ಅರಸೀಕೆರೆ (ನ.01):  ರಾಮಾಯಣದಂತಹ ಮಹಾನ್‌ ಗ್ರಂಥವನ್ನು ರಚಿಸುವ ಮೂಲಕ ವಾಲ್ಮೀಕಿ ಮಹರ್ಷಿ ಜಗತ್ತಿಗೆ ನೀಡಿದ ಕೊಡುಗೆ ಅಪಾರವಾಗಿದೆ. ಅದನ್ನು ಯಾರೂ ಮರೆಯುವಂತಿಲ್ಲ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಅಭಿಪ್ರಾಯಪಟ್ಟರು.

ತಾಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ ಹಾಗೂ ವಾಲ್ಮಿಕಿ ಮಹಾಸಭಾ ಸಂಘದ ವತಿಯಿಂದ ಜೇನುಕಲ್‌ ನಗರ ಬಡಾವಣೆಯಲ್ಲಿರುವ ವಾಲ್ಮೀಕಿ ಸಮುದಾಯ ಭವನದಲ್ಲಿ ವಾಲ್ಮೀಕಿ ಜಯಂತಿ ಅಂಗವಾಗಿ ಏರ್ಪಡಿಸಿದ್ದ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಾಲ್ಮೀಕಿ ಕೇವಲ ಕವಿ, ಸಂತ, ತತ್ವಜ್ಞಾನಿ ಮಾತ್ರವಲ್ಲ ದೈವಸಂಭೂತ. ಜಗತ್ತಿನಲ್ಲಿ ಧರ್ಮವನ್ನು ಉಳಿಸಲು ಜನಿಸಿದ ಮಹಾನ್‌ ಪುರುಷ ಎಂದರು.

ಮುನಿರತ್ನ ಏನೇನು ಮಾತನಾಡುತ್ತಾರೋ ಮಾತನಾಡಲಿ: ಡಿ.ಕೆ.ಸುರೇಶ

ಇತ್ತೀಚಿಗೆ ನಡೆದ ಕ್ಯಾಬಿನೆಟ್‌ ಉಪಸಮಿತಿ ಸಭೆಯಲ್ಲಿ ಈಗಿರುವ ಮೀಸಲಾತಿಯನ್ನೆ ಮುಂದುವರೆಸಲಾಗುವುದೆಂದು ನಿರ್ಣಯಿಸಿ ಸರ್ಕಾರ ಹೈಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಲಾಗಿತ್ತು. ಆದರೆ ರಾತ್ರೋರಾತ್ರಿ ಮುಖ್ಯಮಂತ್ರಿಗೆ ತಪ್ಪು ಮಾಹಿತಿ ನೀಡಿ ಹಾಗೂ ಅವರ ಮೇಲೆ ಒತ್ತಡ ಹೇರಿ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ನಗರಸಭಾ ಅಧ್ಯಕ್ಷ ಸ್ಥಾನವನ್ನು ಎಸ್‌.ಟಿ ಮೀಸಲಾತಿ ಬದಲಿಸಲಾಗಿದೆ 32 ಸ್ಥಾನಗಳಿರುವ ನಗರಸಭೆಯಲ್ಲಿ ಕೇವಲ 5 ಸ್ಥಾನ ಹೊಂದಿರುವ ಬಿಜೆಪಿ ಹೇಗೆ ಅಧಿಕಾರ ನಡೆಸಲು ಸಾಧ್ಯ ಒಂದು ಸಭೆಯನ್ನು ಕರೆದು ನಿರ್ಣಯವನ್ನು ಅಂಗೀಕರಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಮುಂದಿನ ಚುನಾವಣೆಯಲ್ಲಿ ನನ್ನನ್ನು ಸೋಲಿಸಬೇಕು ಎಂದು ಬಂದಿರುವ ವ್ಯಕ್ತಿ ನಗರಸಭೆಗೆ ಎಸ್ಟಿಮಿಸಲಾಯಿತಿ ಮಾಡಿಸಿಕೊಂಡು ಬಂದು ನನ್ನನ್ನು ಪರಿಶಿಷ್ಟಪಂಗಡದ ವಿರೋಧಿ ಎಂದು ಬಿಂಬಿಸಲು ಹೊರಟಿದ್ದಾರೆ. ಟಿಎಪಿಸಿಎಂಎಸ್‌ನಲ್ಲಿ ವಾಲ್ಮೀಕಿ ಜನಾಂಗದ ಕುಮಾರ್‌ ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದೆ ಎಪಿಎಂಸಿಯಲ್ಲಿ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಇದೇ ಜನಾಂಗದ ಬಾಯ್ಲರ್‌ ಕುಮಾರ್‌ರವರನ್ನು ಉಪಾಧ್ಯಕ್ಷರನ್ನಾಗಿ ಮಾಡಲಾಗಿದೆ. ಈ ಹಿಂದೆ ಕಲ್ಲೇಶಪ್ಪ ಅವರನ್ನು ಎಪಿಎಂಸಿ ಅಧ್ಯಕ್ಷರನ್ನಾಗಿ, ತಾ.ಪಂ ಉಪಾಧ್ಯಕ್ಷರನ್ನಾಗಿ ಮಾಡಿದ್ದೀನಿ. ಇದೇ ರೀತಿ ಆನೇಕ ಗ್ರಾ.ಪಂಗಳಲ್ಲೂ ವಾಲ್ಮೀಕಿ ಜನಾಂಗಕ್ಕೆ ಸಾಮಾನ್ಯ ವರ್ಗಕ್ಕೆ ಮೀಸಲಿದ್ದಾಗಲೇ ಅವಕಾಶ ಕಲ್ಪಿಸಿದ್ದೀನಿ ನಾನು ಪರಿಶಿಷ್ಟವರ್ಗದ ವಿರೋಧಿಯೇ ಎಂದು ಪ್ರಶ್ನಿಸಿದರು.

ಇದಕ್ಕೂ ಮುನ್ನ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎನ್‌.ಡಿ ಪ್ರಸಾದ್‌ ಮಾತನಾಡಿ, 1947 ರಿಂದ ಪುರಸಭೆ ಹಾಗೂ ನಗರಸಭೆಯ ಅಧ್ಯಕ್ಷರಾಗಿ ಎಲ್ಲಾ ಸಮಾಜದ ಜನರು ಕೆಲಸ ಮಾಡಿದ್ದಾರೆ ಆದರೆ ಪರಿಶಿಷ್ಟವರ್ಗಕ್ಕೆ ಅವಕಾಶ ಸಿಕ್ಕಿಲ್ಲ ಇದನ್ನು ಅರಿತ ರಾಜ್ಯ ಸರ್ಕಾರ ಅಧ್ಯಕ್ಷ ಸ್ಥಾನವನ್ನು ಸಾಮಾಜಿಕ ನ್ಯಾಯದ ತಳಹದಿಯಲ್ಲಿ ಎಸ್ಟಿಜನಾಂಗಕ್ಕೆ ಮೀಸಲಾತಿಯನ್ನು ಘೋಷಿಸಿದ್ದು ಅವರು ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಡಬೇಕೆಂದು ವಿನಂತಿಸಿದರು.