ಮಂಡ್ಯ(ಮೇ 28): ಈ ಹಿಂದೆ ಒಂದೇ ತಾಯಿಯ ಮಕ್ಕಳಂತೆ ಇದ್ದ ಈಗಿನ ಜಿಲ್ಲಾ ಮಂತ್ರಿ ನಾರಾಯಣಗೌಡ ಹಾಗೂ ಜೆಡಿಎಸ್‌ ಶಾಸಕರು ಮಲತಾಯಿ ಮಕ್ಳಳಂತೆ ಈಗ ದಾಯಾದಿಗಳಾಗಿ ಕಾದಾಡುತ್ತಿದ್ದಾರೆ.

ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಮಂತ್ರಿ ಕೆ.ಸಿ. ನಾರಾಯಣಗೌಡ ಅಧ್ಯಕ್ಷತೆಯಲ್ಲಿ ನಡೆದ ಕೋವಿಡ್‌- 19 ಪರಿಶೀಲನೆ ಸಭೆಯಲ್ಲಿ ಜೆಡಿಎಸ್‌ ಶಾಸಕರು ಮತ್ತು ಮಂತ್ರಿಗಳ ನಡುವೆ ಜಟಾಪಟಿಯೇ ನಡೆಯಿತು. ಮಾಧ್ಯಮದವರನ್ನು ಸಭೆಯಿಂದಲೇ ಹೊರಗಿಟ್ಟು ಮಾಡಿದ ಜಗಳದಲ್ಲಿ ಪರಸ್ಪರ ನೀನ್ಯಾವನು ಕೇಳೋಕೆ ಹೋಗಲೇ... ಶಾಸಕರು ಜಿಲ್ಲಾ ಮಂತ್ರಿಯನ್ನೇ ಏಕ ವಚನದಲ್ಲಿ ಬೈದು ಹೀಯಾಳಿಸಿ ಮಾತುಗಳು ಮಾತ್ರ ಕಿಟಕಿಯನ್ನೂ ದಾಟಿ ಕೇಳಿ ಬಂದವು. ಸಚಿವರ ಜೊತೆ ಶಾಸಕರು ವಾಗ್ವಾದಕ್ಕೆ ಇಳಿದರು. ಅಧಿಕಾರಿಗಳು ಮಾತ್ರ ಮೂಕ ಪ್ರೇಕ್ಷಕರಾಗಿದ್ದರು.

ಸಭೆಲಿ ಗಲಾಟೆಗೆ ಪ್ರೇರಣೆ:

ಜಿಲ್ಲಾ ಮಂತ್ರಿ ಇತ್ತೀಚೆಗೆ ನಾಗಮಂಗಲದಲ್ಲಿ ಶಾಸಕರ ಸುರೇಶ್‌ಗೌಡರನ್ನು ಕುರಿತು ಪರ್ಸನಲ್‌ ಮಾತನಾಡಿದ್ದನ್ನು ಬಹಿರಂಗ ಮಾಡಲೇ ಎಂದು ಮಂತ್ರಿ ಏರಿದ ಧ್ವನಿಯಲ್ಲಿ ಹೇಳಿದ್ದು ಸಾಕಷ್ಟುಪ್ರತಿಧ್ವನಿಯಾಗಿತ್ತು. ನಂತರ ಶಾಸಕ ಸುರೇಶ್‌ ಗೌಡರು ಸುದ್ದಿಗೋಷ್ಠಿಯಲ್ಲಿ ಬ್ಲ್ಯೂ ಫಿಲ್ಮ್‌ ಸಿಡಿ ಇದ್ದರೆ ಬಹಿರಂಗ ಮಾಡಿ ಎಂದು ಮಂತ್ರಿ ಸವಾಲು ಹಾಕಿದ್ದು ಇಂದಿನ ಸಭೆಯ ಗಲಾಟೆ ಪ್ರಚೋದನೆ ನೀಡಿತ್ತು.

ಜಿಲ್ಲಾಡಳಿತದ ವಿರುದ್ಧ ಆಕ್ರೋಶ:

ಕೋವಿಡ್‌ -19 ವಿಚಾರದಲ್ಲಿ ಜಿಲ್ಲಾ ಮಂತ್ರಿ ಹಾಗೂ ಜಿಲ್ಲಾ ಆಡಳಿತ ಸರಿಯಾದ ರೀತಿಯಲ್ಲಿ ನಡೆದುಕೊಳ್ಳುತ್ತಿಲ್ಲ. ಕ್ವಾರಂಟೈನ್‌ ಕೇಂದ್ರಗಳು ಅವ್ಯವಸ್ಥೆಯಿಂದ ಕೂಡಿವೆ. ಸರಿಯಾದ ಮಾಹಿತಿ ಕೊಡುತ್ತಿಲ್ಲ. ಹಣಕಾಸಿನ ಕೊರತೆ ಇಲ್ಲದೇ ಹೋದದರೂ ಕೂಡ ಖರ್ಚು ಮಾಡಲು ಜಿಲ್ಲಾಡಳಿತ ಮೀನಾಮೇಷ ಎಣಿಸುತ್ತಿದೆ ಎಂದು ಶಾಸಕರಾದ ಸುರೇಶ…ಗೌಡ, ರವೀಂದ್ರ ಶ್ರೀಕಂಠಯ್ಯ ಸಭೆಯಲ್ಲಿ ತರಾಟೆ ತೆಗೆದುಕೊಂಡ ಸಂಗತಿಗಳು ಜಿಲ್ಲಾ ಮಂತ್ರಿಗಳ ಆವೇಶ ಹಾಗೂ ವಾಗ್ವಾದಕ್ಕೂ ಕಾರಣವಾಯಿತು ಎಂದು ಸಭೆಯಲ್ಲಿದ್ದ ಮೂಲಗಳು ಹೇಳಿವೆ.

ಲಕ್ಷಣವಿಲ್ಲದಿದ್ರೂ ಸೊಂಕು: ಜಿಲ್ಲಾಡಳಿತಕ್ಕೆ ತಲೆನೋವು

ಸಭೆಯ ಆರಂಭದಿಂದಲೂ ಜೆಡಿಎಸ್‌ ಶಾಸಕರು ಜಿಲ್ಲಾ ಸಚಿವರು ಹಾಗೂ ಅಧಿಕಾರಿಗಳ ವೈಫಲ್ಯಗಳನ್ನು ಎತ್ತಿ ತೋರಿಸಿ ಗಳನ್ನು ತರಾಟೆಗೆ ತೆಗೆದುಕೊಂಡರು. ಇದು ಜಿಲ್ಲಾ ಮಂತ್ರಿ ಕೋಪ ತರಿಸುವಂತೆ ಮಾಡಿ ಸಭೆಯಲ್ಲಿ ಏರಿದ ಧ್ವನಿಯಲ್ಲೇ ಮಾತನಾಡಲು ಪ್ರೇರಣೆ ನೀಡಿತು. ಆಗ ಶಾಸಕ ಸುರೇಶ… ಗೌಡ, ಸಚಿವ ನಾರಾಯಣಗೌಡ ನಡುವೆ ಮಾತಿನ ಚಕಮಕಿ ಆರಂಭವಾಯಿತು.

ಒಳ ಪ್ರವೇಶಕ್ಕೆ ಯತ್ನಿಸಿದ ಮಾಧ್ಯಮದವರನ್ನು ಶಾಸಕ ಪುಟ್ಟರಾಜು ತಡೆದು, ಏನೂ ಆಗಿಲ್ಲ ನಡೀರಪ್ಪ. ಪರಸ್ಪರ ಪ್ರೀತಿಯಿಂದ ಮಾತನಾಡುತ್ತದ್ದೇವೆ ಎಂದು ಸಮಾಧಾನ ಕಳುಹಿಸಿದರು. ಸಭೆಯಲ್ಲಿ ಶಾಸಕರಾದ ಸಿ.ಎಸ್‌. ಪುಟ್ಟರಾಜು, ಎಂ. ಶ್ರೀನಿವಾಸ್‌, ಡಾ. ಅನ್ನದಾನಿ ರವೀಂದ್ರ ಶ್ರೀಕಂಠಯ್ಯ ಸೇರಿದಂತೆ ಜಿಲ್ಲಾಧಿಕಾರಿಗಳು ಸಹ ಪಾಲ್ದೊಂಡಿಡ್ದರು.

ಜೂನ್ ನಂತ್ರ ಮಾಲ್, ಥಿಯೇಟರ್ ಬಿಟ್ಟು ಮತ್ತೆಲ್ಲವೂ ಓಪನ್..?

ನಮ್ಮದು ಯಾವುದೇ ಜಗಳ ಇಲ್ಲ. ಸುರೇಶ್‌ ಗೌಡ ಹಾಗೂ ನನ್ನ ನಡುವೆ ಸದಾ ಕೋಳಿ ಜಗಳ ಇದ್ದೇ ಇರುತ್ತದೆ. ಸಂಪರ್ಕದ ಕೊರತೆಯಿಂದಾಗಿ ಕೆಲವು ಸಂಗತಿಗಳನ್ನು ಹಂಚಿಕೊಳ್ಳಲು ಸಾಧ್ಯವಾಗಿರಲಿಲ್ಲ. ಈಗ ಎಲ್ಲವೂ ಸರಿ ಹೋಗಿದೆ. ಮುಂದೆ ಜಗಳ ಇಲ್ಲ. ಎಲ್ಲರೂ ಒಗ್ಗಟ್ಟಾಗಿ ಹೋಗುತ್ತೇವೆ ಎಂದು ಕೆ.ಸಿ. ನಾರಾಯಣಗೌಡ ತಿಳಿಸಿದ್ದಾರೆ.

ನಮಗೆ ಜಿಲ್ಲಾ ಹಿತಾಸಕ್ತಿ ಬಹಳ ಮುಖ್ಯ. ನಾವು ಯಾರೊಂದಿಗೂ ಕಾಲು ಕೆರೆದುಕೊಂಡು ಜಗಳಕ್ಕೆ ಹೋಗುವುದಿಲ್ಲ.ಜಿಲ್ಲಾಡಳಿತ ಮಾಡುವ ತಪ್ಪುಗಳನ್ನು ಮಂತ್ರಿಯಾದವರು ಗಂಭೀರವಾಗಿ ಚರ್ಚೆ ಮಾಡಿ ಸಮಸ್ಯೆಗಳನ್ನು ಪರಿಹರಿಸಬೇಕು. ಜವಾಬ್ದಾರಿ ಮರೆತರೆ ಹೋರಾಟಗಳು ಅನಿವಾರ್ಯವಾಗುತ್ತದೆ. ನನಗೆ ಸಚಿವರೊಂದಿಗೆ ಯಾವುದೇ ವೈಯಕ್ತಿಕ ದ್ವೇಷವಿಲ್ಲ. ಆದರೆ, ನಾವು ಸಮರಕ್ಕೂ ಸಿದ್ದ, ಸ್ನೇಹಕ್ಕೂ ಬದ್ಧ ಎಂದು ಶಾಸಕ ಸುರೇಶ್ ಗೌಡ ತಿಳಿಸಿದ್ದಾರೆ.