Asianet Suvarna News Asianet Suvarna News

Mann Ki Baat: ಗದಗ ಹೋಟೆಲ್ ಉದ್ಯಮಿಯ ಕಲಾಸೇವೆಗೆ ಮನ್ ಕೀ ಬಾತ್ ನಲ್ಲಿ ಮೋದಿ ಮೆಚ್ಚುಗೆ

‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಗದಗದ ‘ಕಲಾಚೇತನ’ ಸಂಸ್ಥೆಯ ಕಾವೆಂಶ್ರೀ ಅವರ ಕಲಾಸೇವೆಗೆ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕರ್ನಾಟಕದ ಕಲೆ ಮತ್ತು ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವಲ್ಲಿ  ಕಾವೆಂಶ್ರೀ ಕಳೆದ 25 ವರ್ಷಗಳಿಂದ ಪಟ್ಟು ಬಿಡದ ರೀತಿಯಲ್ಲಿ ತೊಡಗಿಸಿಕೊಂಡಿದ್ದಾರೆ. 

Modi recognized Kannadigas in Mann Ki Baat from gadag and his contribution in field of art gow
Author
First Published Dec 25, 2022, 8:08 PM IST

ಗದಗ (ಡಿ.25): ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ  96ನೇ ಸಂಚಿಕೆಯ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಗದಗ ನಗರದ ‘ಕಲಾಚೇತನ’ ಸಂಸ್ಥೆಯ ಕಾವೆಂಶ್ರೀ ಅವರ ಕಲಾಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕರ್ನಾಟಕದ ಕಲೆ ಮತ್ತು ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವಲ್ಲಿ ಕಾಳಮಂಜಿ ವೆಂಕಟಗಿರಿಯಪ್ಪ ಶ್ರೀನಿವಾಸ (ಕಾವೆಂಶ್ರೀ) 25 ವರ್ಷಗಳಿಂದ ಪಟ್ಟು ಬಿಡದ ರೀತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಕಲಾಪೋಷಣೆ ತಪಸ್ಸಿನಂತೆ ಮುಂದುವರಿಯುತ್ತಿದೆ ಎಂದು ಹೇಳಿದ್ದಾರೆ.

ಕಾವೆಂಶ್ರೀ ಆರಂಭದಲ್ಲಿ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದರು. ಬಳಿಕ ಹೋಟೆಲ್‌ ಉದ್ಯಮಿಯಾಗಿ ‘ಕಲಾಚೇತನ’ ಸಂಸ್ಥೆ ಹುಟ್ಟುಹಾಕಿದರು. ಅಂದಿನಿಂದಲೂ ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ ಕಲಾವಿದರ ಕಾರ್ಯಕ್ರಮಗಳನ್ನು ಆಯೋಜಿಸಿ ಕರ್ನಾಟಕದ ಸಂಸ್ಕೃತಿ ಮತ್ತು ಮತ್ತು ಕಲಾಪರಂಪರೆಯನ್ನು ಪೋಷಿಸುವ ಬದ್ಧತೆ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ  ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇದರ ಜತೆಗೆ ದೇಸಿ ಕಲೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನಿರಂತರವಾಗಿ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದ್ದಾರೆ. ಮಿತ್ರರೇ, ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ಸಮಾಜದ ಸಾಮೂಹಿಕ ಸಂಪತ್ತು; ಅವುಗಳನ್ನು ಮುನ್ನಡೆಸುವ ಜವಾಬ್ದಾರಿ ಸಮಾಜದ ಮೇಲಿದೆ. ಕಾವೆಂಶ್ರೀ ಅವರೀಗ ದೇಸಿ ಸಂಸ್ಕೃತಿ, ಪರಂಪರೆ ಯನ್ನು ಉಳಿಸಿ, ಬೆಳೆಸಿಕೊಂಡು ಹೋಗುವುದನ್ನೇ ಜೀವನದ ಗುರಿಯಾಗಿಸಿಕೊಂಡಿದ್ದಾರೆ ಎಂದು ಹೆಮ್ಮೆ ವ್ಯಕ್ತಪಡಿಸಿದ್ದಾರೆ. 

 

Mann Ki Baat: ಹಲವು ದೇಶಗಳಲ್ಲಿ ಕೋವಿಡ್‌ ಕೇಸ್‌ ಹೆಚ್ಚುತ್ತಿದೆ; ಎಚ್ಚರವಾಗಿರಿ ಎಂದು ನಮೋ ಸಲಹೆ

ಈ ಬಗ್ಗೆ ಪ್ರತಿಕ್ರಿಯೆ ನೀಡಿದ, ಕಾವೆಂಶ್ರೀ ಅವರು ಕಲೆ ಮತ್ತು ಸಂಸ್ಕೃತಿಯ ಪುನರುಜ್ಜೀವನಕ್ಕೆ ಶ್ರಮಿಸುತ್ತಿರುವ ಗದುಗಿನ ಕಲಾಚೇತನ ಅಕಾಡೆಮಿಯ ಕೆಲಸವನ್ನು ಪ್ರಧಾನಿ ಮೋದಿಯವರು  ಮನ್‌ ಕಿ ಬಾತ್‌ ನಲ್ಲಿ ಪ್ರಸ್ತಾಪಿಸಿದ್ದು ಹಾಗೂ ನಮ್ಮ ಕೆಲಸವನ್ನು ಇಡೀ ದೇಶವೇ ಗುರುತಿಸುವಂತೆ ಮಾಡಿದ್ದು ಸಂಸ್ಥೆಗೆ ಸಿಕ್ಕ ಗೌರವವೆಂದೇ ಭಾವಿಸಿದ್ದೇವೆ. ಇದರಿಂದ ನಮ್ಮ ಜವಾಬ್ದಾರಿ ಹೆಚ್ಚಾಗಿದೆ ಎಂದು ಹೇಳಿದ್ದಾರೆ.

Tumakur: ದೃಶ್ಯ ಮಾಧ್ಯಮದಿಂದ ಕ್ಷೀಣಿಸುತ್ತಿರುವ ಜಾನಪದ ಕಲೆ

ಪಿಎಂ ಮೋದಿ ತಮ್ಮ ಭಾಷಣದಲ್ಲಿ ದುಬೈನ ಕಲರಿ ಕ್ಲಬ್‌ನಿಂದ ಇತ್ತೀಚೆಗೆ ಗುರುತಿಸಲ್ಪಟ್ಟ ದಾಖಲೆಯನ್ನು ಪ್ರಸ್ತಾಪಿಸಿದರು. "ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಇತ್ತೀಚೆಗೆ ದುಬೈನ ಕಲರಿ ಕ್ಲಬ್‌ನಿಂದ ದಾಖಲೆಯನ್ನು ಗುರುತಿಸಿದೆ. ಈ ದಾಖಲೆಯು ಭಾರತದ ಪ್ರಾಚೀನ ಸಮರ ಕಲೆಯಾದ ಕಲರಿಪಯಟ್ಟು ಕುರಿತಾಗಿದೆ. ಈ ದಾಖಲೆಯು ಒಂದೇ ಸ್ಥಳದಲ್ಲಿ ಅತಿ ಹೆಚ್ಚು ಜನರು ಕಲರಿಪಯಟ್ಟು ಪ್ರದರ್ಶಿಸಿದ ದಾಖಲೆಯಾಗಿದೆ," ಭಾರತದೊಂದಿಗೆ ದುಬೈ ಮೂಲದ ಕ್ಲಬ್‌ನ ಸಂಪರ್ಕವನ್ನು ನೆನಪಿಸಿಕೊಂಡರು.

ಇನ್ನು ಅಲ್ಲದೆ, 2022 ರ ಕೊನೆಯ ಆವೃತ್ತಿಯ 'ಮನ್ ಕೀ ಬಾತ್' ಭಾಷಣ ಮುಗಿಸುವ ಮೊದಲು 2023 ಕ್ಕೆ ಜನರಿಗೆ 'ಹೊಸ ವರ್ಷದ ಶುಭಾಶಯಗಳು' ಎಂದು ಹಾರೈಸಿದ ಮೋದಿ, ನಮಾಮಿ ಗಂಗೆ ಮಿಷನ್ ಜೀವವೈವಿಧ್ಯವನ್ನು ಸುಧಾರಿಸಲು ಸಹಾಯ ಮಾಡಿದೆ ಎಂದು ಹೇಳಿದರು. 

 

Follow Us:
Download App:
  • android
  • ios