Asianet Suvarna News Asianet Suvarna News

Mann Ki Baat: ಹಲವು ದೇಶಗಳಲ್ಲಿ ಕೋವಿಡ್‌ ಕೇಸ್‌ ಹೆಚ್ಚುತ್ತಿದೆ; ಎಚ್ಚರವಾಗಿರಿ ಎಂದು ನಮೋ ಸಲಹೆ

ಅಟಲ್‌ ಬಿಹಾರಿ ವಾಜಪೇಯಿ ಅವರ ಜನ್ಮ ದಿನಾಚರಣೆ ಹಿನ್ನೆಲೆ ಮಾಜಿ ಪ್ರಧಾನಿಯನ್ನು ಪ್ರಧಾನಿ ನರೇಂದ್ರ ಮೋದಿ ಸ್ಮರಿಸಿಕೊಂಡಿದ್ದಾರೆ. ಭಾರತ ರತ್ನ ಹಾಗೂ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜೀ ಅವರಿಗೆ ನಮನಗಳು ಎಂದು ಮೋದಿ ಮನ್‌ ಕೀ ಬಾತ್‌ನಲ್ಲಿ ಹೇಳಿದ್ದಾರೆ. 

prime minister narendra modi addresses last mann ki baat of 2022 ash
Author
First Published Dec 25, 2022, 12:20 PM IST

ಪ್ರಧಾನಿ ಮೋದಿ ಇಂದು 2022ರ ಕೊನೆಯ ಸಂಚಿಕೆಯ ಮನ್‌ ಕೀ ಬಾತ್‌ನಲ್ಲಿ ಮಾತನಾಡಿದ್ದು, ಈ ವೇಳೆ ಕೊರೊನಾ ಸೋಂಕಿನ ಬಗ್ಗೆ ಜನರನ್ನು ಎಚ್ಚರಿಸಿದ್ರು. ಡಿಸೆಂಬರ್‌ನ ಕೊನೆಯ ಭಾನುವಾರ, ಅದರಲ್ಲೂ ಕ್ರಿಸ್ಮಸ್‌ ದಿನವಾದ ಇಂದು ಮೋದಿ ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮವಾದ ಮನ್‌ ಕೀ ಬಾತ್‌ನಲ್ಲಿ ಮಾತನಾಡಿದ್ದಾರೆ. ಇದು 2022ರ ಕೊನೆಯ ಎಪಿಸೋಡ್‌ ಜತೆಗೆ 96ನೇ ಮನ್‌ ಕೀ ಬಾತ್‌ ಕಾರ್ಯಕ್ರಮವಾಗಿದೆ. ಇದಕ್ಕೂ ಮುನ್ನ ಡಿಸೆಂಬರ್ 13 ರಂದು, ಪ್ರಧಾನಿ ಮೋದಿಯವರು ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮದ ಕೊನೆಯ ಸಂಚಿಕೆಗಾಗಿ ಜನರು ಸಲಹೆಗಳನ್ನು ನೀಡುವಂತೆ ಮನವಿ ಮಾಡಿಕೊಂಡಿದ್ದರು.  NaMo ಅಪ್ಲಿಕೇಶನ್, MyGov ಅಪ್ಲಿಕೇಶನ್ ಮೂಲಕ ಅಥವಾ 1800-11-7800 ಅನ್ನು ಡಯಲ್ ಮಾಡುವ ಮೂಲಕ ರೆಕಾರ್ಡ್ ಸಂದೇಶದ ಮೂಲಕ ಹಂಚಿಕೊಳ್ಳಲು ದೇಶವಾಸಿಗಳನ್ನು ಕೇಳಿಕೊಂಡಿದ್ದರು. 
 
ವರ್ಷದ ಕೊನೆಯ ಸಂಚಿಕೆಯ ಮನ್‌ ಕೀ ಬಾತ್‌ ಆರಂಭದಲ್ಲಿ ಪ್ರಧಾನಿ ಮೋದಿ,  2022ರ ಭಾರತದ ಸಾಧನೆಗಳನ್ನು ಪ್ರಧಾನಿ ಮೋದಿ ನೆನಪಿಸಿಕೊಂಡರು. ಭಾರತವು ‘ಆಜಾದಿ ಕಾ ಅಮೃತ್ ಮಹೋತ್ಸವ’ ಅಂದರೆ ಸ್ವಾತಂತ್ರ್ಯ ಬಂದು 75 ವರ್ಷಗಳಾದ 2022ರಲ್ಲಿ ದೇಶದ ಸಾಧನೆಗಳನ್ನು ಸ್ಮರಿಸಿಕೊಂಡಿದ್ದಾರೆ. ನಂತರ, ತಮ್ಮ 96ನೇ ಮನ್‌ ಕೀ ಬಾತ್‌ ಸಂಚಿಕೆಯಂದು ಪ್ರಧಾನಿ ಮೋದಿ ದೇಶದ ಕ್ರೈಸ್ತ ಬಾಂಧವರಿಗೆ ಕ್ರಿಸ್ಮಸ್‌ ಶುಭಾಶಯಗಳನ್ನು ಹಂಚಿಕೊಂಡಿದ್ದಾರೆ.

ಇದನ್ನು ಓದಿ: Mann Ki Baat: ಜಿ20 ಅಧ್ಯಕ್ಷ ಸ್ಥಾನ ಭಾರತಕ್ಕೆ ಬಹುದೊಡ್ಡ ಅವಕಾಶ: ಪ್ರಧಾನಿ ಮೋದಿ

ಹರ್‌ ಘರ್‌ ತಿರಂಗ ಹಾಗೂ ಆಜಾದಿ ಕಾ ಅಮೃತ್ ಮಹೋತ್ಸವದ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, ದೇಶದ ಜನರು  ಅನುಸರಿಸಿದ್ದಾರೆ ಮತ್ತು ತ್ರಿವರ್ಣ ಧ್ವಜದೊಂದಿಗೆ ಸೆಲ್ಫಿ ಹಂಚಿಕೊಂಡಿದ್ದಾರೆ ಎಂದು ಪ್ರಧಾನಿ ಮೋದಿ ತಮ್ಮ 'ಮನ್ ಕೀ ಬಾತ್' ಭಾಷಣದಲ್ಲಿ 'ಹರ್ ಘರ್ ತಿರಂಗ' ಕುರಿತು ಪ್ರಸ್ತಾಪಿಸಿದ್ದಾರೆ.

ಅಲ್ಲದೆ, ಅಟಲ್‌ ಬಿಹಾರಿ ವಾಜಪೇಯಿ ಅವರ ಜನ್ಮ ದಿನಾಚರಣೆ ಹಿನ್ನೆಲೆ ಮಾಜಿ ಪ್ರಧಾನಿಯನ್ನು ಪ್ರಧಾನಿ ನರೇಂದ್ರ ಮೋದಿ ಸ್ಮರಿಸಿಕೊಂಡಿದ್ದಾರೆ. ಭಾರತ ರತ್ನ ಹಾಗೂ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜೀ ಅವರಿಗೆ ನಮನಗಳು ಎಂದು ಮೋದಿ ಮನ್‌ ಕೀ ಬಾತ್‌ನಲ್ಲಿ ಹೇಳಿದ್ದಾರೆ. 

ಇದನ್ನೂ ಓದಿ: Mann Ki Baat: ಪರಿಸರ ಕಾಳಜಿ ಜತೆಗೆ ಕನ್ನಡದ ಅರಿವು ಮೂಡಿಸುತ್ತಿರುವ ಸುರೇಶ್‌ ಕುಮಾರ್‌ ಶ್ಲಾಘಿಸಿದ ಮೋದಿ

ಕೋವಿಡ್‌ ಬಗ್ಗೆ ಎಚ್ಚರಿಕೆಯಿಂದಿರಿ ಎಂದ ಪ್ರಧಾನಿ ಮೋದಿ
ಇತರ ದೇಶಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮನ್ ಕೀ ಬಾತ್ ಭಾಷಣದಲ್ಲಿ ಜನರನ್ನು ಮನವಿ ಮಾಡಿಕೊಂಡರು.

ಗದಗ ಜಿಲ್ಲೆಯ ಕಾವೆಂಶ್ರೀ ಬಗ್ಗೆ ಪ್ರಧಾನಿ ಮೋದಿ ಮೆಚ್ಚುಗೆ
ಮನ್ ಕೀ ಬಾತ್‌ನಲ್ಲಿ ಗದಗ ಜಿಲ್ಲೆಯ ಕಾ.ವೆಂ. ಶ್ರೀನಿವಾಸ ಬಗ್ಗೆ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೋಟೆಲ್ ಉದ್ಯಮದಲ್ಲಿ ಬಂದ ಲಾಭದಲ್ಲಿ ಕಳೆದ 25 ವರ್ಷಗಳಿಂದ ಕಲೆ ಸಂಸ್ಕೃತಿ ಉಳಿಸುವಲ್ಲಿ ಕಾವೆಂಶ್ರೀ ಮಹತ್ತರ ಪ್ರಯತ್ನ ಮಾಡಿದ್ದಾರೆ. ಮೂಲತ: ಸಾಗರದವರಾದ ಕಾ.ವೆಂ.ಶ್ರೀನಿವಾಸ ಗದಗ ನಗರದಲ್ಲಿ ಹಲವು ದಶಕಗಳಿಂದ ಹೊಟೆಲ್ ಉದ್ಯಮ ನಡೆಸುತ್ತಿದ್ದಾರೆ. ಅವರ ಸಾಧನೆ ಗುರುತಿಸಿ ಪ್ರಧಾನಿ ಮೋದಿ ಮನ್ ಕಿ ಬಾತ್ ನಲ್ಲಿ ಮಾತನಾಡಿದ್ದು ಕುಟುಂಬಸ್ಥರಲ್ಲಿ ಅತೀವ ಸಂತಸಕ್ಕೆ ಕಾರಣವಾಗಿದೆ. 

ಅಲ್ಲದೆ, ಟಾಟಾ ಸ್ಮಾರಕ ಕೇಂದ್ರದ ಸಂಶೋಧನೆಯ ಬಗ್ಗೆ ಪ್ರಧಾನಿ ಮೋದಿ ಪ್ರಸ್ತಾಪಿಸಿದ್ದಾರೆ. ಯೋಗ ಮತ್ತು ಆಯುರ್ವೇದವು ಈಗ ಆಧುನಿಕ ಯುಗದ ಪರೀಕ್ಷೆಗಳನ್ನು ಎದುರಿಸುತ್ತಿದೆ ಎಂದು ನನಗೆ ಖುಷಿಯಾಗಿದೆ. ಟಾಟಾ ಮೆಮೋರಿಯಲ್ ಸೆಂಟರ್ ನಡೆಸಿದ ತೀವ್ರ ಸಂಶೋಧನೆಯು ಸ್ತನ ಕ್ಯಾನ್ಸರ್ ರೋಗಿಗಳಿಗೆ ಯೋಗವು ತುಂಬಾ ಪರಿಣಾಮಕಾರಿ ಎಂದು ಬಹಿರಂಗಪಡಿಸಿದೆ. ಎಂದು 'ಮನ್ ಕಿ ಬಾತ್' ನಲ್ಲಿ ಪ್ರಧಾನಿ ಮೋದಿ ಹೇಳುತ್ತಾರೆ. ನಿಯಮಿತವಾಗಿ ಯೋಗಾಭ್ಯಾಸ ಮಾಡುವುದರಿಂದ ರೋಗಿಗಳಲ್ಲಿ ರೋಗದ ಮರುಕಳಿಸುವಿಕೆಯು 15% ರಷ್ಟು ಕಡಿಮೆಯಾಗಿದೆ" ಎಂದು ಹೇಳಿದರು. ಈ ಹಿನ್ನೆಲೆ, ಆಯುರ್ವೇದವನ್ನು ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ನಾಗರಿಕರಿಗೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: Mann Ki Baat: ಬಾಹ್ಯಾಕಾಶ ಹಾಗೂ ಸೌರ ವಿದ್ಯುತ್‌ ವಲಯದಲ್ಲಿ ನಾವು ಅಚ್ಚರಿಗಳನ್ನು ನೀಡುತ್ತಿದ್ದೇವೆ!

ಹಾಗೆ, ಕಳೆದ ಕೆಲವು ವರ್ಷಗಳಲ್ಲಿ ನಾವು ಆರೋಗ್ಯ ಕ್ಷೇತ್ರದಲ್ಲಿ ವಿವಿಧ ಸವಾಲುಗಳನ್ನು ನಿವಾರಿಸಿದ್ದೇವೆ. ನಾವು ಭಾರತದಿಂದ ಸಿಡುಬು ಮತ್ತು ಪೋಲಿಯೋ ತರಹದ ರೋಗಗಳನ್ನು ನಿರ್ಮೂಲನೆ ಮಾಡಿದ್ದೇವೆ. ಈಗ ಕಾಲಾ ಅಜರ್ ರೋಗವೂ ನಿರ್ಮೂಲನೆಯಾಗಲಿದೆ. ಈ ರೋಗವು ಈಗ ಬಿಹಾರ ಮತ್ತು ಜಾರ್ಖಂಡ್‌ನ 4 ಜಿಲ್ಲೆಗಳಲ್ಲಿ ಮಾತ್ರ ಇದೆ ಎಂದೂ ಹೇಳಿದರು.
 
ಈ ಮಧ್ಯೆ, ಎಲ್ಲಾ 'ಸ್ವಚ್ಛ ಭಾರತ್ ಮಿಷನ್' ಮಾರ್ಗಸೂಚಿಗಳನ್ನು ಅನುಸರಿಸುವಂತೆ ಜನರಿಗೆ ಮನವಿ ಮಾಡಿದರು. 'ಸ್ವಚ್ಛ ಭಾರತ್ ಮಿಷನ್' ಪ್ರತಿಯೊಬ್ಬ ಭಾರತೀಯನ ಮನಸ್ಸಿನಲ್ಲಿ ದೃಢವಾಗಿ ಬೇರೂರಿದೆ ಎಂದು ಮೋದಿ ಹೇಳಿದರು. ಇನ್ನು, ದೇಶದ ಆದಿವಾಸಿಗಳು ಬಿದಿರಿನಿಂದ ತಯಾರಿಸಿದ ಉತ್ಪನ್ನಗಳನ್ನು ಬಳಸಬೇಕು ಮತ್ತು ಇದು ಅನೇಕ ಆದಿವಾಸಿ ಮಹಿಳೆಯರ ಉದ್ಯೋಗಕ್ಕೆ ಸಹಾಯ ಮಾಡುತ್ತದೆ ಎಂದೂ ಮೋದಿ ಮನ್‌ ಕೀ ಬಾತ್‌ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. 
 
ಅಲ್ಲದೆ, 2022 ರ ಕೊನೆಯ ಆವೃತ್ತಿಯ 'ಮನ್ ಕೀ ಬಾತ್' ಭಾಷಣ ಮುಗಿಸುವ ಮೊದಲು 2023 ಕ್ಕೆ ಜನರಿಗೆ 'ಹೊಸ ವರ್ಷದ ಶುಭಾಶಯಗಳು' ಎಂದೂ ಹಾರೈಸಿದ್ದಾರೆ. ಹಾಗೂ, ನಮಾಮಿ ಗಂಗೆ ಮಿಷನ್ ಜೀವವೈವಿಧ್ಯವನ್ನು ಸುಧಾರಿಸಲು ಸಹಾಯ ಮಾಡಿದೆ ಎಂದು 
‘ಮನ್ ಕಿ ಬಾತ್’ ನ 96 ನೇ ಆವೃತ್ತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದರು. 

Follow Us:
Download App:
  • android
  • ios