Asianet Suvarna News Asianet Suvarna News

Mysuru: ರಸ್ತೆ ಡಾಂಬರೀಕರಣ, ಚರಂಡಿ ಅಭಿವೃದ್ಧಿಗೆ ಶಾಸಕ ಎಸ್‌.ಎ.ರಾಮದಾಸ್‌ ಚಾಲನೆ

ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಶಾಸಕರ ಅನುದಾನದಡಿ ಲೋಕೋಪಯೋಗಿ ಇಲಾಖೆಯ ವತಿಯಿಂದ ರಸ್ತೆ ಡಾಂಬರೀಕರಣ ಮತ್ತು ಮಳೆ ನೀರುಚರಂಡಿ ಅಭಿವೃದ್ಧಿ ಕಾಮಗಾರಿಗಳಿಗೆ ಕೆ.ಆರ್‌. ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಎಸ್‌.ಎ.ರಾಮದಾಸ್‌ ಅವರು ಮಂಗಳವಾರ ಚಾಲನೆ ನೀಡಿದರು. 

MLA SA Ramadas inaugurate for road asphalting sewerage development at mysuru gvd
Author
First Published Nov 23, 2022, 8:54 AM IST

ಮೈಸೂರು (ನ.23): ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಶಾಸಕರ ಅನುದಾನದಡಿ ಲೋಕೋಪಯೋಗಿ ಇಲಾಖೆಯ ವತಿಯಿಂದ ರಸ್ತೆ ಡಾಂಬರೀಕರಣ ಮತ್ತು ಮಳೆ ನೀರುಚರಂಡಿ ಅಭಿವೃದ್ಧಿ ಕಾಮಗಾರಿಗಳಿಗೆ ಕೆ.ಆರ್‌. ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಎಸ್‌.ಎ.ರಾಮದಾಸ್‌ ಅವರು ಮಂಗಳವಾರ ಚಾಲನೆ ನೀಡಿದರು. ನಗರ ಪಾಲಿಕೆಯ ವಾರ್ಡ್‌ ಸಂಖ್ಯೆ 57ರ ಕುವೆಂಪುನಗರದ ಕೆ ಬ್ಲಾಕ್‌ನ ರಸ್ತೆ ಡಾಂಬರಿಕಾರಣ, ವಾರ್ಡ್‌ ಸಂಖ್ಯೆ 59ರ ವಿವೇಕನಂದಾನಗರದ ಹುಡ್ಕೋ 807 ಭಾಗದಲ್ಲಿ ರಸ್ತೆ ಅಭಿವೃದ್ಧಿ, ವಾರ್ಡ್‌ ಸಂಖ್ಯೆ 64 ಅರವಿಂದನಗರ ಭಾಗದ ಶ್ರೀರಾಂಪುರ 3ನೇ ಹಂತ ಭಾಗದಲ್ಲಿನ ರಸ್ತೆ ಡಾಂಬರಿಕಾರಣ, ವಾರ್ಡ್‌ ಸಂಖ್ಯೆ 65 ಶ್ರೀರಾಂಪುರ ಭಾಗದ ಶಿವಪುರ ಭಾಗದಲ್ಲಿನ ರಸ್ತೆ ಡಾಂಬರಿಕಾರಣಗಳ ಕಾಮಗಾರಿಗೆ ಶಾಸಕರು ಗುದ್ದಲಿಪೂಜೆ ನೆರವೇರಿಸಿದರು.

ಈ ವೇಳೆ ಶಾಸಕ ಎಸ್‌.ಎ. ರಾಮದಾಸ್‌ ಮಾತನಾಡಿ, ಯುಜಿಡಿ ಸಮಸ್ಯೆಯು ಹೆಚ್ಚಾಗಿರುವುದರಿಂದ ಸಾರ್ವಜನಿಕರು ಹೆಚ್ಚು ಸಮಸ್ಯೆಯನ್ನು ಅನುಭವಿಸುತ್ತಿರುವ ಮನಗಂಡು ಅದನ್ನು ಬಗೆಹರಿಸುವ ನಿಟ್ಟಿನಲ್ಲಿ ಕೆ.ಆರ್‌. ಕ್ಷೇತ್ರದಲ್ಲಿ ಯುಜಿಡಿ ಸಮಸ್ಯೆ ರಹಿತವಾಗಿ ಮಾಡುವ ಹಿತದೃಷ್ಟಿಯಿಂದ ಸುಮಾರು 72 ಕಾಮಗಾರಿಗಳನ್ನು ನೂತನವಾಗಿ ಚಾಲನೆ ನೀಡಲಾಗುತ್ತಿದೆ ಎಂದರು. ಮಳೆ ನೀರು ಬಂದಂತಹ ಸಂದರ್ಭದಲ್ಲಿ ಎಲ್ಲೇಲ್ಲಿ ಸಮಸ್ಯೆಗಳಾಗುತ್ತಿದ್ದು ಎನ್ನುವುದನ್ನು ಗುರುತಿಸಿ ಬಹುತೇಹ ಎಲ್ಲಾ ಕಡೆ ಆ ಸಮಸ್ಯೆಯನ್ನು ಬಗೆಹರಿಸಿದ್ದೇವೆ. 

ವೈಭವದ ಶ್ರೀಕಂಠೇಶ್ವರಸ್ವಾಮಿ, ಪಾರ್ವತಿ ದೇವಿ ಪಲ್ಲಕ್ಕಿ ಮೆರವಣಿಗೆ

ಮಳೆ ಬಂದಂತಹ ಸಂದರ್ಭದಲ್ಲಿ ಎರಡು ಕಡೆ ಮಾತ್ರ ಸಮಸ್ಯೆ ಕಾಣಿಸಿಕೊಂಡಿದೆ, ಅದನ್ನು ಬಗೆಹರಿಸುತ್ತೇವೆ ಎಂದು ಅವರು ಹೇಳಿದರು. ಕೆ.ಆರ್‌. ಕ್ಷೇತ್ರದಲ್ಲಿ ಸುಮಾರು 485 ಕಿ.ಮೀ ರಸ್ತೆಯನ್ನು ಸುರಕ್ಷಿತ ರಸ್ತೆ ಕ್ಷೇತ್ರ ಮಾಡಿ ಉತ್ತಮ ರಸ್ತೆಯನ್ನು ನಿರ್ಮಾಣ ಮಾಡಲಾಗುವುದು. ವಿಶೇಷವಾಗಿ . 1.30 ಕೋಟಿ ಅನುದಾನದಲ್ಲಿ ರಸ್ತೆ ಡಾಂಬರೀಕರಣವನ್ನು ಮಾಡಲಾಗುವುದು. ಈ ಎಲ್ಲಾ ಕಾಮಗಾರಿಗಳನ್ನು ಜನವರಿ ತಿಂಗಳೊಳಗಾಗಿ ಪೂರ್ಣ ಪ್ರಮಾಣದಲ್ಲಿ ಮಾಡಲಾಗುವುದು ಎಂದರು.

ನಗರಪಾಲಿಕೆ ಸದಸ್ಯರಾದ ಸುನಂದ ಪಾಲನೇತ್ರ, ಚಂಪಾಕ, ಗೀತಾಶ್ರೀ ಯೋಗಾನಂದ, ಸ್ಥಳೀಯ ಮುಖಂಡರಾದ ರವಿ, ಭಾಸ್ಕರ್‌, ರೋಹಿತ್‌, ಸದಾನಂದ, ಲೋಕೇಶ್‌, ಚೇತನ್‌, ಪದ್ಮ, ಆಶಾ, ಪುಷ್ಪ, ಕಮಲಮ್ಮ, ಇಂದ್ರೇಶ್‌, ಗಿರಿಧರ್‌, ಸಂಪತ್‌, ಪ್ರಸನ್ನ, ಮಾಯ ಜಗದೀಶ್‌, ರೂಪ, ಮಹಾದೇವಪ್ಪ, ಕೃಷ್ಣಕುಮಾರ್‌, ಗೋಪಾಲ್‌, ವಿನಯ್‌, ನಾಗೇಶ್‌, ಗೀತಾ, ನಾಗರತ್ನ ಗೌಡ, ಶಿವರಾಜ್‌, ಪ್ರಪುಲ್ಲಾ, ರಾಮನಾಥ್‌, ಭಾರತೀಶ್‌, ವಿ.ಕೆ. ಭಟ್‌, ವೆಂಕಟಕೃಷ್ಣಭಟ್‌, ಚಂದ್ರಶೇಖರ್‌, ಭಾಗವತ್‌, ವಿಶಾಲಾಕ್ಷಿ, ಪ್ರಕಾಶ್‌, ಗೀರೀಶ್‌, ಸತೀಶ್‌, ಮಂಜು, ಕೃಷ್ಣ, ಸಿದ್ದರಾಜು, ಮಲ್ಲಣ್ಣ, ಪಾಲಾಕ್ಷ, ಜಯಂತಿ, ವೈರಮುಡಿ, ಪಾಪಣ್ಣ, ಮಹಾದೇವಪ್ಪ, ಮಲ್ಲೇಶ್‌ ಮೊದಲಾದವರು ಇದ್ದರು.

ಪ್ರಾಮಾಣಿಕ ಕಾರ್ಯದಿಂದ ಮುನ್ನಡೆ ಸಾಧ್ಯ: ಪ್ರಾಮಾಣಿಕವಾಗಿ ಕೆಲಸ ಮಾಡಿದಾಗ ಎತ್ತರಕ್ಕೆ ಬೆಳೆಯಬಹುದು ಎಂದು ಶಾಸಕ ಎಸ್‌.ಎ. ರಾಮದಾಸ್‌ ಹೇಳಿದರು. ಕುವೆಂಪುನಗರದ ಆದಿಚುಂಚನಗಿರಿ ರಸ್ತೆಯಲ್ಲಿರುವ ಗಾನಭಾರತಿ ಸಂಗೀತ ಸಭಾದಲ್ಲಿ ಅಗಸ್ತ್ಯ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿಯಿಂದ ನಡೆದ 69ನೇ ಅಖಿಲ ಭಾರತ ಸಹಕಾರ ಸಪ್ತಾಹ ಹಾಗೂ 67ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಮತ್ತು ಸಂಗೀತ, ನೃತ್ಯ ಪರೀಕ್ಷೆಗಳಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಿಸಿ ಅವರು ಮಾತನಾಡಿದರು.

ಕನ್ನಡ ಕೇವಲ ಅಕ್ಷರವಲ್ಲ ಅದು ನಮ್ಮ ಸಂಸ್ಕೃತಿ: ಬರಗೂರು ರಾಮಚಂದ್ರಪ್ಪ

ಸಹಕಾರ ಕ್ಷೇತ್ರದಲ್ಲಿ ಪ್ರಾಮಾಣಿಕ ಕೈಗಳ ಕೊರತೆಯಿಂದ ಕೆಲವು ಸಮಸ್ಯೆಗಳು ಕಾಣುತ್ತಿವೆ. ಪ್ರಾಮಾಣಿಕವಾಗಿ ಕೆಲಸ ಮಾಡಿ ಸಹಕಾರ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲು ಸಂಕಲ್ಪ ಮಾಡಬೇಕು. ಸಹಕಾರಿ ಬಂಧುಗಳು ನೆಮ್ಮದಿಯಿಂದ ಜೀವನ ನಡೆಸಲು ಅವಕಾಶ ಕಲ್ಪಿಸಬೇಕು ಎಂದು ಅವರು ಸಲಹೆ ನೀಡಿದರು. ಜನಸಾಮಾನ್ಯರ ಕಾಮಧೇನು ಸಹಕಾರ ಕ್ಷೇತ್ರವಾಗಿದೆ. ಕೋವಿಡ್‌ ಸಂದರ್ಭದಲ್ಲಿ ದೇಶ ಆರ್ಥಿಕ ಸಮತೋಲನ ಹೊಂದಲು ಸಹಕಾರ ಕ್ಷೇತ್ರ ಕಾರಣವಾಗಿದೆ. ಭ್ರಷ್ಟಾಚಾರ ರಹಿತ ಆಡಳಿತಕ್ಕೆ ಆದ್ಯತೆ ನೀಡಬೇಕು ಎಂದು ಅವರು ಹೇಳಿದರು. 

Follow Us:
Download App:
  • android
  • ios