ಕೆರೆಗೆ ಇಳಿದು ಸ್ವಚ್ಛಗೊಳಿಸಿದ ಬಿಜೆಪಿ ಶಾಸಕ : ಕೈ ಜೋಡಿಸಿದ ಹಿರಿಯ ಕೈ ನಾಯಕ

ಗಿಡಗಂಟಿಗಳು, ಪಾಚಿಯಿಂದ ಸಂಪೂರ್ಣ ಮಲಿನಗೊಂಡಿದ್ದ ಕೆರೆಯ ಸ್ವಚ್ಛತಾ ಕಾರ್ಯ ನಡೆದಿದ್ದು, ಸ್ವತಃ ಶಾಸಕರೇ ಕೆರೆ ಇಳಿದು ಸ್ವಚ್ಛಗೊಳಿಸಿದರು. 

MLA Halappa Participated in Lake Cleaning  Sagar

ಸಾಗರ [ಜ.12]:  ಗಣಪತಿ ಕೆರೆ ಕಾಯಕಲ್ಪಕ್ಕೆ ಸಾರ್ವಜನಿಕರಿಂದ ದೊರಕಿರುವ ಜನಸ್ಪಂದನೆ ಅಭೂತಪೂರ್ವ ಎಂದು ಶಾಸಕ ಎಚ್‌.ಹಾಲಪ್ಪ ಹೇಳಿದರು.

ಪಟ್ಟಣದಲ್ಲಿ ಶನಿವಾರ ಇತಿಹಾಸ ಪ್ರಸಿದ್ಧ ಗಣಪತಿ ಕೆರೆ ಪುನಶ್ಚೇತನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಾಗರದ ಜನತೆಗೆ ಗಣಪತಿ ಕೆರೆ ನಮ್ಮ ಕೆರೆ ಎನ್ನುವ ಮನೋಭಾವ ಬರಬೇಕು. ಇದ​ರ ಮೊದಲ ಪ್ರಯತ್ನವಾಗಿ ಕೆರೆ ಪುನಶ್ಚೇತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಸಾವಿರಾರು ಜನರು ಸ್ವಯಂಪ್ರೇರಿತರಾಗಿ ಕೆರೆಗೆ ಇಳಿದು ಸ್ವಚ್ಛತೆಯ ಕೆಲಸದಲ್ಲಿ ತೊಡಗಿದ್ದಾರೆ. ಈ ಕಾರ್ಯಕ್ರಮ ಒಂದು ಅಥವಾ ಎರಡು ದಿನ ನಡೆಯದೆ ನಿರಂತರವಾಗಿ ನಡೆಯುತ್ತದೆ ಎಂದು ತಿಳಿ​ಸಿ​ದರು.

ಸ್ವಚ್ಛ, ಸುಂದರ ಸಾಗರ ನಿರ್ಮಾಣ ನಮ್ಮ ಆಶಯ. ಕೆರೆ ಸುತ್ತಲಿನ ಪರಿಸರ ಅಭಿವೃದ್ಧಿ ಯೋಜನೆ ರೂಪಿಸಲಾಗಿದೆ. ಸರ್ಕಾರದಿಂದ ಯೋಜನೆ ಕೈಗೊಂಡಿದ್ದರೆ ಇಷ್ಟುಯಶಸ್ಸು ಕಾಣುತ್ತಿರಲಿಲ್ಲ. ಸರ್ಕಾರ ಹಾಗೂ ಸಾರ್ವಜನಿಕ ಸಹಭಾಗಿತ್ವ ಇದ್ದಾಗ ಮಾತ್ರ ಇಂತಹ ಕಾರ್ಯಕ್ರಮ ಯಶಸ್ಸುಗೊಳ್ಳುತ್ತದೆ ಎಂದು ತಿಳಿ​ಸಿ​ದರು.

ಇನ್ನು ಸ್ವಚ್ಛತಾ ಕಾರ್ಯದ ವೇಳೆ ಕಾಂಗ್ರೆಸ್ ಹಿರಿಯ ಮುಖಂಡ ಕಾಗೋಡು ತಿಮ್ಮಪ್ಪ ಅವರು ಪಾಲ್ಗೊಂಡಿದ್ದರು. 

ಜೋಗದ ವೀಕ್ಷಣೆಗಿನ್ನು ರೋಪ್‌ವೇ ಆಕರ್ಷಣೆ!

ಉಪವಿಭಾಗಾಧಿಕಾರಿ ಡಾ.ನಾಗರಾಜ್‌ ಎಲ್‌., ಪೌರಾಯುಕ್ತ ಎಸ್‌.ರಾಜು, ಡಿವೈಎಸ್‌ಪಿ ಜೆ.ರಘು, ನಗರಸಭೆ ಸದಸ್ಯರಾದ ಟಿ.ಡಿ.ಮೇಘರಾಜ್‌, ಆರ್‌. ಶ್ರೀನಿವಾಸ್‌, ಅ.ನಾ.ವಿಜೇಂದ್ರ ಶಿವಮೊಗ್ಗ ವಿವಿಧ ಸಂಘಸಂಸ್ಥೆ ಪ್ರಮುಖರು, ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಕಾರ್ಯಾಚರಣೆಗಿಳಿದ ಶಾಸಕರು:

ಗಣಪತಿ ಕೆರೆ ಸ್ವಚ್ಛತೆ ಕಾರ್ಯ ಶನಿವಾರ ಬೆಳಗ್ಗೆ ಸುಮಾರು 7ಗಂಟೆಯಿಂದಲೇ ಆರಂಭಗೊಂಡಿತು. ಸಾಗರದ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಸಾಮಾಜಿಕ ಕಾರ್ಯಕರ್ತರು, ಜನಪ್ರತಿನಿಧಿಗಳು ಭಾಗಿಯಾದರು. ಹೊನ್ನೇಮರಡು, ಕಾರ್ಗಲ್‌ನಿಂದ ತರಿಸಲಾದ ದೋಣಿಯಲ್ಲಿ ಶಿವಮೊಗ್ಗ, ಚೋರಡಿಯಿಂದ ಬಂದಿರುವ ತಜ್ಞರ ತಂಡದ ಸದಸ್ಯರು ಕೆರೆಗೆ ಇಳಿದರು. ಬೆಳಗ್ಗೆ 7.30ಕ್ಕೆ ಕೆರೆ ಅಂಗಳಕ್ಕೆ ಬಂದ ಶಾಸಕ ಎಚ್‌.ಹಾಲಪ್ಪ ಲೈಫ್‌ ಜಾಕೆಟ್‌ ಹಾಕಿಕೊಂಡು ಸ್ವಚ್ಛತೆ ಕಾರ್ಯಾಚರಣೆಯಲ್ಲಿ ತೊಡಗಿದರು. ಶಿವಮೊಗ್ಗದ ಅ.ನ.ವಿಜಯೇಂದ್ರ ಅವರೊಂದಿಗೆ ದೋಣಿ ಏರಿದ ಶಾಸಕರು ಎರಡು ಗಂಟೆಗೂ ಹೆಚ್ಚು ಕಾಲ ಭಾಗಿಯಾ​ಗಿ ಹುರಿದುಂಬಿಸಿದರು.

Latest Videos
Follow Us:
Download App:
  • android
  • ios