ಅಧಿಕಾರ ಇರಲಿ ಬಿಡಲಿ ಭಾರತ ಏಕ್ಯತೆ ಕಾಂಗ್ರೆಸ್‌ ಅಜೆಂಡಾ: ಎಂಎಲ್ಸಿ ನಾಗರಾಜ್‌ ಯಾದವ್‌

ಅಧಿಕಾರ ಇರಲಿ ಬಿಡಲಿ ಭಾರತದ ಏಕ್ಯತೆಯೆ ಕಾಂಗ್ರೆಸ್‌ ಪಕ್ಷದ ಅಜೆಂಡಾ. ಅಧಿಕಾರ ಲಲಾಸೆಗೆ ಅಂತೂ ಕಾಂಗ್ರೆಸ್‌ ಹುಟ್ಟಿಲ್ಲ. ದೇಶದ ಜನರ ಅಭಿವೃದ್ಧಿ ಹಾಗೂ ಸಮಸ್ಯೆಗಳಿಗೆ ಪರಿಹಾರಕ್ಕೆ ಕಾಂಗ್ರೆಸ್‌ ಹುಟ್ಟಿದೆ. 

MLC Nagaraj Yadav Talks About Congress Bharat Jodo Yatra At Chikkaballapur gvd

ಚಿಕ್ಕಬಳ್ಳಾಪುರ (ಅ.07): ಅಧಿಕಾರ ಇರಲಿ ಬಿಡಲಿ ಭಾರತದ ಏಕ್ಯತೆಯೆ ಕಾಂಗ್ರೆಸ್‌ ಪಕ್ಷದ ಅಜೆಂಡಾ. ಅಧಿಕಾರ ಲಲಾಸೆಗೆ ಅಂತೂ ಕಾಂಗ್ರೆಸ್‌ ಹುಟ್ಟಿಲ್ಲ. ದೇಶದ ಜನರ ಅಭಿವೃದ್ಧಿ ಹಾಗೂ ಸಮಸ್ಯೆಗಳಿಗೆ ಪರಿಹಾರಕ್ಕೆ ಕಾಂಗ್ರೆಸ್‌ ಹುಟ್ಟಿದೆ. ಭಾರತ ಜೋಡೋ ಯಾತ್ರೆಯು ಭಾರತ ಏಕ್ಯತೆಗಾಗಿ ಶಾಂತಿ, ಸಹಬಾಳ್ವೆ, ಸಹೋದರತ್ವ ಹಾಗೂ ಭಾತೃತ್ವವನ್ನು ಮೂಡಿಸುವ ಉದ್ದೇಶ ಹೊಂದಿದೆಂದು ಎಂಎಲ್ಸಿ ಹಾಗೂ ಕಾಂಗ್ರೆಸ್‌ ವಕ್ತಾರ ನಾಗರಾಜ್‌ ಯಾದವ್‌ ಹೇಳಿದರು. ಚಿಕ್ಕಬಳ್ಳಾಪುರ ತಾಲೂಕಿನ ಕಾಡಶೀಗೆನಹಳ್ಳಿಯಲ್ಲಿ ಶ್ರೀ ಕೃಷ್ಣ ಆಲಯ ದರ್ಶನ ಮಾಡಿ ಬಳಿಕ ತಮ್ಮನ್ನು ಬೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದರು.

ಬಿಜೆಪಿದು ಹುಸಿ ದೇಶ ಪ್ರೇಮ ಎಂದು ವಾಗ್ದಾಳಿ ನಡೆಸಿದ ಅವರು, ಸೋನಿಯಾ ಗಾಂಧಿ ಕುಟುಂಬ ಮಾಡಿರುವ ತ್ಯಾಗವನ್ನು ಬಿಜೆಪಿಯಲ್ಲಿನ ಯಾವ ಕುಟುಂಬವಾದರೂ ಮಾಡಿದೆಯೆ ಪ್ರಶ್ನಿಸಿದರು. ಒಬ್ಬರನ್ನು ಒಬ್ಬರು ನಂಬದ ಪರಿಸ್ಥಿತಿ ದೇಶದಲ್ಲಿ ಹುಟ್ಟು ಹಾಕಿರುವ ಸಂದರ್ಭದಲ್ಲಿ ಎಲ್ಲರನ್ನು ಒಗ್ಗೂಡಿಸಿ ಮನುಷ್ಯತ್ವ ಕಾಪಾಡಿ ಎಲ್ಲರಲ್ಲಿ ವಿಶ್ವಾಸ ಮೂಡಿಸುವ ಉದ್ದೇಶವನ್ನು ಭಾರತ ಜೋಡೋ ಹೊಂದಿದೆ. ಜಾತಿ, ಧರ್ಮದ ಗಡಿಗಳನ್ನು ಮೀರಿ ನಾವೆಲ್ಲಾರೂ ಭಾರತೀಯರು ಎಂಬ ಭಾವನೆ ಮೂಡಿಸುವ ಕೆಲಸವನ್ನು ಯಾತ್ರೆ ಮೂಲಕ ಮಾಡಲಾಗುತ್ತಿದೆ ಎಂದು ಹೇಳಿದರು.

ವಿಧಾನಸಭೆ ಚುನಾವಣೆಗೆ ಇನ್ನು 6 ತಿಂಗಳು ಇರುವಾಗಲೇ ಕಾಂಗ್ರೆಸ್‌ ಟಿಕೆಟ್‌ಗೆ ಫೈಟ್..!

ದೇಶದಲ್ಲಿ ಅಶಾಂತಿ ಮೂಡಿಸುವುದು, ಕೋಮುಗಲಭೆಗಳನ್ನು ನಡೆಸುವುದು ವ್ಯವಸ್ಥಿತಿವಾಗಿ ನಡೆಯುತ್ತಿದೆ. ಭಾಷೆ, ಧರ್ಮ, ಹಿಂದು, ಮುಸ್ಲಿಂ ಹೆಸರಲ್ಲಿ ಕಿತ್ತಾಟ ನಡೆಯುತ್ತಿರುವ ಸಂದರ್ಭದಲ್ಲಿ ಶಾಂತಿಯುತ ಭಾರತ ನಿರ್ಮಾಣ ನಮ್ಮದಾಗಬೇಕಿದೆ. ಪ್ರತಿಯೊಬ್ಬರು ಇಲ್ಲಿ ಶಿಕ್ಷಣ, ಉದ್ಯೋಗ, ಆರೋಗ್ಯ ಪಡೆಯಲು ಹಕ್ಕಿದೆ. ಮಹಾತ್ಮ ಗಾಂಧಿ ಅಹಿಂಸಾ ಮಾರ್ಗದಲ್ಲಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು. ಹಿಂಸೆಯ ಮಾರ್ಗದಿಂದ ಅಲ್ಲ. ಅವರ ವಾರಸುದಾರರಾಗಿ ರಾಹುಲ್‌ ಗಾಂಧಿ ಇಡೀ ವಿಶ್ವಕ್ಕೆ ಮಾದರಿ ಆಗುವ ನಿಟ್ಟಿನಲ್ಲಿ ಭಾರತವನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.

ದೇಶಕ್ಕೆ ಬಿಜೆಪಿ ದೊಡ್ಡ ಅಪಾಯ: ರೂಪ ಶಶಿಧರ್‌

ಚಿಕ್ಕಬಳ್ಳಾಪುರ ತಾಲೂಕಿನ ಕಾಡಿಶಿಗೇನಹಳ್ಳಿಯಲ್ಲಿ ಶ್ರೀಕೃಷ್ಣನ ದರ್ಶನ ಪಡೆದ ಕಾಂಗ್ರೆಸ್‌ ವಕ್ತಾರ ನಾಗರಾಜ್‌ ಯಾದವ್‌, ಜೆಡಿಎಸ್‌ ಜಿಲ್ಲಾಧ್ಯಕ್ಷ ಕೆ.ಎಂ.ಮುನೇಗೌಡ ಇದ್ದಾರೆ. ಚಿಕ್ಕಬಳ್ಳಾಪುರ ತಾಲೂಕಿನ ಕಾಡಶೀಗೆನಹಳ್ಳಿಯಲ್ಲಿ ಶ್ರೀ ಕೃಷ್ಣ ಆಲಯಕ್ಕೆ ಪರಿಷತ್‌ ಸದಸ್ಯ ನಾಗರಾಜ್‌ ಯಾದವ್‌ ಭೇಟಿ ನೀಡಿ ದರ್ಶನ ಪಡೆದರು.

Latest Videos
Follow Us:
Download App:
  • android
  • ios