ವಿಧಾನಸೌಧದಲ್ಲಿ ನಾಯಿಗಳ ಕಾಟ ವಿಧಾನಸಭಾ ಸ್ಪೀಕರ್ ಯುಟಿ ಖಾದರ್‌ಗೆ ತಲೆನೋವು ತಂದಿದೆ. ನಾಯಿಗಳನ್ನು ಹೊರಗೆ ಹಾಕುವುದು ದೊಡ್ಡ ಸಮಸ್ಯೆಯಾಗಿದ್ದು, MLAಗಳನ್ನು ಹೊರಗೆ ಹಾಕಬಹುದು ಆದರೆ ನಾಯಿಗಳನ್ನು ಹೊರಗೆ ಹಾಕುವುದು ಕಷ್ಟ ಎಂದು ಖಾದರ್ ಹೇಳಿದ್ದಾರೆ.  

ಮಂಗಳೂರು (ಫೆ.3): ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧದಲ್ಲಿ ನಾಯಿಗಳ ಕಾಟಕ್ಕೆ ವಿಧಾನಸಭಾ ಸ್ಪೀಕರ್ ಯುಟಿ ಖಾದರ್ ಬೇಸತ್ತುಹೋಗಿದ್ದಾರೆ. ಮಂಗಳೂರಿನಲ್ಲಿ ವಿಧಾನಸಭಾ ಸ್ಪೀಕರ್ ಯುಟಿ ಖಾದರ್ ಈ ಬಗ್ಗೆ ಮಾತನಾಡಿದ್ದು, ವಿಧಾನಸೌಧದಲ್ಲಿ ನಾಯಿಗಳ ಕಾಟ ತೀವ್ರವಾಗಿದೆ. ನಾಯಿಗಳ ಪರ ಇದ್ದವರು ಇದ್ದಾರೆ, ವಿರೋಧ ಇದ್ದವರು ಇದ್ದಾರೆ. ಅದನ್ನು ಹೊರಗೆ ಹಾಕೋದೆ ದೊಡ್ಡ ಸಮಸ್ಯೆ ಆಗಿದೆ. ನಾಯಿಗಳನ್ನು ಹೊರ ಹಾಕೋದಕ್ಕೆ ಮೀಟಿಂಗ್ ಕರೆದಿದ್ದೇನೆ. MLAಗಳನ್ನು ಹೊರ ಹಾಕಬಹುದು, ಆದ್ರೆ ನಾಯಿಗಳನ್ನು ಹೊರ ಹಾಕೋದೆ ದೊಡ್ಡ ಸಮಸ್ಯೆ ಎಂದು ಹೇಳಿದ್ದಾರೆ. ಮೀಟಿಂಗ್‌ಗೆ ಪ್ರಾಣಿ ದಯಾ ಸಂಘದವರನ್ನು ಕರೆಯುತ್ತೇವೆ. ನಾಯಿಗಳ ಕಾಟದಿಂದ ವಾಕಿಂಗ್ ಮಾಡುವವರಿಗೂ ಸಮಸ್ಯೆ ಆಗುತ್ತಿದೆ ಎಂದು ಹೇಳಿದ್ದಾರೆ. ಖಾದರ್ ನೇತೃತ್ವದ ನರಿಂಗಾನ ಕಂಬಳದಲ್ಲಿ ಖಾದರ್‌ಗೆ ಸ್ಪೀಕರ್ ಆಗೋದು ಇಷ್ಟ ಇರಲಿಲ್ಲ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಮಾತನಾಡಿದ ಅವರು, ನಾನು ಈಗ ಸರ್ಕಾರದಲ್ಲಿ ಇಲ್ಲ, ನನಗೆ ಏನು ನಡಿತಿದೆ ಅಂತ ಗೊತ್ತಾಗಲ್ಲ. ನಾನು ಈಗ ಇರುವ ಪೋಸ್ಟ್‌ನಲ್ಲಿ ಸಂತೋಷದಿಂದ ಇದ್ದೇನೆ. ಯಾವುದೇ ಅಧಿಕಾರ ಇಲ್ಲದೇ ಇದ್ದರೂ ಸಂತೋಷದಲ್ಲಿ ಇರುತ್ತೇನೆ. ನನಗೆ ಸಂತೋಷದಲ್ಲಿ ಇರುವ ಹುದ್ದೆ ನೀಡಲಿ ಅಂತ ದೇವರಲ್ಲಿ ಕೇಳುತ್ತೇನೆ. ನಾನು ಯಾವಾಗಲೂ ಖುಷಿ ಸಮಾಧಾನದಲ್ಲಿ ಇರುತ್ತೇನೆ. ನಾನು ಸ್ಪೀಕರ್, ನನಗೆ ನಾನೇ ಕಮಾಂಡರ್ ಎಂದು ಯುಟಿ ಖಾದರ್‌ ಹೇಳಿದ್ದಾರೆ.

Add Asianetnews Kannada as a Preferred SourcegooglePreferred

ಮಹಾ ಕುಂಭಮೇಳಕ್ಕೆ ಭೇಟಿ ನೀಡಿ ತೀರ್ಥಸ್ನಾನ ಮಾಡಿದ ಸ್ಪೀಕರ್‌ ಯುಟಿ ಖಾದರ್‌!

ಬಿಟಿ ಲಲಿತಾ ನಾಯಕ್‌ ಮಾತನ್ನು ಒಪ್ಪೋದಿಲ್ಲ, ದೈವ ನರ್ತಕರ ಪವಿತ್ರ ಆಚರಣೆ ಗೌರವಿಸಿ: ಯುಟಿ ಖಾದರ್‌