ಕೈ ತೊರೆದು ಜೆಡಿಎಸ್‌ನತ್ತ ಹೊರಟ ನಾಯಕ: ಮನವೊಲಿಕೆಗೆ ಉಸ್ತುವಾರಿ ಅಖಾಡಕ್ಕೆ
ಕಾಂಗ್ರೆಸ್ ತೊರೆಯಲು ಮುಂದಾಗಿರುವ ಹಿರಿಯ ನಾಯಕನ ಮನವೊಲಿಕೆ ಸ್ವತಃ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅಖಾಡಕ್ಕಿಳಿದಿದ್ದಾರೆ.
![randeep surjewala Visits Congress Leader CM Ibrahim House in bengaluru rbj randeep surjewala Visits Congress Leader CM Ibrahim House in bengaluru rbj](https://static-gi.asianetnews.com/images/01eytkqf63288935vvydy7yqpc/1e84dbdb374cce6c9f7e5b7aa62306176968b7d4d9bc3311c155cbed7709f939-jpg_363x203xt.jpg)
ಬೆಂಗಳೂರು, (ಫೆ.18): ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪುತ್ರಿ ಮದುವೆ ಅರಕ್ಷತೆಯಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಆಗಮಿಸಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಅಸಮಾಧಾನಗೊಂಡ ಪಕ್ಷದ ಹಿರಿಯ ನಾಯಕನ ಮನೆ ಭೇಟಿ ನೀಡಿದ್ದಾರೆ.
ಹೌದು..ಕಾಂಗ್ರೆಸ್ ನಾಯಕ ಸಿ.ಎಂ. ಇಬ್ರಾಹಿಂ ನಿವಾಸಕ್ಕೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಭೇಟಿ ನೀಡಿದ್ದು, ಜೆಡಿಎಸ್ ಸೇರ್ಪಡೆಯ ಸಿದ್ಧತೆಯಲ್ಲಿರುವ ಇಬ್ರಾಹಿಂ ಅವರ ಮನವೊಲಿಕೆಗೆ ಮುಂದಾಗಿದ್ದಾರೆ.
ಬೆಂಗಳೂರಿನ ಬೆನ್ಸನ್ ಟೌನ್ನಲ್ಲಿರುವ ಸಿ.ಎಂ. ಇಬ್ರಾಹಿಂ ನಿವಾಸಕ್ಕೆ ರಣದೀಪ್ ಸಿಂಗ್ ಸುರ್ಜೇವಾಲಾ ಭೇಟಿ ನೀಡಿದ್ದು, ಈ ವೇಳೆ ಎಂಎಸ್ಸಿ ನಜೀರ್ ಅಹ್ಮದ್ ಸುರ್ಜೇವಾಲಾ ಅವರಿಗೆ ಸಾಥ್ ನೀಡಿದ್ದಾರೆ.
ಜೆಡಿಎಸ್ ಸೇರಲು ಕಾಂಗ್ರೆಸ್ ಹಿರಿಯ ನಾಯಕ ಉತ್ಸುಕ: ದೇವೇಗೌಡ್ರನ್ನ ಭೇಟಿಯಾಗಿ ಮಾತುಕತೆ
ಈಗಾಗಲೇ ಇಬ್ರಾಹಿಂದ ಅವರು ಜೆಡಿಎಸ್ ಸೇರ್ಪಡೆಗೆ ಹಲವು ಬಾರಿ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ ವರಿಷ್ಠ ಎಚ್ಡಿ ದೇವೇಗೌಡ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಅಲ್ಲದೇ ಜೆಡಿಎಸ್ ಸೇರ್ಪಡೆ ಕುರಿತು ಕ್ಷೇತ್ರ ಪ್ರವಾಸ ಕೈಗೊಂಡು ತೀರ್ಮಾನ ಮಾಡುವುದಾಗಿ ಇಬ್ರಾಹಿಂ ಬಹಿರಂಗವಾಗಿ ಹೇಳಿಕೆ ಕೊಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.
ಇದೀಗ ಸುರ್ಜೇವಾಲ ಮಾತಿಗೆ ಮಣಿದು ಇಬ್ರಾಹಿಂ ಕಾಂಗ್ರೆಸ್ನಲ್ಲೇ ಉಳಿದುಕೊಳ್ಳುತ್ತಾರಾ ಎನ್ನುವುದನ್ನು ಕಾದುನೋಡಬೇಕಿದೆ.
![left arrow](https://static-gi.asianetnews.com/v1/images/left-arrow.png)
![right arrow](https://static-gi.asianetnews.com/v1/images/right-arrow.png)