ಜೆಡಿಎಸ್‌ನಿಂದ ಸ್ಪರ್ಧಿಸಲು ಮಂಡ್ಯದಲ್ಲಿ ಗಂಡಸರಿಲ್ವಾ ಎಂದ ಕದಲೂರು; ಬಿಜೆಪಿ ಅಧ್ಯಕ್ಷ ನಡ್ಡಾ ಭೇಟಿಯಾದ ಸುಮಲತಾ!
ಜೆಡಿಎಸ್‌ನಿಂದ ಸ್ಪರ್ಧಿಸಲು ಯಾರೂ ಗಂಡಸರಿಲ್ವಾ ಎಂದು ಮದ್ದೂರು ಶಾಸಕ ಉದಯ್ ಕದಲೂರು ಕೆಣಕಿದ್ದಾರೆ. ಮತ್ತೊಂದೆಡೆ ಸಂಸದೆ ಸುಮಲತಾ ಮಂಡ್ಯ ಕ್ಷೇತ್ರ ಜೆಡಿಎಸ್‌ಗೆ ಬಿಟ್ಟುಕೊಡದಂತೆ ಜೆ.ಪಿ. ನಡ್ಡಾ ಅವರನ್ನು ಭೇಟಿಯಾಗಿದ್ದಾರೆ.
ಮಂಡ್ಯ (ಫೆ.08): ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಸಂಸದ ಸ್ಥಾನಕ್ಕೆ ಸ್ಪರ್ಧೆ ಮಾಡುವುದಕ್ಕೆ ಮಂಡ್ಯದಲ್ಲಿ ಯಾರೂ ಗಂಡಸರು ಇಲ್ಲವಾ? ಪಕ್ಷದ ಲೀಡರ್ ಅಥವಾ ಕುಟುಂಬಸ್ಥರೇ ಬರಬೇಕಾ ಎಂದು ಮದ್ದೂರು ಶಾಸಕ ಕದಲೂರು ಉದಯ್ ಹೇಳಿದ್ದಾರೆ. ಮತ್ತೊಂದೆಡೆ, ಸಂಸದೆ ಸುಮಲತಾ ಅಂಬರೀಶ್ ಅವರು ಮಂಡ್ಯ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡದೇ, ಬಿಜೆಪಿಗೆ ಉಳಿಸಿಕೊಂಡು ತನಗೆ ಟಿಕೆಟ್ ನೀಡುವಂತೆ ಬಿಜೆಪಿ ಹೈಕಮಾಂಡ್ ಬಳಿ ಮನವಿ ಮಾಡಿದ್ದಾರೆ.
ಮದ್ದೂರಿನಲ್ಲಿ ಮಾಧ್ಯಮಗಳೊಂದಿಗೆ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ವಿಚಾರದ ಕುರಿತು ಮಾತನಾಡಿದ ಅವರು, ಜೆಡಿಎಸ್‌ನಿಂದ ಸ್ಪರ್ಧೆ ಮಾಡಲು ಮಂಡ್ಯದಲ್ಲಿ ಗಂಡಸರು ಇಲ್ವಾ? ಯಾಕೆ ಬೇರೆ ಯಾವುದೋ ಜಿಲ್ಲೆಯವರು ಇಲ್ಲಿಗೆ ಬಂದು ಸ್ಪರ್ಧೆ ಮಾಡಬೇಕು. ನಮ್ಮದೇ ಜಿಲ್ಲೆಯವರು ಇಲ್ಲಿ ಸ್ಪರ್ಧೆ ಮಾಡಿ ಗೆಲ್ಲಲಿ. ಜೆಡಿಎಸ್ ಪಕ್ಷದಲ್ಲಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಕ್ಕೆ ಸಮರ್ಥ ಕಾರ್ಯಕರ್ತರು ಇಲ್ವಾ? ಎಂದು ಪ್ರಶ್ನೆ ಮಾಡಿದರು.
ಬೆಂಗಳೂರು ಜನ ಸ್ಪಂದನ: ನೂರ್ ಫಾತಿಮಾಗೆ ಎಂಬಿಬಿಎಸ್ ಮಾಡಲು 10 ಲಕ್ಷ ರೂ. ಕೊಟ್ಟ ಸಿಎಂ ಸಿದ್ದರಾಮಯ್ಯ!
ಮಂಡ್ಯದಲ್ಲಿ ಸ್ಪರ್ಧೆ ಮಾಡುವುದಕ್ಕೆ ಲೀಡರ್‌ಗಳ ಮಕ್ಕಳು ಹಾಗೂ ಕುಟುಂಬಸ್ಥರೆ ಬರಬೇಕಾ? ಮಂಡ್ಯಗೆ ಯಾರು ಬಂದರು ನಮಗೆ ಚಿಂತೆ ಆಗೋದಿಲ್ಲವಾ? ಆದ್ದರಿಂದ, ಜನರ ಅಭಿಪ್ರಾಯ ಕಾಂಗ್ರೆಸ್ ಪರವಾಗಿದೆ. ಕಳೆದ 5 ವರ್ಷದಿಂದ ನಿಖಿಲ್ ಕುಮಾರಸ್ವಾಮಿ ಎಲ್ಲಿಗೆ ಹೋಗಿದ್ದರು. ಜನ ಸೇವೆ ಮಾಡೋರು ನಿರಂತರವಾಗಿ ಇರಬೇಕು. ಚುನಾವಣೆ ಬಂದಾಗ ಬರೋಕೆ, ಚುನಾವಣೆಗಾಗು ಬಂದವರನ್ನು ಸ್ವೀಕಾರ ಮಾಡುವುದಕ್ಕೆ ಮಂಡ್ಯ ಜಿಲ್ಲೆ ಜನ ದಡ್ಡರು ಅಲ್ಲ. ಆದ್ದರಿಂದ ಕಳೆದ ಬಾರಿಯೇ ಮಂಡ್ಯ ಜನರು ನಿಖಿಲ್ ಕುಮಾರಸ್ವಾಮಿಗೆ ಸೂಕ್ತ ಫಲಿತಾಂಶ ನೀಡಿದ್ದಾರೆ ಎಂದು ಹೇಳಿದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಭೇಟಿ ಮಾಡಿದ ಸಂಸದೆ ಸುಮಲತಾ: ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಯಪ್ರಕಾಶ್ ನಡ್ಡಾ ಹಾಗೂ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನು ಸಂಸದೆ ಸುಮಲತಾ ಅವರು ಭೇಟಿ ಮಾಡಿ ಚರ್ಚೆ ಮಾಡಿದ್ದಾರೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಮಾಡಿಕೊಂಡಿದ್ದು, ಕೆಲವು ಕ್ಷೇತ್ರಗಳ ಹಂಚಿಕೆಯ ಬಗ್ಗೆಯೂ ಮಾತುಕತೆ ಮಾಡಲಾಗಿದೆ. ಆದರೆ, ಮಂಡ್ಯ ಕ್ಷೇತ್ರವನ್ನು ಯಾವುದೇ ಕಾರಣಕ್ಕೂ ಜೆಡಿಎಸ್‌ಗೆ ಬಿಟ್ಟುಕೊಡದೇ, ಬಿಜೆಪಿಗೆ ಉಳಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.
ಜೊತೆಗೆ, ಇದೇ ವೇಳೆ ಮಂಡ್ಯ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಅನ್ನು ತಮಗೆ ನೀಡುವಂತೆ ವಿನಂತಿ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಹಳೆಯ ಮೈಸೂರು ಪ್ರಾಂತ್ಯದಲ್ಲಿ ಕೇಸರಿ ಧ್ವಜ ಹಾರಾಟ ಹಾಗೂ ಬಿಜೆಪಿ ಕಮಲವನ್ನು ಅರಳಿಸಲು ಈಗ ಒಳ್ಳೆಯ ಕಾಲವೆಂದು ಬಿಜೆಪಿ ಹೈಕಮಾಂಡ್ ನಾಯಕರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಭೇಟಿಯ ನಂತರ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಕಾಂಗ್ರೆಸ್ ಸರ್ಕಾರದಲ್ಲೂ ಶೇ.40 ಕಮಿಷನ್ ಕಂಟಿನ್ಯೂ ಆಗಿದೆ; ಆಗ ಶಾಸಕರು ಕೇಳ್ತಿದ್ರು, ಈಗ ಅಧಿಕಾರಿಗಳೇ ಕೇಳ್ತಾರೆ!
ನಾಳೆ ಮಂಡ್ಯ ನಗರ ಬಂದ್‌ಗೆ ಕರೆ ಕೊಟ್ಟ ಹಿಂದುಪರ ಸಂಘಟನೆಗಳು: ಮಂಡ್ಯ ತಾಲೂಕಿನ ಕೆರೆಗೋಡು ಗ್ರಾಮದಲ್ಲಿ ನಿರ್ಮಾಣ ಮಾಡಲಾಗಿದ್ದ 108 ಅಡಿ ಎತ್ತರದ ಧ್ವಜ ಸ್ತಂಭದ ಮೇಲೆ ಹಾರಿಸಲಾಗಿದ್ದ ಹನುಮಧ್ವಜ ತೆರವು ವಿವಾದ ಹಿನ್ನೆಲೆಯಲ್ಲಿ ಹಿಂದುಪರ ಸಂಘಟನೆಗಳಿಂದ ನಾಳೆ ಮಂಡ್ಯ ನಗರ ಬಂದ್‌ಗೆ ಕರೆ ನೀಡಲಾಗಿದೆ. ಮಂಡ್ಯದ ಎಲ್ಲ ವರ್ತಕರು ಸ್ವಯಂ ಆಗಿ ಅಂಗಡಿ ಉಂಗಟ್ಟುಗಳನ್ನು ಮುಚ್ಚುವ ಮೂಲಕ ಬಂದ್‌ಗೆ ಬೆಂಬಲ ನೀಡುವಂತೆ ಹಿಂದುಪರ ಸಂಘಟನೆಗಳ ಸದಸ್ಯರು ಹಾಗೂ ಬಿಜೆಪಿ ಕಾರ್ಯಕರ್ತರು ವರ್ತಕರಿಗೆ ಗುಲಾಬಿ ಹೂವುಗಳನ್ನು ಬಂದ್‌ಗೆ ಬೆಂಬಲಿಸುವಂತೆ ಮನವಿ ಮಾಡಿದ್ದಾರೆ.