೆ ರೋಗಿಗಳು ದಾಖಲಾಗುತ್ತಿದ್ದು, ಇದುವರೆಗೆ 121 ಮಂದಿ ದಾಖಲಾಗಿದ್ದಾರೆ. ಅವರಲ್ಲಿ 49 ಮಂದಿ ಮಂಗನಕಾಯಿಲೆ ಇರುವುದು ಪತ್ತೆಯಾಗಿದೆ.
ಭಾನುವಾರ ಶಿವಮೊಗ್ಗ ಜಿಲ್ಲೆಯ ಹೊಸನಗರದಿಂದ ಇಬ್ಬರು ರೋಗಿಗಳು ಮಂಗನಕಾಯಿಲೆಯ ಶಂಕೆಯಿಂದ ದಾಖಲಾಗಿದ್ದಾರೆ. ಆದರೇ ಆಸ್ಪತ್ರೆಗೆ ಸೇರಿದ ಮೇಲೆ ಪರೀಕ್ಷೆಯ ನಂತರ ಅವರಿಗೆ ಎಚ್1ಎನ್1 ಇರುವುದು ದೃಢಪಟ್ಟಿದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Jan 27, 2019, 11:37 PM IST