Asianet Suvarna News Asianet Suvarna News

ಕಾಂಗ್ರೆಸ್‌ನಲ್ಲಿ ಮುಸ್ಲಿಮರು ಮೂಲೆಗುಂಪು ಎಂದ 'ಕೈ' ನಾಯಕ

ಮುಸ್ಲಿಮರನ್ನು ಮತ ಬ್ಯಾಂಕ್‌ ಮಾಡಿಕೊಂಡ ಕಾಂಗ್ರೆಸ್| ಮುಸ್ಲಿಂ ಸಮುದಾಯಕ್ಕೆ ಕಾಂಗ್ರೆಸ್‌ ಕೊಡುಗೆ ಶೂನ್ಯ| ನನ್ನದು ಹಾಗೂ ದೇವೇಗೌಡರದ್ದು ಸ್ವಾಭಾವಿಕ ಭೇಟಿ ಅಷ್ಟೇ| ಸದ್ಯಕ್ಕೆ ಜೆಡಿಎಸ್‌ ಸೇರ್ಪಡೆಯಾಗುವ ವಿಚಾರವಿಲ್ಲ| ಕಾಂಗ್ರೆಸ್‌ ನಾಯಕರ ಮುಂದಿನ ನಡೆಯ ಮೇಲೆ ನಿರ್ಧಾರ: ಇಬ್ರಾಹಿಂ| 

MLC CM Ibrahim Talks Over Muslims in Congress Party grg
Author
Bengaluru, First Published Mar 1, 2021, 10:59 AM IST

ಕನಕಗಿರಿ(ಮಾ.01): ಕಾಂಗ್ರೆಸ್‌ನಲ್ಲಿ ಮುಸ್ಲಿಮರನ್ನು ಮೂಲೆಗುಂಪು ಮಾಡಲಾಗುತ್ತಿದ್ದು, ಪರಿಸ್ಥಿತಿ ಹೀಗೆ ಮುಂದುವರಿದರೆ ಕಾಂಗ್ರೆಸ್‌ಗೆ ಗುಡ್‌ ಬೈ ಹೇಳಿ ಜೆಡಿಎಸ್‌ ಸೇರುತ್ತೇನೆ ಎಂದು ವಿಧಾನಪರಿಷತ್‌ ಸದಸ್ಯ ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ. 

ಪಟ್ಟಣದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮುಸ್ಲಿಮರನ್ನು ಕಾಂಗ್ರೆಸ್‌ ಮತ ಬ್ಯಾಂಕ್‌ ಆಗಿ ಮಾಡಿಕೊಂಡಿದೆ. ಆದರೆ, ಮುಸ್ಲಿಂ ಸಮುದಾಯಕ್ಕೆ ಕಾಂಗ್ರೆಸ್‌ ಕೊಡುಗೆ ಶೂನ್ಯ ಎಂದು ತಿಳಿಸಿದ್ದಾರೆ. 

ಕೈ ತೊರೆದು ಜೆಡಿಎಸ್‌ನತ್ತ ಹೊರಟ ನಾಯಕ: ಮನವೊಲಿಕೆಗೆ ಉಸ್ತುವಾರಿ ಅಖಾಡಕ್ಕೆ

ನನ್ನದು ಹಾಗೂ ದೇವೇಗೌಡರದ್ದು ಸ್ವಾಭಾವಿಕ ಭೇಟಿ ಅಷ್ಟೇ. ಕುಮಾರಸ್ವಾಮಿ ಅವರನ್ನು ನಾವು ಎತ್ತಿ ಆಡಿಸಿದ್ದೇವೆ. ಸದ್ಯಕ್ಕೆ ಜೆಡಿಎಸ್‌ ಸೇರ್ಪಡೆಯಾಗುವ ವಿಚಾರವಿಲ್ಲ. ಕಾಂಗ್ರೆಸ್‌ ನಾಯಕರ ಮುಂದಿನ ನಡೆಯ ಮೇಲೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ. 
 

Follow Us:
Download App:
  • android
  • ios