ಮೈಸೂರು(ಫೆ.09): ಕರ್ನಾಟಕದಲ್ಲಿ ಪ್ರಧಾನಿ ನರೇಂದ್ರ ಮೋದಿ ಆಟ ನಡೆಯುವುದಿಲ್ಲ. ಇಲ್ಲೇನಿದ್ದರೂ ಯಡಿಯೂರಪ್ಪ ಇದ್ದರೆ ಮಾತ್ರ ಬಿಜೆಪಿ ಎಂದು ಮಾಜಿ ಸಚಿವ ವರ್ತೂರು ಪ್ರಕಾಶ್ ಅಭಿಪ್ರಾಯಪಟ್ಟಿದ್ದಾರೆ.

ಸಚಿವ ಸ್ಥಾನ ವಂಚಿತ, ಮಾಜಿ ಸಚಿವ ಎಚ್. ವಿಶ್ವನಾಥ್ ನಿವಾಸಕ್ಕೆ ಶನಿವಾರ ತಮ್ಮ ಬೆಂಬಲಿಗರೊಂದಿಗೆ ಭೇಟಿ ನೀಡಿದ್ದ ಅವರು ಸುದ್ದಿಗಾರ ರೊಂದಿಗೆ ಮಾತನಾಡಿ, ಜೂನ್ ಒಳಗೆ ಮಾಜಿ ಸಚಿವ ಎಚ್. ವಿಶ್ವನಾಥ್, ಎಂ.ಟಿ.ಬಿ.ನಾಗರಾಜ್ ಅವರನ್ನು ಸಚಿವರನ್ನಾಗಿ ಮಾಡಬೇಕು. ಇಲ್ಲವಾ ದರೆ ಕುಮಾರಸ್ವಾಮಿ ಅವರಿಗೆ ಆದ ಗತಿಯೇ ಯಡಿಯೂರಪ್ಪನವರಿಗೂ ಆಗುತ್ತದೆ. ಮಾತಿಗೆ ತಪ್ಪಿದರೆ ವಚನ ಭ್ರಷ್ಟತೆಯ ಆರೋಪ ಯಡಿಯೂರಪ್ಪ ಅವರ ಮೇಲೆ ಬರುತ್ತದೆ ಎಂದಿದ್ದಾರೆ.

ಟೋಕನ್ ಕೊಟ್ರೆ 20 ಕೆಜಿ ಅಕ್ಕಿ, ಕಾಲ್ ಮಾಡಿದ್ರೆ ಕೋಳಿ ಮಾಂಸ: ಎಲ್ಲ ಫ್ರೀ ಫ್ರೀ.

ರಾಜ್ಯದಲ್ಲಿ 105 ಸ್ಥಾನಗಳನ್ನು ಯಡಿಯೂರಪ್ಪ ಗೆದ್ದರು ಒಂದೇ ದಿನಕ್ಕೆ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದರು. ಆದರೆ, ನಾಲ್ಕು ಮಂದಿ ಕುರುಬರು ಯಡಿಯೂರಪ್ಪ ಅವರ ಜೊತೆ ಹೋಗಿದ್ದಕ್ಕೆ ಈಗ ಮತ್ತೆ ಸಿಎಂ ಆಗಿದ್ದಾರೆ. ಅವರ ಋಣ ತೀರಿಸುವ ಕೆಲಸವನ್ನು ಯಡಿ ಯೂರಪ್ಪ ಮಾಡಬೇಕು ಎಂದರು. ಸಿದ್ದರಾಮಯ್ಯ ಅವರಿಗೂ, ಯಡಿಯೂ ರಪ್ಪನವರಿಗೂ ವ್ಯತ್ಯಾಸ ಇದೆ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ತಾವು ನಾಯಕರಾದರು, ಕುರುಬ ಸಮಾಜದವರನ್ನು ಮಂತ್ರಿ ಮಾಡಲಿಲ್ಲ. ಆದರೆ, ಯಡಿಯೂರಪ್ಪ ನಮ್ಮ ಸಮಾಜದವರಲ್ಲದಿದ್ದರೂ ಕುರುಬರನ್ನು ಸಚಿವರನ್ನಾಗಿ ಮಾಡಿದರು. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಬೇಕು ಅಂದ್ರೆ ವಿಶ್ವನಾಥ್, ಎಂಟಿಬಿ ನಾಗರಾಜ್ ಅವರು ಸಚಿವರಾಗಬೇಕು. ಇಲ್ಲವಾದಲ್ಲಿ ರಾಜ್ಯದಲ್ಲಿ ಬಿಜೆಪಿ ಧೂಳಿಪಟವಾಗುತ್ತದೆ ಎಂದು ಭವಿಷ್ಯ ನುಡಿದರು. ಇದಕ್ಕೂ ಮುನ್ನ ಮಾಜಿ ಸಚಿವ ಎಚ್. ವಿಶ್ವನಾಥ್ ಜೊತೆ ಮಾತುಕತೆ ನಡೆಸಿದರು.