ದಾವಣಗೆರೆ [ಜ.09]: ನಾನು ಬೇಡ ಅಂದರೂ ಕೇಸ್‌ ಹುಡುಕಿಕೊಂಡು ಬರುತ್ತವೆ. ಒಂದಲ್ಲ ಇನ್ನೂ 15 ಬಸ್‌ಗಳನ್ನು ನಾನೇ ಓಡಿಸುವೆ. ಯಾರು ತಡೆಯುತ್ತಾರೆ, ಯಾರನ್ನು ಅಮಾನತು ಮಾಡುತ್ತಾರೆಂದು ನೋಡುತ್ತೇನೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಗುಡುಗಿದ್ದಾರೆ.

ಇತ್ತೀಚೆಗೆ ಗ್ರಾಮವೊಂದಕ್ಕೆ ಬಸ್‌ ಸೌಲಭ್ಯ ಕಲ್ಪಿಸಿದ ಖುಷಿಯಲ್ಲಿ ಸ್ವತಃ ಶಾಸಕರೇ 60 ಕಿ.ಮೀ. ಸರ್ಕಾರಿ ಬಸ್‌ ಓಡಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಕೆಎಸ್‌ಆರ್‌ಟಿಸಿ ಶಿವಮೊಗ್ಗ ವಿಭಾಗದ ಡೀಸಿ ನೋಟಿಸ್‌ ಜಾರಿ ಮಾಡಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ವೇಳೆ ಶಾಸಕರು ಈ ರೀತಿ ಹೇಳಿದ್ದಾರೆ.

ಲೈಸನ್ಸ್ ಇಲ್ಲದೇ ಸರ್ಕಾರಿ ಬಸ್ ಓಡಿಸಿದ ಶಾಸಕ: ನಿಯಮ ಉಲ್ಲಂಘಿಸಿದ್ರೂ ಹಾರಿಕೆಯ ಉತ್ತರ!

ಕೆಎಸ್‌ಆರ್‌ಟಿಸಿ ಶಿವಮೊಗ್ಗ ವಿಭಾಗದ ಡೀಸಿ ನೋಟಿಸ್‌ ಜಾರಿಗೊಳಿಸಿದ್ದು ಸರಿಯಲ್ಲ. ನನ್ನ ಬಳಿ ಭಾರೀ ವಾಹನಗಳ ಡ್ರೈವಿಂಗ್‌ ಲೈಸೆನ್ಸ್‌ ಇಲ್ಲ. ಕಾನೂನು ಪ್ರಕಾರ ನಾನು ಬಸ್‌ ಚಾಲನೆ ಮಾಡಿದ್ದು ತಪ್ಪು. ಆದರೆ, ಆತ್ಮವಿಶ್ವಾಸ ನನ್ನಲ್ಲಿದೆ ಎಂದು ಹೇಳಿದರು.

ಬಸ್ ಚಲಾಯಿಸಿ ಹೊನ್ನಾಳಿ ಶಾಸಕನ ಹೀರೋಯಿಸಂ: ಅಧಿಕಾರಿಗಳಿಗೆ ಸಂಕಷ್ಟ!...

ನಾನೂ ಡಿಸಿಎಂ ಸ್ಥಾನ ಹೇಳ್ತೀನಿ:  ದಾವಣಗೆರೆ ಜಿಲ್ಲೆಗೆ ಯಾರನ್ನಾದರೂ ಸಚಿವರನ್ನಾಗಿ ಮಾಡಲಿ. ನಾನೂ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದೇನೆ. ಹಿಂದೆ ಅಬಕಾರಿ ಸಚಿವನಾಗಿ, ಅನ್ಯ ಜಿಲ್ಲೆಯ ಉಸ್ತುವಾರಿ ಸಚಿವನಾಗಿ ಕೆಲಸ ಮಾಡಿರುವ ಅನುಭವವಿದೆ. ಅಲ್ಲದೇ, ಉಪ ಮುಖ್ಯಮಂತ್ರಿ ಸ್ಥಾನ ಕೊಡಿ ಎಂತಲೂ ಕೇಳುವೆ ಎಂದು ತಿಳಿಸಿದರು.