ಚಿಕ್ಕಬಳ್ಳಾಪುರ(ಫೆ.09): ನಗರಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದ್ದು, ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ನಾನಾ ಕಸರತ್ತು ನಡೆಸುತ್ತಿದ್ದಾರೆ. ಅಕ್ಕಿ ಮೂಟೆಗಳು, ಸೀರೆ, ಬೆಳ್ಳಿ ಸಾಮಾನುಗಳನ್ನು ಆಮಿಷವೊಡ್ಡುವ ಮೂಲಕ ಮತ ಸೆಳೆಯಲು ಮುಂದಾಗಿರುವ ಆರೋಪ ಕೇಳಿಬಂದಿದೆ. ಚಿಕ್ಕಬಳ್ಳಾಪುರ ನಗರದಲ್ಲಿ ಒಟ್ಟು 31ವಾರ್ಡುಗಳಿದ್ದು, ಅಭ್ಯರ್ಥಿಗಳು ಶತಾಗತಾಯ ಗೆಲ್ಲಲೇ ಬೇಕು ಎಂಬ ಹಠಕ್ಕೆ ಬಿದ್ದಂತಿದೆ.

ಟೋಕನ್ ನೀಡಿದರೆ ಅಕ್ಕಿಮೂಟೆ!:

ಇಲ್ಲಿನ ವಾರ್ಡೊಂದರಿಂದ ಸ್ಪರ್ಧಿಸಿರುವ ಅಭ್ಯರ್ಥಿಯೊ ಬ್ಬರು ಮತದಾರರಿಗೆ ಟೋಕನ್ ಮತ್ತು ವಿಸಿಟಿಂಗ್ ಕಾರ್ಡ್ ವಿತರಿಸುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಅಕ್ಕಿ ಅಂಗಡಿಯಲ್ಲಿ ಟೋಕನ್ ನೀಡಿದರೆ 25ಕೆಜಿ ತೂಕದ ಮಸ್ಸೂರಿ ಅಕ್ಕಿಯನ್ನು ಉಚಿತವಾಗಿ ನೀಡಲಾಗುತ್ತದೆ. ಇನ್ನು ಸಹಿ ಮಾಡಿದ ವಿಸಿಟಿಂಗ್ ಕಾರ್ಡನ್ನು ಮಾಂಸದ ಅಂಗಡಿಯಲ್ಲಿ ನೀಡಿದರೆ ಎರಡು ಕೆಜಿ ಕೋಳಿ ಮಾಂಸ ಉಚಿತವಾಗಿ ನೀಡಲಾಗುತ್ತದೆ. 9ರಂದು ಪಡೆಯಲು ಸೂಚನೆ: ಅಕ್ಕಿ ಮೂಟೆ ಯನ್ನು ಫೆ.9ರಂದು ಪಡೆಯಲು ಅವರು ನೀಡಿ ರುವ ಟೋಕನ್‌ನಲ್ಲಿ ದಿನಾಂಕ ನಮೂದಿಸಿ ಸಹಿ ಮಾಡಿ ನೀಡಲಾಗಿದೆ.

ಬಿಜೆಪಿ ವಶದಲ್ಲಿದ್ದ ಬ್ಯಾಂಕ್‌ ಕೈ ವಶಕ್ಕೆ: ಕಮಲ ಪಡೆಗೆ ತೀವ್ರ ಮುಖಭಂಗ

ಈ ರೀತಿ ಸಹಿ ಮಾಡಿ ವಿತರಿಸಿದ ಟೋಕನ್ ಲಭ್ಯವಾಗಿದೆ. ವಿಸಿಟಿಂಗ್ ಕಾರ್ಡಿನಲ್ಲಿರುವ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಮಾಂಸ ಪಡೆಯಲು ಎಷ್ಟು ದಿನಗಳ ಕಾಲವಕಾಶ ಇದೆ ಎಂದು ಪ್ರಶ್ನಿಸಿದರೆ ಭಾನುವಾರದ ಸಂಜೆಯವರೆಗೂ ಪಡೆಯಬಹುದು ಎಂದು ಅಂಗಡಿಯವರು ಖಚಿತಪಡಿಸಿದ್ದಾರೆ.

ಸೀರೆ, ಬೆಳ್ಳಿ ಸಾಮಾನು ವಿತರಣೆ:

ಶುಕ್ರವಾರ ಸಂಜೆ ನಗರದ ಹಲವು ಪ್ರದೇಶಗಳಲ್ಲಿ ಸ್ಪರ್ಧೆಯಲ್ಲಿರುವ ಹಲವು ಅಭ್ಯರ್ಥಿಗಳು ವಾಹನಕ್ಕೆ ಸೀರೆಗಳನ್ನು ತುಂಬಿಸಿಕೊಂಡು ಬಂದು ಮನೆಮನೆಗೆ ವಿತರಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ವಾಹನವನ್ನು ರಸ್ತೆಯಲ್ಲಿಯೇ ನಿಲ್ಲಿಸಿ ಪ್ರತಿ ಮನೆಗೆ ಸೀರೆಗಳನ್ನು ವಿತರಿಸಿದ್ದು, ಸೀರೆ ಜೊತೆಯಲ್ಲಿ ಅಭ್ಯರ್ಥಿಯ ವಿವರವುಳ್ಳ ಕರಪತ್ರಗಳನ್ನು ವಿತರಿಸಲಾಗುತ್ತಿದೆ ಎನ್ನಲಾಗಿದೆ.

ಸಂಕಷ್ಟ ಬಂದಾಗ ಬಿಎಸ್‌ವೈ ಜೊತೆಗಿರುವೆ ಎಂದ ಶಾಸಕ.

ಇನ್ನು ಹಲವು ಪ್ರದೇಶಗಳಲ್ಲಿ ಗೆಲ್ಲು ವುದು ಅನುಮಾನವಿರುವ ವಾರ್ಡುಗಳಲ್ಲಿ ಅಭ್ಯ ರ್ಥಿಗಳು ನೇರವಾಗಿ ಬೆಳ್ಳಿ ತಟ್ಟೆಗಳು, ಬೆಳ್ಳಿ ಕುಂಕುಮ ಬಟ್ಟಲು ಸೇರಿದಂತೆ ಇತರೆ ವಸ್ತುಗಳನ್ನು ಮತದಾರ ರಿಗೆ ನೀಡುವ ಮೂಲಕ ಮತ ಯಾಚಿಸುತ್ತಿದ್ದಾರೆ. ಚುನಾವಣೆಯ ಮುನ್ನಾದಿನ ಶನಿವಾರ ರಾತ್ರಿ ಹಣದ ಹೊಳೆಯೇ ಹರಿಯಲಿದೆ ಎನ್ನಲಾಗಿದೆ.

ಮೌನ ವಹಿಸಿದ ಅಧಿಕಾರಿಗಳು:

ಚುನಾವಣಾ ಮಾದರಿ ನೀತಿಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿ ಗೊಳಿಸಿ, ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು ಅಧಿಕಾರಿಗಳನ್ನು ನೇಮಿಸಲಾಗಿದೆ. ಆದರೆ ಮತದಾರರಿಗೆ ಒಡ್ಡುತ್ತಿರುವ ಆಮಿಷಗಳನ್ನು ತಡೆಯಲು ಯಾವುದೇ ಅಧಿಕಾರಿಗಳು ಮುಂದಾ ದ ನಿದರ್ಶನ ಇಲ್ಲ. ಬಹಿರಂಗವಾಗಿಯೇ ಸೀರೆ ಗಳನ್ನು ಹಂಚುತ್ತಿದ್ದರೂ ಅಧಿಕಾರಗಿಳು ಅತ್ತ ತಿರುಗಿಯೂ ನೋಡುತ್ತಿಲ್ಲ ಎಂಬ ಟೀಕೆಗಳು ಕೇಳಿಬರುತ್ತಿವೆ.

- ಅಶ್ವತ್ಥನಾರಾಯಣ ಎಲ್.