ಬೆಂಗಳೂರು(ನ.12): ಆರ್‌.ಆರ್‌.ನಗರ ವಿಧಾನಸಭಾ ಕ್ಷೇತ್ರ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರು ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ಮುಖಂಡ ಎಸ್‌.ಎಂ.ಕೃಷ್ಣ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡಿದ್ದಾರೆ. 

ಸದಾಶಿವನಗರದಲ್ಲಿನ ಎಸ್‌.ಎಂ.ಕೃಷ್ಣ ನಿವಾಸಕ್ಕೆ ಬುಧವಾರ ತೆರಳಿದ ಮುನಿರತ್ನ ಕೆಲಕಾಲ ಸಮಾಲೋಚನೆ ನಡೆಸಿದರು. ಈ ವೇಳೆ ಮಾತನಾಡಿದ ಎಸ್‌.ಎಂ.ಕೃಷ್ಣ, ದೇಶದಲ್ಲಿ ಬದಲಾವಣೆ ಆಗುತ್ತಿದೆ. ಕಾಂಗ್ರೆಸ್‌ ಅವನತಿಯ ಜಾರುಗುಪ್ಪೆಯಲ್ಲಿ ಇಳಿಯುತ್ತಿದೆ. ಬಿಜೆಪಿ ತನ್ನ ಪ್ರಖರತೆಯ ವಿಸ್ತಾರ ಮಾಡಿಕೊಳ್ಳುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಒಬ್ಬರು ರಾಜಋುಷಿ. ಅವರಿಗೆ ದೇಶವೇ ದೇವರು. ಅವರಿಗೆ ಯಾವ ಪ್ರಲೋಭಗಳೂ ಇಲ್ಲ. ಅವರು ಈ ದೇಶಕ್ಕೆ ಪ್ರಧಾನಿಯಾಗಿದ್ದು ನಮ್ಮೆಲ್ಲರ ಸೌಭಾಗ್ಯ. ದೇಶಕ್ಕಾಗಿ ಹಗಲಿರುಳು ದುಡಿಯುತ್ತಿದ್ದಾರೆ ಎಂದರು.

ಪ್ರಾಮಾಣಿಕವಾಗಿ ಜನಸೇವೆ ಮಾಡಿ, ಆರ್‌ಆರ್‌ ನಗರ ಜನರ ಋಣ ತೀರಿಸುತ್ತೇನೆ: ಮುನಿರತ್ನ

ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.