ಚಿತ್ರದುರ್ಗ(ಮಾ.06):  ಪ್ರೋ ಕಬ್ಬಡಿ ಪಂದ್ಯಾವಳಿಯಲ್ಲಿ ಗಲಾಟೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಸಂಗಮೇಶ್ ಅವರ ಪುತ್ರ ಬಸವನನ್ನ ಭದ್ರಾವತಿ ಪೊಲೀಸರು ಇಂದು(ಶನಿವಾರ) ಬಂಧಿಸಿದ್ದಾರೆ. ಜಿಲ್ಲೆಯ ಚಳ್ಳಕೆರೆ ಬಳಿ ಬಸವನನ್ನ ಪೊಲೀಸರು ಬಂಧಿಸಿದ್ದಾರೆ. 

"

ಫೆ 28 ರಂದು ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ನಡೆದ ಪ್ರೋ ಕಬ್ಬಡಿ ಪಂದ್ಯಾವಳಿಯಲ್ಲಿ ಗಲಾಟೆ ನಡೆದಿತ್ತು. ಈ ಸಂಬಂಧ ಶಾಸಕ ಸಂಗಮೇಶ್ವರ ಪುತ್ರರಾದ ಬಸವ ಮತ್ತು ಗಣೇಶ ವಿರುದ್ಧ ಎಫ್ಐಆರ್ ದಾಖಲಾಗಿತ್ತು. 

ಸದನದಲ್ಲಿ ಶರ್ಟ್ ಹೈಡ್ರಾಮಾ ಮಾಡಿ, ಸ್ಪೀಕರ್ ಆಡಳಿತ ಪಕ್ಷದ ಕೈಗೊಂಬೆ ಅಂದ್ರು ಸಂಗಮೇಶ್!

ದೂರು ದಾಖಲಾದ ನಂತರ ಸಂಗಮೇಶ್ವರ ಪುತ್ರರಾದ ಗಣೇಶ ಮತ್ತು ಬಸವ ನಾಪತ್ತೆಯಾಗಿದ್ದರು.