'ಕಟ್ಟಡ ಕಾರ್ಮಿಕರಿಗೆ ಮನೆ, ಸರ್ಕಾರಿ ಸವಲತ್ತು'
- ಕೆ.ಆರ್. ಕ್ಷೇತ್ರದಲ್ಲಿರುವ ಕಟ್ಟಡ ಕಾರ್ಮಿಕರಿಗೆ ಸರ್ಕಾರಿ ಸವಲತ್ತು ಹಾಗೂ ಆಶ್ರಯ ಯೋಜನೆಯಲ್ಲಿ ಮನೆ
- ನಮ್ಮ ಕ್ಷೇತ್ರದಲ್ಲಿರುವ ಕಟ್ಟಡ ಕಟ್ಟುವಂಥಹ ಕಾರ್ಮಿಕರಿಗೆ ಸೂಕ್ತ ಸೌಲಭ್ಯ
- ಶಾಸಕ ಎಸ್.ಎ. ರಾಮದಾಸ್ ಭರವಸೆ
ಮೈಸೂರು (ಜು.21): ಕೆ.ಆರ್. ಕ್ಷೇತ್ರದಲ್ಲಿರುವ ಕಟ್ಟಡ ಕಾರ್ಮಿಕರಿಗೆ ಸರ್ಕಾರಿ ಸವಲತ್ತು ಹಾಗೂ ಆಶ್ರಯ ಯೋಜನೆಯಲ್ಲಿ ಮನೆಗಳನ್ನು ಕೊಡಿಸುವುದಾಗಿ ಶಾಸಕ ಎಸ್.ಎ. ರಾಮದಾಸ್ ಭರವಸೆ ನೀಡಿದರು.
ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಕಾರ್ಮಿಕ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ, ಕ್ರೆಡಾಯ್ ಹಾಗೂ ಮೈಸೂರು ಬಿಲ್ಡರ್ಸ್ ಚಾರಿಟಬಲ್ ಟ್ರಸ್ವ್ ಸಂಯುಕ್ತವಾಗಿ ಕೋವಿಡ್ ಸಂಕಷ್ಟದಲ್ಲಿರುವ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ವಿಶ್ವೇಶ್ವರನಗರದಲ್ಲಿರುವ ಬಿಎಐ ಸಭಾಂಗಣದಲ್ಲಿ ಮಂಗಳವಾರ ಆಹಾರ ಧಾನ್ಯಗಳ ಕಿಟ್‌ಗಳನ್ನು ಅವರು ವಿತರಿಸಿ ಮಾತನಾಡಿದರು.
ನಮ್ಮ ಕ್ಷೇತ್ರದಲ್ಲಿರುವ ಕಟ್ಟಡ ಕಟ್ಟುವಂಥಹ ಕಾರ್ಮಿಕರಿಗೆ ಯಾರು ಸ್ವಂತ ಮನೆಗಳಿಲ್ಲ ಅವರಿಗೆ ಸರ್ಕಾರದ ವತಿಯಿಂದ ಅವರಿಗೆ ಸವಲತ್ತುಗಳನ್ನು ಹಾಗೂ ಆಶ್ರಯ ಅಡಿಯಲ್ಲಿ ಮನೆಗಳನ್ನು ಕೊಡುವ ಕೆಲಸಗಳನ್ನು ಮುಂದೆ ಮಾಡಲಿದ್ದೇವೆ ಎಂದರು.
ಕಟ್ಟಡ ಕಾರ್ಮಿಕರಿಗೆ ಬಂಪರ್ ಕೊಡುಗೆ ನೀಡಿದ ಸರ್ಕಾರ
ಬಾಡಿಗೆ ಮನೆಯಲ್ಲಿರುವ ಕಟ್ಟಡ ಕಾರ್ಮಿಕರ ವಿವರವನ್ನು ಪಟ್ಟಿಮಾಡಿ ನನಗೆ ಕೊಡಿ. ಅವರಿಗೆ ಸರ್ಕಾರದ ವ್ಯವಸ್ಥೆಯಲ್ಲೂ ಹಣ ಕೊಡಿಸುವುದರ ಜೊತೆಗೆ ಆ.15 ರಂದು ಮನೆಗಳನ್ನು ಹಂಚಿಕೆ ಮಾಡಿಸುವ ವ್ಯವಸ್ಥೆ ಮಾಡಲಾಗುವುದು. ಸುಮಾರು 11 ರಿಂದ 14 ಲಕ್ಷ ಮೊತ್ತದ ಕಟ್ಟಡಗಳಿದ್ದು, ಅದಕ್ಕೆ ಸಂಬಂಧಪಟ್ಟಆರಂಭಿಕ ಮೊತ್ತವನ್ನು ಹೊಂದಿಸುವ ಚಿಂತನೆ ನಡೆಸಲಾಗುತ್ತಿದೆ. ಜನವರಿಯೊಳಗೆ ಇದೆಲ್ಲವೂ ಆಗಲಿದೆ ಎಂದು ಅರು ತಿಳಿಸಿದರು.
ಕೆ.ಆರ್. ಕ್ಷೇತ್ರದಲ್ಲಿ ಕಟ್ಟಡ ಕಾರ್ಮಿಕರಿಗೆ ವಿಶೇಷವಾಗಿ ಅವರಿಗೆ ಕೋವಿಡ್ ಸಂದರ್ಭದಲ್ಲಿ ಕೆಲಸ ನಿಂತುಹೋಗಿತ್ತು. ಈ ಹಿಂದೆ ರಾಜ್ಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ . 5 ಸಾವಿರ ಕೊಡಿಸುವ ಕೆಲಸ ಮಾಡಿತ್ತು. ಕೋವಿಡ್ 2ನೆ ಅಲೆಯಲ್ಲೂ ಸಹ . 3 ಸಾವಿರ ನೀಡುತ್ತಿದೆ. ಇದೀಗ ಅವರಿಗೆ ಅಗತ್ಯವಿರುವ ಆಹಾರ ಪದಾರ್ಥಗಳ ಕಿಟ್ ಅನ್ನು ನೀಡುತ್ತಿದ್ದೇವೆ ಎಂದು ಅವರು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಸರ್ಕಾರ ನವೆಂಬರ್‌ವರೆಗೂ ಉಚಿತ ಪಡಿತರವನ್ನ ನೀಡುತ್ತಿದ್ದಾರೆ. ಓರ್ವ ಬಾಲ ಕಟ್ಟಡ ಕಾರ್ಮಿಕ ತನ್ನ ಸಣ್ಣ ವಯಸ್ಸಿನಲ್ಲಿ ತಂದೆಯನ್ನ ಕಳೆದುಕೊಂಡು, ತನ್ನ ಕುಟುಂಬವನ್ನು ಸಲಹುವುದಕ್ಕೋಸ್ಕರ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಾ ಅಲ್ಲೇ ಸಾಧನೆಯನ್ನು ಮಾಡಿ ನೋಬಲ್ ಪ್ರಶಸ್ತಿಯನ್ನು ತೆಗೆದುಕೊಂಡವರು ಹ್ಯಾಮಲ್ಟನ್ ನಮಗೆಲ್ಲಾ ಸ್ಫೂರ್ತಿ ಎಂದರು.
ನಗರ ಪಾಲಿಕೆ ಸದಸ್ಯೆ ಶಾಂತಮ್ಮ ವಡಿವೇಲು, ಕಾರ್ಮಿಕ ಇಲಾಖೆಯ ಅಧಿಕಾರಿಯಾದ ರಾಜೇಶ್ ಜಾಧವ್, ಬಿಎಐ ಮ್ಯಾನೇಜಿಂಗ್ ಟ್ರಸ್ಟಿಟಿ.ಎನ್. ಹೇಮಂತ್, ಬಿಎಐ ಅಧ್ಯಕ್ಷ ಅಜಿತ್ ನಾರಾಯಣ್, ಕ್ರೆಡಾಯ್ ಅಧ್ಯಕ್ಷ ಮುರಳೀಧರ ಇದ್ದರು.
ಓರ್ವ ಕಟ್ಟಡ ಕಾರ್ಮಿಕ ಕೂಡಾ ತನ್ನ ಕೌಶಲ್ಯಗಳ ಮೂಲಕ ದೇಶದಲ್ಲಿ ಅಲ್ಲದೇ ವಿದೇಶಕ್ಕೂ ಹೋಗಿ ಕೆಲಸ ಮಾಡಬಹುದು. ಅಂತಹ ಅವಕಾಶಗಳನ್ನು ಮೋದಿ ಸರ್ಕಾರ ಕಲ್ಪಿಸಿಕೊಟ್ಟಿದೆ. ಇಂತಹ ಸ್ಕಿಲ್ ಇರುವ ಕೆಲಸಗಾರರನ್ನು ಗುರುತಿಸಿ ವಿಶೇಷವಾದ ಪ್ರೋತ್ಸಾಹವನ್ನು ಕೊಡಬೇಕಾಗಿದೆ.