Asianet Suvarna News Asianet Suvarna News

ಗ್ರಾಮ ವಾಸ್ತವ್ಯದಿಂದ ಕಟ್ಟಕಡೆ ವ್ಯಕ್ತಿಗೂ ಸೌಲಭ್ಯ: ಶಾಸಕ ಮಾಡಾಳು ವಿರೂಪಾಕ್ಷಪ್ಪ

ಸಮಾಜದ ಬಹುತೇಕ ಜನರಿಗೆ ಸರ್ಕಾರದ ಸೌಲಭ್ಯಗಳ ಹೇಗೆ ಪಡೆಯಬೇಕೆಂಬುದು ತಿಳಿಯದೇ ಸಾಕಷ್ಟು ಯೋಜನೆಗಳು ಜಾರಿಗೆ ಬಂದಿದ್ದರೂ ಜನರ ತಲುಪುತ್ತಿಲ್ಲ ಸರ್ಕಾರದ ಸೌಲಭ್ಯಗಳನ್ನು ಸಮಾಜದ ಕಟ್ಟಕಡೆ ವ್ಯಕ್ತಿಗಳಿಗೆ ತಲುಪಿಸುವ ಕಾರ್ಯಕ್ರಮವೇ ಈ ಗ್ರಾಮ ವಾಸ್ತವ್ಯ ಎಂದು ಶಾಸಕ ಮಾಡಾಳು ವಿರೂಪಾಕ್ಷಪ್ಪ ಹೇಳಿದರು. 

MLA Madalu Virupakshappa Talks About Grama Vastvaya At Davanagere gvd
Author
First Published Dec 19, 2022, 8:25 PM IST

ಚನ್ನಗಿರಿ (ಡಿ.19): ಸಮಾಜದ ಬಹುತೇಕ ಜನರಿಗೆ ಸರ್ಕಾರದ ಸೌಲಭ್ಯಗಳ ಹೇಗೆ ಪಡೆಯಬೇಕೆಂಬುದು ತಿಳಿಯದೇ ಸಾಕಷ್ಟು ಯೋಜನೆಗಳು ಜಾರಿಗೆ ಬಂದಿದ್ದರೂ ಜನರ ತಲುಪುತ್ತಿಲ್ಲ ಸರ್ಕಾರದ ಸೌಲಭ್ಯಗಳನ್ನು ಸಮಾಜದ ಕಟ್ಟಕಡೆ ವ್ಯಕ್ತಿಗಳಿಗೆ ತಲುಪಿಸುವ ಕಾರ್ಯಕ್ರಮವೇ ಈ ಗ್ರಾಮ ವಾಸ್ತವ್ಯ ಎಂದು ಶಾಸಕ ಮಾಡಾಳು ವಿರೂಪಾಕ್ಷಪ್ಪ ಹೇಳಿದರು. 

ತಾಲೂಕಿನ ನಲ್ಲೂರು ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿ ನಲ್ಲೂರು, ಚನ್ನೇಶಪುರ, ಹಿರೇಮಳಲಿ, ಇಟ್ಟಿಗೆ, ಬುಳಸಾಗರ, ಲಿಂಗದಹಳ್ಳಿ, ಮುದಿಗೆರೆ, ಈ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಹಮ್ಮಿಕೊಂಡಿದ್ದು ಈ ದಿನ 1278 ಮಂದಿ ಫಲಾನುಭವಿಗಳಿಗೆ ಸರ್ಕಾರದ ವಿವಿಧ ಯೋಜನೆಗಳ ಮಂಜೂರು ಪತ್ರ ವಿತರಿಸಲಾಗುವುದು ಎಂದರು.

ನಗರಾಭಿವೃದ್ಧಿಗೆ 60 ಕೋಟಿ ವಿಶೇಷ ಅನುದಾನ ಬಿಡುಗಡೆ: ಶಾಸಕ ಸಿ.ಟಿ.ರವಿ

29 ಶಾಲಾ ಕೊಠಡಿಗಳಿಗೆ 4.ಕೋಟಿ ರು.: ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗಾಗಿ 141ಕೋಟಿ ಅನುದಾನ ನೀಡಿದ್ದು ಈ 7 ಗ್ರಾಪಂ ವ್ಯಾಪ್ತಿಯಲ್ಲಿ 29 ಶಾಲಾ ಕೊಠಡಿಗಳ ನಿರ್ಮಾಣಕ್ಕೆ 4ಕೋಟಿ ರು. ಹಣ ಬಿಡುಗಡೆ ಮಾಡಲಾಗಿದೆ. ಕಿಸಾನ್‌ ಸನ್ಮಾನ್‌ ಯೋಜನೆಯಲ್ಲಿ ಸಣ್ಣ ರೈತರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ 38ಸಾವಿರ ಜನ ರೈತರಿಗೆ 129.20ಕೋಟಿ ರು. ರೈತರ ಖಾತೆಗೆ ಜಮೆ ಮಾಡಲಾಗಿದೆ ಎಂದರು. ತಾಲೂಕಿನಲ್ಲಿ 5741 ಮಂದಿ ರೈತರ 10 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದಿದ್ದು ಹಾಳಾಗಿದ್ದು ಈ ಎಲ್ಲಾ ರೈತರಿಗೆ 5.52ಕೋಟಿ ಪರಿಹಾರ ಈಗಾಗಲೇ ನೀಡಲಾಗಿದೆ ಎಂದರು.

ತಹಸೀಲ್ದಾರ್‌ ಡಾ.ಪಟ್ಟರಾಜಗೌಡ ಮಾತನಾಡಿ ಸರ್ಕಾರ ಮಹತ್ವದ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಉದ್ದೇಶವೇ ಈ ಗ್ರಾಮ ವಾಸ್ತವ್ಯ ಕಾರ್ಯಕ್ರಮವಾಗಿದ್ದು, ಸರ್ಕಾರದ ಯೋಜನೆಗಳ ಪಡೆದ ಫಲಾನುಭವಿಗಳು ಆರ್ಥಿಕ, ಸಾಮಾಜಿಕ ಸರ್ಕಾರದ ಯೋಜನೆಗಳು ಸಾರ್ಥಕವಾಗುತ್ತವೆ ಎಂದರು. ಈ ಕಾರ್ಯಕ್ರಮದಲ್ಲಿ ತಾ.ಪಂ ಕಾರ್ಯನಿರ್ವಾಣಾಧಿಕಾರಿ ಎಂ.ಆರ್‌.ಪ್ರಕಾಶ್‌, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯದರ್ಶಿ ಡಾ.ಚನ್ನಪ್ಪ, ಉಪ ವಿಭಾಗಾಧಿಕಾರಿ ಹುಲ್ಲುಮನಿ ತಿಮ್ಮಣ್ಣ, ಕ್ಷೇತ್ರಶಿಕ್ಷಣಾಧಿಕಾರಿ ಮಂಜುನಾಥ್‌, ಸಿಡಿಪಿಒ ಸದಾನಂದ್‌, ಡಿವೈಎಸ್‌ಪಿ ಡಾ.ಸಂತೋಷ್‌, ಸಿಪಿಐ ಮಧು, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಅರುಣ್‌, ಗ್ರಾ.ಪಂ ಅಧ್ಯಕ್ಷೆ ಚಂದ್ರಮತಿ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು, ಸಾರ್ವಜನಿಕರಿದ್ದರು.

ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ, ಸತ್ಪ್ರಜೆಗಳಾಗಿಸಿ: ಸಚಿವ ಆರಗ ಜ್ಞಾನೇಂದ್ರ

ಮಹಿಳೆಯರ ಸಬಲೀಕರಣಕ್ಕಾಗಿ ತಾಲೂಕಿನಾದ್ಯಂತ ಇರುವ ಸ್ತ್ರೀ ಶಕ್ತಿ ಸಂಘಗಳಿಗೆ ಈಗಾಗಲೇ 10.75ಕೋಟಿ ರು. ನೀಡಿದ್ದು ಇನ್ನು ಹೆಚ್ಚಿನ ಸಾಲ ಸೌಲಭ್ಯ ನೀಡಲು 18 ಕೋಟಿ ಬಿಡುಗಡೆ ಮಾಡಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
-ಮಾಡಾಳು ವಿರೂಪಾಕ್ಷಪ್ಪ, ಶಾಸಕ

Follow Us:
Download App:
  • android
  • ios