ಬೆಂಗಳೂರು [ಮಾ.07]: ಕೌಟುಂಬಿಕ ಸಮಸ್ಯೆ  ಬಗೆಹರಿಸುವುದಾಗಿ ಮಹಿಳೆಗೆ ನಿಂಬೆ ಕೊಟ್ಟು ಸುಮಾರು 27 ಕೋಟಿ ರು. ವಂಚಿಸಿದ್ದ ಪ್ರಕರಣದಲ್ಲಿ ಕೋಲಾರದ ನಕಲಿ ಮಂತ್ರವಾದಿಯನ್ನು ಬಂಧಿಸಲಾಗಿದೆ. 

ಭಕ್ತಿ ನೆಪದಲ್ಲಿ 27 ಕೋಟಿ ದೋಚಿದ್ದ   ಬಂಗಾರಪೇಟೆಯ ನಾಗರಾಜ್ ಎಂಬ ನಕಲಿ ಸ್ವಾಮಿಜಿ ಈಗ ಅರೆಸ್ಟ್ ಆಗಿದ್ದಾನೆ. 

ಮೈಸೂರು: ಸ್ವಾಮೀಜಿ ನೇಣು ಬಿಗಿದು ಆತ್ಮಹತ್ಯೆ...
ರಾಮಮೂರ್ತಿ ನಗರದ ಮಹಿಳೆ ನೀಡಿದ ದೂರಿನ ಆಧಾರದಲ್ಲಿ ದಾಳಿ ಮಾಡಿದ ಸಿಸಿಬಿ ಪೊಲೀಸರು ಸ್ವಾಮೀಜಿ ಬಂಧಿಸಿದ್ದಾರೆ. 

ಮನೆಯಲ್ಲಿ ಇದ್ದರೆ ಸಾವನ್ನಪ್ಪುತ್ತೀರಿ ಎಂದು ಹೆದರಿಸಿ ಮನೆ ಮಾರಿಸಿದ್ದ. ಮನೆ ಮಾರಿದ ಹಣವನ್ನು ಬಳಸಿದರೆ ರಕ್ತಕಾರಿ ಸಾಯುತ್ತೀರಿ ಎಂದು ಬೆದರಿಕೆ ಹಾಕಿದ್ದ. ಅಲ್ಲದೇ ಅವರಿಂದ  ಬರೋಬ್ಬರಿ 27 ಕೋಟಿ ದೋಚಿದ್ದ ನಕಲಿ ಸ್ವಾಮೀಜಿ ಈಗ ಪೊಲೀಸರ ಅತಿಥಿಯಾಗಿದ್ದಾನೆ. 

ಮಹಿಳೆಗೆ ಮಂತ್ರವಾದಿ ಮಾಡಿದ ಮಹಾ ಮೋಸ : 27 ಕೋಟಿ ಪಂಗನಾಮ!...

ಬಂಗಾರಪೇಟೆಯ ಬಳಿ ಮಠ ಕಟ್ಟಿಕೊಂಡಿದ್ದ ಆರೋಪಿ ನಾಗರಾಜ್ ಪೊಲೀಸರಿಂದ ತಪ್ಪಿಸಿಕೊಂಡು ತಲೆಮರೆಸಿಕೊಂಡಿದ್ದು, ಇದೀಗ ಖಚಿತ ಮಾಹಿತಿ ಆಧರಿಸಿ ಬಂಧಿಸಲಾಗಿದೆ. 

#NewsIn100Seconds ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"