ವೆಂಟಿಲೇಟರ್, ಆಕ್ಸಿಜನ್ ಬೆಡ್‌ಗಳಿಲ್ಲದೆ ಖಾಲಿ ಬೆಡ್ ನೀಡಿದರೇನು ಪ್ರಯೋಜನ..? ಖಾದರ್ ಕಿಡಿ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಚಿಕಿತ್ಸೆಗೆ ಆಕ್ಸಿಜನ್ ಐಸಿಯು, ವೆಂಟಿಲೇಟರ್‌ಗಳೇ ಸಿಗದ ಪರಿಸ್ಥಿತಿ ಉದ್ಭವಿಸಿದೆ. ರೋಗಿಗಳು ಆಸ್ಪತ್ರೆಗಳನ್ನು ಸುತ್ತಾಡಿ ಹೈರಾಣಾಗುತ್ತಿದ್ದಾರೆ ಎಂದು ಮಾಜಿ ಸಚಿವ, ಶಾಸಕ ಯು.ಟಿ. ಖಾದರ್ ಆರೋಪಿಸಿದ್ದಾರೆ.
ಮಂಗಳೂರು(ಜು.31): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಚಿಕಿತ್ಸೆಗೆ ಆಕ್ಸಿಜನ್ ಐಸಿಯು, ವೆಂಟಿಲೇಟರ್‌ಗಳೇ ಸಿಗದ ಪರಿಸ್ಥಿತಿ ಉದ್ಭವಿಸಿದೆ. ರೋಗಿಗಳು ಆಸ್ಪತ್ರೆಗಳನ್ನು ಸುತ್ತಾಡಿ ಹೈರಾಣಾಗುತ್ತಿದ್ದಾರೆ ಎಂದು ಮಾಜಿ ಸಚಿವ, ಶಾಸಕ ಯು.ಟಿ. ಖಾದರ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಸ್ಪತ್ರೆಗೆ ತೀವ್ರ ಉಸಿರಾಟ ಸಮಸ್ಯೆಯಿಂದ ದಾಖಲಾಗುವ ಸೋಂಕಿತರಿಗೆ ವೆಂಟಿಲೇಟರ್, ಆಕ್ಸಿಜನ್ ಬೆಡ್‌ಗಳಿಲ್ಲದೆ ಕೇವಲ ಖಾಲಿ ಬೆಡ್ ನೀಡಿದರೆ ಏನು ಪ್ರಯೋಜನ? ಒಂದೊಮ್ಮೆ ಬೆಡ್ ಸಿಕ್ಕಿದರೂ ವೈದ್ಯರಿಗಾಗಿ ಕಾಯಬೇಕಾದ ಪರಿಸ್ಥಿತಿಯಿದೆ ಎಂದು ಕಿಡಿ ಕಾರಿದರು.
ಆನ್‌ಲೈನ್ ಮಾಹಿತಿ ನೀಡಿ:
ಜಿಲ್ಲೆಯಲ್ಲಿ ಎಷ್ಟುವೆಂಟಿಲೇಟರ್ ಇವೆ, ಅವುಗಳಲ್ಲಿ ಎಷ್ಟುಬಳಕೆಯಲ್ಲಿವೆ, ಎಷ್ಟುಖಾಲಿ ಇವೆ ಎಂಬುದನ್ನು ಜಿಲ್ಲಾಡಳಿತ ಆನ್‌ಲೈನ್ ಮೂಲಕ ಪ್ರತಿದಿನ ಮಾಹಿತಿ ಅಪ್‌ಡೇಟ್ ಮಾಡಬೇಕು, ಜನರಿಗೆ ಈ ಸಂದರ್ಭದಲ್ಲಿ ಇದು ಅತ್ಯಗತ್ಯ. ಅಲ್ಲದೆ, ಖಾಸಗಿ ಆಸ್ಪತ್ರೆಗಳ ಬೆಡ್‌್ಡಗಳನ್ನು ಆಕ್ಸಿಜನ್ ಬೆಡ್‌ಗಳನ್ನಾಗಿ ಪರಿವರ್ತಿಸಲಿ. ಖಾಸಗಿ ಆಸ್ಪತ್ರೆಗಳ ಮೇಲೆ ಜಿಲ್ಲಾಡಳಿತ ನಿಯಂತ್ರಣವಿಡಲಿ ಎಂದು ಆಗ್ರಹಿಸಿದರು.
ಕಾಫಿನಾಡಿನಲ್ಲಿ ವರ ಮಹಾಲಕ್ಷ್ಮೇ ಹಬ್ಬಕ್ಕೂ ತಟ್ಟಿದ ಕೊರೋನಾ ಭೀತಿ
ಡಿಸಿ ವರ್ಗಾವಣೆಗೆ ಕಾರಣ ಕೊಡಿ: ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ‘ಇದು ಖಾದರ್ ಕಾಲವಲ್ಲ’ ಎಂದು ಹೇಳಿದ್ದಾರೆ. ಅಧಿಕಾರಿಗಳನ್ನು ಒಂದೂವರೆ ಎರಡು ವರ್ಷಕ್ಕೆ ಮೊದಲು ವರ್ಗಾವಣೆ ಮಾಡಬಾರದು ಎಂಬ ನಿಯಮ ಇದೆ. ವೈಯಕ್ತಿಕ ದ್ವೇಷವಿಲ್ಲದೆ ಯಾರೂ ವರ್ಗಾವಣೆ ಮಾಡುವುದಿಲ್ಲ. ನಾನು ಅಧಿಕಾರದಲ್ಲಿದ್ದಾಗ ಈ ರೀತಿ ನಡೆದಿಲ್ಲ. ಕೊರೊನಾ, ಮಳೆಗಾಲದ ಸಮಸ್ಯೆ ಇರುವಾಗಲೇ ವರ್ಗಾವಣೆ ಮಾಡಿದ್ದಕ್ಕೆ ಕಾರಣ ಹೇಳಲಿ ಎಂದು ಒತ್ತಾಯಿಸಿದರು.
ಖಂಡನಾ ಹೇಳಿಕೆ ಏಕಿಲ್ಲ: ಜಿಲ್ಲಾಧಿಕಾರಿಗೆ ಕೊಲೆ ಬೆದರಿಕೆಯೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವೊಬ್ಬ ಸಚಿವರೂ, ಶಾಸಕರೂ ಖಂಡನಾ ಹೇಳಿಕೆ ನೀಡಿಲ್ಲ. ಅಧಿಕಾರಿಗಳಿಗೆ ಧೈರ್ಯ ತುಂಬುವ ಒಂದೂ ಹೇಳಿಕೆ ನೀಡಿಲ್ಲ ಎಂದು ಟೀಕಿಸಿದರು.
ವರವ ಕೊಡೇ ಮಹಾಲಕ್ಷ್ಮೀ... ವರ ಮಹಾಲಕ್ಷ್ಮೀ ವ್ರತದ ಮಹತ್ವ, ಆಚರಣೆ ಬಗ್ಗೆ ಒಂದಷ್ಟು ಮಾಹಿತಿ
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ, ಮಾಜಿ ಶಾಸಕ ಜೆ.ಆರ್. ಲೋಬೋ, ಪ್ರವೀಣ್‌ಚಂದ್ರ ಆಳ್ವ, ಕವಿತಾ ಸನಿಲ್, ವಿಶ್ವಾಸ್‌ಕುಮಾರ್ ದಾಸ್, ಎ.ಸಿ. ವಿನಯರಾಜ್, ಸದಾಶಿವ ಉಳ್ಳಾಲ್, ಮೊಹಮ್ಮದ್ ಕುಂಜತ್ತಬೈಲ್ ಇದ್ದರು.
ದೇಶಕ್ಕೆ ಆಗಮಿಸಿದ ‘ರಫೆಲ್’ ವಿಮಾನ ಕಾಂಗ್ರೆಸ್ ಸರ್ಕಾರದ ಯೋಜನೆ. ಒಟ್ಟು 35 ವಿಮಾನಗಳ ಯೋಜನೆಯಲ್ಲಿ ಮೂರನೇ ಒಂದರಷ್ಟುವಿದೇಶದಿಂದ ಖರೀದಿಸಿ, ಉಳಿದ ರಫೇಲ್ ವಿಮಾನಗಳನ್ನು ದೇಶದ ಹೆಮ್ಮೆಯ ಸಂಸ್ಥೆ ಎಚ್‌ಎಎಲ್‌ನಲ್ಲಿ ತಯಾರಿಸುವ ಯೋಜನೆ ಮಾಡಲಾಗಿತ್ತು. ಆದರೆ ಬಿಜೆಪಿ ಸರ್ಕಾರ ಅದೇ ವಿಮಾನಗಳನ್ನು ಮೂರು ಪಟ್ಟು ಹೆಚ್ಚು ಹಣಕ್ಕೆ ಖರೀದಿಸಿದೆ ಎಂದು ಶಾಸಕ ಯು.ಟಿ. ಖಾದರ್ ಹೇಳಿದ್ದಾರೆ.