ಇಳಕಲ್ಲ(ಸೆ.29): ಜಮ್ಮು ಮತ್ತು ಕಾಶ್ಮೀರದ 70 ವರ್ಷಗಳ ಗಂಭೀರ ಸಮಸ್ಯೆಯನ್ನು ಚಾಣಾಕ್ಷತನದಿಂದ ಕೇವಲ 70 ದಿನಗಳಲ್ಲಿ ಪರಿಹರಿಸಿದ್ದಾರೆ ಎಂದು ವಿಧಾನ ಪರಿಷತ್ತ್ ಸದಸ್ಯೆ ತೇಜಸ್ವಿನಿ ರಮೇಶ ಹೇಳಿದರು.

ಇಲ್ಲಿಯ ವೀರಮಣಿ ಭವನದಲ್ಲಿ ನಡೆದ ರಾಷ್ಟ್ರೀಯ ಏಕತಾ ಅಭಿಯಾನ ಕಾರ್ಯಕ್ರಮದಲ್ಲಿ 370ನೇ ವಿಧಿ ರದ್ಧತಿ ಕುರಿತು ನಡೆದ ಸಂವಾದ ಮತ್ತು ಚರ್ಚಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಡೀ ದೇಶ ಒಂದಾಗಿದ್ದರೂ ಕಾಶ್ಮೀರ ರಾಜ್ಯ ಮಾತ್ರ ಬೇರೆಯಾಗಿ ಅಲ್ಲಿಯ ಕಾನೂನುಗಳೇ ವಿಭಿನ್ನವಾಗಿದ್ದವು. ಬೇರೆ ರಾಜ್ಯಗಳಿಂದ ಆ ರಾಜ್ಯಕ್ಕೆ ಹೋಗಲು ಜನರು ಹೆದರುವಂತಹ ಸ್ಥಿತಿ ನಿರ್ಮಾಣವಾಗಿತ್ತು ಎಂದು ಹೇಳಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ  

370 ಮತ್ತು 35ಎ ವಿಧಿಗಳನ್ನು ರದ್ದು ಮಾಡಿದರೇ ರಕ್ತಪಾತವೇ ಆಗುತ್ತದೆ ಎಂಬ ಮಾತುಗಳು ಕೇಳಿಬಂದರೂ ಅವುಗಳಿಗೆ ಅಂಜದೇ ಅಳುಕದೇ ಮೊದಲಿಗೆ ಬಹುಮತ ಇಲ್ಲದ ರಾಜ್ಯ ಸಭೆಯಲ್ಲಿ ನಂತರ ಲೋಕಸಭೆಯಲ್ಲಿ ಕಾನೂನನ್ನು ಪಾಸ್ ಮಾಡಿ ಹೊಸ ದಾಖಲೆ ಮಾಡಲಾಯಿತು. ಇನ್ನು ಮುಂದೆ ಎಲ್ಲ ರಾಜ್ಯದ ಜನರು ಧೈರ್ಯದಿಂದ ಜಮ್ಮು ಕಾಶ್ಮೀರ ರಾಜ್ಯಕ್ಕೆ ಹೋಗಿ ಬರಬಹುದು ಎಂದು ತಿಳಿಸಿದ್ದಾರೆ. 
ತಾಲೂಕು ಬಿಜೆಪಿ ಅಧ್ಯಕ್ಷ ಮಲ್ಲಯ್ಯ ಮೂಗನೂರಮಠ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಪಿಲ ಪವಾರ ಪ್ರಾರ್ಥಿಸಿ ವಂದಿಸಿದರು. ಮಂಜುನಾಥ ಶೆಟ್ಟರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾ ನಾಡಿದರು. ಸೂಗುರೇಶ ನಾಗಲೋಟಿ ಪರಿಚಯಿಸಿದರು. ಚಂದ್ರಶೇಖರ ಏಕ ಬೋಟೆ ನಿರೂಪಿಸಿದರು. 

ವೇದಿಕೆ ಯಲ್ಲಿ ಮಹಾಂತೇಶ ದೇಸಾಯಿ ಉಪಸ್ಥಿತರಿದ್ದರು. ಇದೇ ವೇಳೆ ಪ್ರಥಮ ಬಾರಿಗೆ ನಗರಕ್ಕೆ ಆಗಮಿಸಿದ ವಿಧಾನ ಪರಿಷತ್ ಸದಸ್ಯೆ ತೇಜಶ್ವಿನಿ ರಮೇಶ ಅವರನ್ನು ಬಿಜೆಪಿ ಮಹಿಳಾ ಮಂಡಳದಿಂದ ಸನ್ಮಾನ ಮಾಡಲಾಯಿತು.