ಜಿಲ್ಲಾ ಪತ್ರಿ​ಕೋ​ದ್ಯಮ ಜತೆ ಆತ್ಮೀಯ ಸಂಬಂಧ ಹೊಂದಿದ್ದ ಮೋಹನ್‌ ದಾಸ್‌ ಪೈ

ಉದಯವಾಣಿ ಬಳಗದ ಸಂಸ್ಥಾಪಕ ಮೋಹನ್‌ದಾಸ್‌ ಪೈ ಅವರ ನಿಧನಕ್ಕೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಶಿವಮೊಗ್ಗ ಪ್ರೆಸ್‌ ಟ್ರಸ್ಟ್‌ ಹಾಗೂ ದಿನಪತ್ರಿಕೆ ಉಪ ಪ್ರತಿನಿಧಿಗಳ ಕ್ಷೇಮಾಭಿವೃದ್ಧಿ ಸಂಘ ಸಂತಾಪ ತೀವ್ರ ಸಂತಾಪ ವ್ಯಕ್ತಪಡಿಸಿತು

Mohan Das Pai had a close relationship with the district journalism rav

ಶಿವಮೊಗ್ಗ (ಅ.2) : ಉದಯವಾಣಿ ಬಳಗದ ಸಂಸ್ಥಾಪಕ ಮೋಹನ್‌ದಾಸ್‌ ಪೈ ಅವರ ನಿಧನಕ್ಕೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಶಿವಮೊಗ್ಗ ಪ್ರೆಸ್‌ ಟ್ರಸ್ಟ್‌ ಹಾಗೂ ದಿನಪತ್ರಿಕೆ ಉಪ ಪ್ರತಿನಿಧಿಗಳ ಕ್ಷೇಮಾಭಿವೃದ್ಧಿ ಸಂಘ ಸಂತಾಪ ತೀವ್ರ ಸಂತಾಪ ವ್ಯಕ್ತಪಡಿಸಿದೆ. ಸೋಮವಾರ ಶಿವಮೊಗ್ಗ ಪತ್ರಿಕಾ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗೋಪಾಲ್‌ ಯಡಗೆರೆ ಮತ್ತು ಶಿವಮೊಗ್ಗ ಪ್ರೆಸ್‌ ಟ್ರಸ್ಟ್‌ ಅಧ್ಯಕ್ಷ ಎನ್‌.ಮಂಜುನಾಥ್‌ ಅಧ್ಯಕ್ಷತೆಯಲ್ಲಿ ಸಭೆ ಸೇರಿದ ಸಂಘಟನೆಯ ಸದಸ್ಯರು ಪತ್ರಿಕಾ ಕ್ಷೇತ್ರಕ್ಕೆ ಮೋಹನ್‌ ದಾಸ್‌ ಪೈ ನೀಡಿರುವ ಕೊಡುಗೆಯನ್ನು ಸ್ಮರಿಸಿ ಶ್ರದ್ಧಾಂಜಲಿ ಸಲ್ಲಿಸಿದರು.

ಮಣಿಪಾಲದ ಟಿ ಮೋಹನ್ ದಾಸ್ ಎಂ ಪೈ (89)ನಿಧನ

ಈ ಸಂದರ್ಭ ಮಾತನಾಡಿದ ಪ್ರೆಸ್‌ ಟ್ರಸ್ಟ್‌ ಅಧ್ಯಕ್ಷ ಎನ್‌.ಮಂಜುನಾಥ್‌(S.Manjunath), ಜಿಲ್ಲೆಯ ಪತ್ರಿಕೋದ್ಯಮಕ್ಕೂ ಮೋಹನ್‌ ದಾಸ್‌ ಪೈ(Mohan Das Pai) ಅವರಿಗೂ ಸಂಬಂಧವಿತ್ತು. ಶಿವಮೊಗ್ಗ(Shivamogga)ದ ಪತ್ರಕರ್ತರು(Journlists) ಮಣಿಪಾಲಿ(Manipal)ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಪತ್ರಿಕಾ ಕ್ಷೇತ್ರದ ತಾಂತ್ರಿಕತೆ, ಸವಾಲುಗಳು ಹಾಗೂ ಆರೋಗ್ಯಕರ ಪತ್ರಿಕೋದ್ಯಮದ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಂಡಿದ್ದರು. ಪೈ ಅವರ ಕುಟುಂಬ ಪತ್ರಿಕಾ ಕ್ಷೇತ್ರಕ್ಕೆ ನೀಡಿದ್ದ ಮತ್ತು ನೀಡುತ್ತಿರುವ ಕೊಡುಗೆ ಅನನ್ಯವಾದುದು ಎಂದರು.

ಗೋಪಾಲ್‌ ಯಡಗೆರೆ ಮಾತನಾಡಿ, ಕರಾವಳಿಯ ಪ್ರತಿ ಮನೆ ಮತ್ತು ಮನದಲ್ಲಿ ಉದಯವಾಣಿ ಪತ್ರಿಕೆ ನೆಲೆಯೂರುವಂತೆ ಮಾಡಿದ್ದ ಕೀರ್ತಿ ಮೋಹನ್‌ದಾಸ್‌ ಪೈ ಅವರಿಗೆ ಸಲ್ಲುತ್ತದೆ. ಪ್ರಾದೇಶಿಕ ಆವೃತ್ತಿಗಳ ಪರಿಕಲ್ಪನೆಯನ್ನು ಕನ್ನಡ ಪತ್ರಿಕೋದ್ಯಮಕ್ಕೆ ಪರಿಚಯಿಸಿದ್ದೇ ಮೋಹನ್‌ ದಾಸ್‌ ಅವರು ಎಂದರಲ್ಲದೆ, ಅವರ ಸೇವೆ ಪತ್ರಿಕಾ ಕ್ಷೇತ್ರವನ್ನು ಸಾಕಷ್ಟುಶ್ರೀಮಂತಗೊಳಿಸಿದೆ ಎಂದರು.

ಟ್ರಸ್ಟ್‌ ಕಾರ್ಯದರ್ಶಿ ನಾಗರಾಜ್‌ ನೇರಿಗೆ, ಗೋ. ವ. ಮೋಹನಕೃಷ್ಣ, ಖಜಾಂಚಿ ಜೇಸುದಾಸ್‌ ಪಿ., ಶಿವಮೊಗ್ಗ ನಂದನ್‌, ಹಿರಿಯ ಪತ್ರಕರ್ತರಾದ ಸೂರ್ಯನಾರಾಯಣ್‌ ವೈ.ಕೆ., ವಿವೇಕ್‌ ಮಹಾಲೆ, ನಾಗರಾಜ್‌ ಡಿ.ಜಿ., ಮಂಜುನಾಥ್‌ ಎನ್‌., ಶಿವಮೊಗ್ಗ ನಾಗರಾಜ್‌, ಪಿ.ಸಿ.ನಾಗರಾಜ್‌, ಲಿಯಾಕತ್‌, ಶಿ.ಜು ಪಾಶ, ಜಗದೀಶ್‌, ಶರತ್‌ಮಳವಳ್ಳಿ, ಗಣೇಶ್‌ ತಮಡಿಹಳ್ಳಿ, ಸ್ಪಂದನಾ ಚಂದ್ರು, ದತ್ತಾತ್ರೇಯ ಹೆಗಡೆ, ವಿನಯ್‌ ತೇಕಲೆ, ಜೋಸೆಫ್‌ ಟೆಲ್ಲಿಸ್‌, ವಿನಯ್‌ ಕುಮಾರ್‌ , ವಾಸು ಪಿ.ಆರ್‌. ಸೇರಿದಂತೆ ಹಲವು ಪತ್ರಕರ್ತರು ಭಾಗವಹಿಸಿದ್ದರು.

ಮಾಧ್ಯಮಗಳನ್ನು ಜನರೂ ವಿಶ್ಲೇಷಿಸ್ತಾರೆ: ಸಿಎಂ ಬೊಮ್ಮಾಯಿ

ಉಪ ಪ್ರತಿನಿಧಿಗಳ ಸಂಘದ ಕಂಬನಿ:

ಹಿರಿಯ ಉದ್ಯಮಿ, ಉದಯವಾಣಿ ದಿನಪತ್ರಿಕೆಯ ಸಂಸ್ಥಾಕರು ಆಗಿದ್ದ ಟಿ. ಮೋಹನದಾಸ್‌ ಪೈ ಅವರ ನಿಧನಕ್ಕೆ ದಿನಪತ್ರಿಕೆ ಉಪ ಪ್ರತಿನಿಧಿಗಳ ಕ್ಷೇಮಾಭಿವೃದ್ಧಿ ಸಂಘ ತೀವ್ರ ಸಂತಾಪ ವ್ಯಕ್ತಪಡಿಸಿದೆ. ಹಿರಿಯ ಚೇತನರಾಗಿದ್ದ ಅವರು ಎಲ್ಲರಿಗೂ ಮಾರ್ಗದರ್ಶಕರಾಗಿದ್ದರು. ಅವರ ಆತ್ಮಕ್ಕೆ ಆ ಭಗವಂತ ಚಿರಶಾಂತಿ ನೀಡಲಿ, ಕುಟುಂಬದವರಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಶಿವಮೊಗ್ಗ ದಿನಪತ್ರಿಕೆ ಉಪ ಪ್ರತಿನಿಧಿಗಳ ಕ್ಷೇಮಾಭಿವೃದ್ಧಿ ಸಂಘದ ಎಲ್ಲ ಸದಸ್ಯರು ಸಂತಾಪ ಕೋರಿದ್ದಾರೆ.

Latest Videos
Follow Us:
Download App:
  • android
  • ios