Asianet Suvarna News Asianet Suvarna News

ಶಾಸಕ ಸ್ವರೂಪ್‌ ಪ್ರಕಾಶ್‌ಗೆ ಕರೆಂಟ್‌ ಶಾಕ್ ಹೊಡೆಸಿದ ಹಾಸನ ನಗರಸಭೆ

ಹಾಸನ ನಗರಸಭೆಯಲ್ಲಿ ವೇದಿಕೆ ಮೇಲೆ ನಿಂತು ಮಾತನಾಡುತ್ತಿದ್ದ ಶಾಸಕ ಸ್ವರೂಪ್‌ ಪ್ರಕಾಶ್‌ ಅವರು ಮೈಕ್‌ ಮುಟ್ಟಿದಾಗ ಕರೆಂಟ್‌ ಶಾಕ್‌ ಹೊಡೆದಿದೆ.

MLA Swaroop Prakash was given electric shock by Hassan Municipal Council sat
Author
First Published Oct 16, 2023, 6:34 PM IST | Last Updated Oct 16, 2023, 6:34 PM IST

ಹಾಸನ (ಅ.16): ಹಾಸನ ನಗರಸಭೆಯಲ್ಲಿ ವೇದಿಕೆ ಮೇಲೆ ನಿಂತು ಮಾತನಾಡುತ್ತಿದ್ದ ಶಾಸಕ ಸ್ವರೂಪ್‌ ಪ್ರಕಾಶ್‌ ಅವರಿಗೆ ಸಿಟ್ಟಿಂಗ್‌ ಮೈಕ್‌ ಮುಟ್ಟಿದಾಗ ಕರೆಂಟ್‌ ಶಾಕ್‌ ಹೊಡೆದಿದ್ದು, ಅದರಿಂದ ಕೈ ತೆಗೆದ ತಕ್ಷಣವೇ ಕರೆಂಟ್‌ ಹೋಗಿದೆ.

ಹಾಸನ ನಗರಸಭೆ ಸಾಮಾನ್ಯ ಸಭೆ ವೇಳೆ ಶಾಸಕ ಸ್ವರೂಪ್ ಗೆ ಕರೆಂಟ್ ಶಾಕ್ ಹೊಡೆದಿದೆ. ಸಾಮಾನ್ಯ ಸಭೆಯಲ್ಲಿ ವೇದಿಕೆ ಮೇಲೆ ನಿಂತು ಮಾತನಾಡೋ ವೇಳೆ ಕರೆಂಟ್ ಶಾಕ್ ಹೊಡೆಸಿಕೊಂಡಿದ್ದಾರೆ. ನಗರಸಭೆ ಕುವೆಂಪು ಸಭಾಂಗಣದಲ್ಲಿ ನಡೆಯುತ್ತಿದ್ದ ನಗರಸಭಾಧ್ಯಕ್ಷ ಮೋಹನ್‌ಕುಮಾರ್ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಸಾಮಾನ್ಯ ಸಭೆಯಲ್ಲಿ ಶಾಸಕ ಎಚ್.ಪಿ.ಸ್ವರೂಪ್‌ಪ್ರಕಾಶ್ ಭಾಗಿಯಾಗಿದ್ದರು. ಈ ವೇಳೆ ಮಾತನಾಡುತ್ತಾ ವೇದಿಕೆ ಮೇಲಿದ್ದ ಟೇಬಲ್ ಮೈಕ್ ಮುಟ್ಟಿದ ಶಾಸಕ ಸ್ವರೂಪ್‌ ಪ್ರಕಾಶ್ ಅವರಿಗೆ ವಿದ್ಯುತ್ ಶಾಕ್ ತಗುಲಿದೆ. ಶಾಸಕ ಸರೂಪ್‌ಗೆ ವಿದ್ಯುತ್ ಶಾಕ್ ಹೊಡೆಯುತ್ತಲೇ ವಿದ್ಯುತ್ ಕಡಿತಗೊಂಡಿದೆ. 

ಹಾಸನದ ಮದ್ಯದಂಗಡಿ ವಿಚಾರಕ್ಕೆ ಜನತಾದರ್ಶನ ವೇದಿಕೆಯಲ್ಲಿ ಕಿತ್ತಾಡಿಕೊಂಡ ಶಾಸಕರು

ದೇಶದಲ್ಲಿ ಮೋದಿ ಆಯ್ಕೆ ಮಾಡಿದ್ರೆ ಉಳಿತೀರಿ, ಇಲ್ಲಾಂದ್ರೆ ಯಾರೂ ಉಳಿಯೊಲ್ಲ
ಬಾಗಲಕೋಟೆ (ಅ.16): ದೇಶದಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹಾಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಆಯ್ಕೆ ಮಾಡಿದರೆ ಎಲ್ಲರೂ ಉಳಿಯುತ್ತೀರಿ, ಮೋದಿಯನ್ನ ಆರಿಸಿ ತರಲಿಲ್ಲವೆಂದರೆ ಯಾರೂ ಉಳಿಯೋದಿಲ್ಲ ಎಂದು ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಪಟ್ಟಣದ ಮಹಾಲಿಂಗೇಶ್ವರ ದೇವಸ್ಥಾನದ ಮಹಾಲಿಂಗೇಶ್ವರ ಸ್ವಾಮೀಜಿ ಸ್ಪೋಟಕ ಭವಿಷ್ಯ ನುಡಿದಿದ್ದಾರೆ.

ಮಹಲಿಂಗೇಶ್ವರ ದೇವಸ್ಥಾನದಲ್ಲಿ ನವರಾತ್ರಿ ಹಿನ್ನೆಲೆ ನಡೆದ ವಿಶೇಷ ಪೂಜೆಯ ನಂತರ ಜಟ ಹಿಡಿದು ಭವಿಷ್ಯ ನುಡಿದಿರುವ ಮಹಲಿಂಗೇಶ್ವರ ಸ್ವಾಮೀಜಿ ಅವರು, ಜಟ ಹಿಡಿದು ಪ್ರದರ್ಶನ ಮಾಡಿದ ಅವರು ಇದರ ಮೇಲೆ ಏನಾದ್ರೂ ವ್ಯತ್ಯಾಸ ಮಾಡಿದ್ರಿ ಅಂದ್ರ ಉಳಿತೀರಿ, ಮೋದಿನ ಆರಿಸಿ ತರ್ಲಿಲ್ಲಾಂದ್ರ ನೀವ್ಯಾರೂ ಉಳಿಯಲ್ಲ ಎಂದು ಸ್ಪೋಟಕ ಭವಿಷ್ಯವನ್ನು ನುಡಿದಿದ್ದಾರೆ. ಇದರಿಂದ ರಾಜಕೀಯ ವಲಯದಲ್ಲಿ ಭಾರಿ ಸಂಚಲನವೇ ಸೃಷ್ಟಿಯಾಗಿದೆ. ಲೋಕಸಭಾ ಚುನಾವಣೆಗೂ ಮುನ್ನ ಈ ವೀಡಿಯೋ ಭಾರಿ ವೈರಲ್‌ ಆಗುತ್ತಿದೆ. 

ಹಾಸನದ ಮದ್ಯದಂಗಡಿ ವಿಚಾರಕ್ಕೆ ಜನತಾದರ್ಶನ ವೇದಿಕೆಯಲ್ಲಿ ಕಿತ್ತಾಡಿಕೊಂಡ ಶಾಸಕರು
ಹಾಸನ (ಅ.16):
ಸರ್ಕಾರದಿಂದ ಹಾಸನ ಜಿಲ್ಲೆ ಅರಸೀಕೆರೆಯಲ್ಲಿ ಏರ್ಪಡಿಸಲಾಗಿದ್ದ ತಾಲೂಕು ಮಟ್ಟದ ಜನತಾದರ್ಶನ ಕಾರ್ಯಕ್ರಮದ ವೇದಿಕೆಯಲ್ಲಿ ಕಾಂಗ್ರೆಸ್‌ ಶಾಸಕ ಶಿವಲಿಂಗೇಗೌಡ ಹಾಗೂ ಬೇಲೂರು ಶಾಸಕ ಹುಲ್ಲಳ್ಳಿ ಸುರೇಶ್‌ ಪರಸ್ಪರ ಕಿತ್ತಾಡಿಕೊಂಡಿರುವ ಘಟನೆ ನಡೆದಿದೆ. ತಾಲೂಕು ಮಟ್ಟದಲ್ಲಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಲು ಸರ್ಕಾರದಿಂದ ಜನತಾದರ್ಶನ ಕಾರ್ಯಕ್ರಮವನ್ನು ಏರ್ಪಡಿಸಲಾಗುತ್ತಿದೆ. ಸರ್ಕಾರದಿಂದ ತಾಲೂಕು ಮಟ್ಟದಲ್ಲಿ ಏರ್ಪಡಿಸುವ ಜನತಾದರ್ಶನ ಕಾರ್ಯಕ್ರಮದಲ್ಲಿ ಜನರ ಸಮಸ್ಯೆಗಳನ್ನು ಆಲಿಸುವುದಕ್ಕಿಂತ ಶಾಸಕರ ಬಹಿರಂಗ ಜಗಳಕ್ಕೆ ವೇದಿಕೆ ಕಲ್ಪಿಸಿಕೊಟ್ಟಂತಾಗಿದೆ. ವೇದಿಕೆ ಮೇಲೆಯೇ ಸಾರ್ವಜನಿಕರ ಸಮಸ್ಯೆ ಆಲಿಸುವುದು ಬಿಟ್ಟು ವಾಕ್ಸಮರ ಮಾಡಿಕೊಳ್ಳುತ್ತಾ ಪುಡಿ ರೌಡಿಗಳಂತೆ ಹೊಡೆದಾಡುವುದಕ್ಕೆ ಮುಂದಾಗುವ ದೃಶ್ಯಗಳನ್ನು ಕೋಲಾರ ಜಿಲ್ಲಾ ಜನತಾದರ್ಶನ ವೇದಿಕೆಯಲ್ಲಿ ಕಣ್ಣಾರೆ ನೋಡಿದ್ದೇವೆ. ಈಗ ಇದೇ ತರಹದ ಹಾಸನದಲ್ಲಿ ನಡೆದಿದೆ.

ಎಸ್‌ಎಸ್‌ಎಲ್‌ಸಿ ಫಸ್ಟ್ ಕ್ಲಾಸು- ಪಿಯುಸಿ ಸೆಕೆಂಡ್ ಕ್ಲಾಸು ಅದಕ್ಕೇ ಮೆಡಿಕಲ್‌ ಸೀಟು ಸಿಗ್ಲಿಲ್ಲ: ಸಿಎಂ ಸಿದ್ದರಾಮಯ್ಯ

ಇನ್ನು ಶಾಸಕರ ನಡುವಿನ ಗಲಾಟೆಯಿಂದ ಇಬ್ಬರ ಕಾರ್ಯಕರ್ತರ ನಡುವೆಯೂ ಗದ್ದಲ ಗಲಾಟೆ ಶುರುವಾಯಿತು.  ಮೊದಲು ಭಾಷಣ ಮಾಡಿದ ಶಾಸಕ ಶಿವಲಿಂಗೇಗೌಡ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ನಂತರ ವೇದಿಕೆಗೆ ಭಾಷಣಕ್ಕೆ ಬಂದ ಶಾಸಕ ಹುಲ್ಲಳ್ಳಿ ಸುರೇಶ್‌ ಅವರು ಶಿವಲಿಂಗೇಗೌಡರ ಎಲ್ಲ ಆರೋಪಗಳಿಗೂ ಟಾಂಗ್‌ ನೀಡಲು ಮುಂದಾದರು. ಸುರೇಶ್ ಭಾಷಣ ಮುಗಿಯುತ್ತಿದ್ದಂತೆ ಪುನಃ ಶಿವಲಿಂಗೇಗೌಡ ಭಾಷಣ ಮಾಡಿ ಟಾಂಗ್‌ ಕೊಡೋದಕ್ಕೆ ಮುಂದಾದರು. ಆಗ, ಮತ್ತೊಂದು ಮೈಕ್ ತೆಗೆದುಕೊಂಡ ಸುರೇಶ್ ಇಬ್ಬರೂ ಒಬ್ಬರಿಗೊಬ್ಬರು ವಾಗ್ದಾಳಿ ಮಾಡಿಕೊಂಡರು. ಜನರೆದುರೇ ಇಬ್ಬರು ಶಾಸಕರು ಪರಸ್ಪರ ಬೈದಾಡಿಕೊಳ್ಳುತ್ತಿದ್ದರೂ ಎಲ್ಲವನ್ನೂ‌ ನೋಡುತ್ತಾ ಉಸ್ತುವಾರಿ ಕೆ.ಎನ್.ರಾಜಣ್ಣ ಸುಮ್ಮನೆ ಕುಳಿತಿದ್ದರು.

Latest Videos
Follow Us:
Download App:
  • android
  • ios