ರಾಮ​ನ​ಗ​ರ (ನ.06): ಬಿಡದಿ ಪುರಸಭೆ ಅಧ್ಯಕ್ಷ - ಉಪಾಧ್ಯಕ್ಷ ಚುನಾವಣೆಯಲ್ಲಿ ಜೆಡಿಎಸ್‌ ಕುದುರೆ ವ್ಯಾಪಾರ ಮಾಡಿದೆ ಎಂದು ಸಂಸದ ಡಿ.ಕೆ.ಸುರೇಶ್‌ ಮಾಡಿದ ಆರೋಪಕ್ಕೆ ಶಾಸಕ ಎ.ಮಂಜು​ನಾಥ್‌ ಪರೋ​ಕ್ಷ​ವಾಗಿ ವಾಗ್ದಾಳಿ ನಡೆ​ಸಿ​ದರು.

ಸುದ್ದಿಗಾರರೊಂದಿಗೆ ಮಾತ​ನಾ​ಡಿದ ಮಂಜು​ನಾಥ್‌, ಜೆಡಿಎಸ್‌ ಎಲ್ಲಯೂ ಕುದುರೆ ವ್ಯಾಪಾರ ಮಾಡಿಲ್ಲ. ಬದಲಾಗಿ ರಾಮನಗರ ತಾಪಂ ಹಾಗೂ ಎಪಿಎಂಸಿ ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್‌ ಹೇಗೆ ನಡೆದುಕೊಂಡಿದೆ ಎಂಬುದು ಗೊತ್ತಿದೆ. 

ಸಂಸದ ಡಿ.ಕೆ.​ಸು​ರೇಶ್‌ ವಿರುದ್ಧ ಹೆಚ್‌ಡಿಕೆ ಏಕ​ವ​ಚ​ನ​ದಲ್ಲಿ ವಾಗ್ದಾಳಿ ...

ಸಂಸದ ಸುರೇಶ್‌ ಅವರು ಕುದುರೆ ವ್ಯಾಪಾರಕ್ಕೆ ಸಂಬಂಧಿಸಿದಂತೆ ಮಾಡಿರುವ ಆರೋಪಕ್ಕೆ ಸದ್ಯಕ್ಕೆ ಏನೂ ಹೇಳುವುದಿಲ್ಲ. ಕಾಲ ಬಂದಾಗ ಉತ್ತರ ಕೊಡುತ್ತೇನೆ. ಈಗ ಏನಿದ್ದರೂ ಅಭಿವೃದ್ಧಿಯೇ ನಮ್ಮ ಮೂಲ ಮಂತ್ರ ಎಂದರು.