ಪ್ರಧಾನಿ ಮೋದಿಗೆ ಹಿಂಗಾ ಹೇಳೋದು ? : ಕಾಗೋಡು ವಿರುದ್ಧ ಅಸಮಾಧಾನ
ದೇಶದ ಪ್ರಧಾನಿಗೆ ಹಿಂಗಾ ಹೇಳೋದು ಎಂದು ಬಿಜೆಪಿ ಶಾಸಕರೋರ್ವರು ಹಿರಿಯ ಕಾಂಗ್ರೆಸ್ ಮುಖಂಡ ಕಾಗೋಡು ತಿಮ್ಮಪ್ಪ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಸಾಗರ [ಡಿ.19]: ಮಾಜಿ ಸಚಿವ ಕಾಗೋಡು ತಿಮ್ಮಪ್ಪನ ವರಿಗೆ ಭಾಷೆಯ ಮೇಲೆ ಹಿಡಿತವಿಲ್ಲ. ಕಾಗೋಡು ತಿಮ್ಮಪ್ಪನವರು ದೇಶದ ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾಕ್ಷಸ ಎಂದು ಸಂಬೋ ಧಿಸಿರುವುದು ವೈಯಕ್ತಿಕವಾಗಿ ನನಗೆ ತೀರ ಅಸಮಾಧಾನ ತಂದಿದೆ ಎಂದು ಶಾಸಕ ಎಚ್. ಹಾಲಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಿಮ್ಮಪ್ಪನವರು ರಾಷ್ಟ್ರೀಯ ಪೌರತ್ವ ಕಾಯ್ದೆ ಬಗ್ಗೆ ಸರಿಯಾಗಿ ಓದಿಕೊಳ್ಳದೆ ಮಾತನಾಡುತ್ತಿದ್ದಾರೆ. ಯಾರನ್ನು ಓಲೈಸಲು ಈ ರೀತಿ ಭಾಷಣ ಮಾಡಿದ್ದಾರೋ ಗೊತ್ತಿಲ್ಲ ಎಂದರು. ರಾಷ್ಟ್ರೀಯ ಪೌರತ್ವ ಕಾಯ್ದೆ ಭಾರತದಲ್ಲಿರುವ ಮೂಲ ಮುಸ್ಲಿಮರಿಗೆ ಯಾವುದೆ ರೀತಿ ತೊಂದರೆ ಕೊಡುವುದಿಲ್ಲ. ಬದಲಾಗಿ 2014ರ ನಂತರ ಪಾಕಿಸ್ತಾನ, ಬಾಂಗ್ಲಾ, ಅಪಘಾನಿಸ್ತಾನ ಇನ್ನಿತರೆ ದೇಶ ಗಳಿಂದ ಭಾರತಕ್ಕೆ ಬಂದು ನೆಲೆಸಿರು ವ ಮುಸ್ಲಿಂರನ್ನು ಗುರುತಿಸುವ ಪ್ರಯತ್ನ ಮಾಡಲಾಗುತ್ತಿದೆ.
ಡಿಸಿಎಂ ಅಶ್ವತ್ಥನಾರಾಯಣಗೆ ರೇಣುಕಾಚಾರ್ಯ ಸವಾಲು!...
ಕಾಂಗ್ರೆಸ್ ಬೆಂಬಲದಿಂದ ಕೆಲವರು ರಾಷ್ಟ್ರೀಯ ಪೌರತ್ವ ಮಸೂದೆ ವಿರೋಧಿಸುವ ಕೆಲಸ ಮಾಡುತ್ತಿ ದ್ದಾರೆ ಎಂದು ಆರೋಪಿಸಿದರು. ಯಡಿಯೂರಪ್ಪ ಮುಖ್ಯಮಂತ್ರಿ ಯಾಗಿ ಉತ್ತಮ ಕೆಲಸ ಮಾಡುತ್ತಿ ದ್ದಾರೆ. ಸಚಿವರಾದ ಕೆ.ಎಸ್. ಈಶ್ವರಪ್ಪ, ಬಸವರಾಜ ಬೊಮ್ಮಾಯಿ, ಆರ್.ಅಶೋಕ್, ಜಗದೀಶ್ ಶೆಟ್ಟರ್, ಸುರೇಶ್ ಕುಮಾರ್ ಸೇರಿದಂತೆ ಎಲ್ಲರೂ ಹೆಗಲಿಗೆ ಹೆಗಲು ಕೊಟ್ಟು ರಾಜ್ಯದ ಅಭಿವದ್ದಿಗೆ ಶ್ರಮಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಹುದ್ದೆ ಅಗತ್ಯ ಇರಲಿಲ್ಲ ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ತಿಳಿಸಿದರು.
ಅಡಕೆ ಟಾಸ್ಕ್‌ಫೋರ್ಸ್ ಮಾಡಿರುವುದು ಬೆಳೆಗಾರರ ಹಿತರಕ್ಷಣೆಗೆ ಎನ್ನುವುದನ್ನು ಕಾಂಗ್ರೆಸ್ ಮುಖಂಡರು ಅರ್ಥ ಮಾಡಿಕೊಳ್ಳ ಬೇಕು ಎಂದರು. ಟಿ.ಡಿ. ಮೇಘರಾಜ್, ಗಣೇಶಪ್ರಸಾದ್, ಮಹೇಶ್, ರವೀಂದ್ರ, ದೇವೇಂದ್ರಪ್ಪ ಇದ್ದರು.