IT Raid: ಅಂಬಿಕಾಪತಿ ಮನೆಯಲ್ಲಿ ಸಿಕ್ಕ 42 ಕೋಟಿ ರೂ. ಮೂಲವನ್ನು ಬಹಿರಂಗಡಿಸಿದ ಶಾಸಕ ಯತ್ನಾಳ್!
ಬೆಂಗಳೂರಿನ ಬಿಬಿಎಂಪಿ ಮಾಜಿ ಕಾರ್ಪೋರೇಟರ್ ಅಂಬಿಕಾ ಅವರ ಮನೆಯಲ್ಲಿ ಐಟಿ ದಾಳಿಯಲ್ಲಿ ಸಿಕ್ಕ 42 ಕೋಟಿ ರೂ. ಮೂಲದ ಬಗ್ಗೆ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಬಹಿರಂಗಪಡಿಸಿದ್ದಾರೆ.

ಬೆಂಗಳೂರು (ಅ.13): ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಆದಾಯ ತೆರಿಗೆ (Income Tax) ಇಲಾಖೆ ಅಧಿಕಾರಿಗಳು ಕಳೆದೆರಡು ದಿನಗಳಿಂದ ಕಾಂಗ್ರೆಸ್ ಏಜೆಂಟ್ ಎಂದು ಹೇಳಲಾಗುವ ಮಾಜಿ ಕಾರ್ಪೋರೇಟರ್ ಅಶ್ವತ್ಥಮ್ಮ ಹಾಗೂ ಗುತ್ತಿಗೆದಾರ ಅಂಬಿಕಾಪತಿ ಅವರ ಮನೆಯ ಮೇಲೆ ದಾಳಿ ನಡೆಸಿ ಕಾರ್ಯಾಚರಣೆ ನಡೆಸುತ್ತಿದ್ದು 42 ಕೋಟಿ ರೂ. ಒಂದೇ ಕಡೆ ಸಿಕ್ಕಿದೆ. ಈ ಹಣದ ಮೂಲವನ್ನು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ.
ಗುತ್ತಿಗೆದಾರ ಅಂಬಿಕಾಪತಿ ಅವರ ಮನೆಯಲ್ಲಿ ಸಿಕ್ಕಿರುವ ಹಣದ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿಕೊಂಡಿರುವ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಹಣ ಮೂಲ ಎಲ್ಲಿಂದ ಬಂದಿದೆ ಎಂದು ಹೇಳಿದ್ದಾರೆ. ಈ ಐಟಿ ರೇಡ್ ನಲ್ಲಿ ಕಾಂಗ್ರೆಸ್ ಏಜೆಂಟ್ ಅಂಬಿಕಾಪತಿಯ ಮನೆಯಲ್ಲಿ ದೊರೆತ 42 ಕೋಟಿ ರೂ. ಹಣದ ಮೂಲವನ್ನು ಹುಡುಕುವುದು ಬಹಳ ಸುಲಭ.
ಮಹಿಷ ದಸರಾವನ್ನು ಬೆಂಗಳೂರಲ್ಲೂ ಆಚರಣೆ ಮಾಡ್ತೀವಿ: ಭಾಸ್ಕರ್ ಪ್ರಸಾದ್ ಸವಾಲು
- 1. ಬಿಬಿಎಂಪಿ ಬಿಡುಗಡೆ ಮಾಡಿರುವ 650 ಕೋಟಿ ಅನುದಾನ ಪಡೆದಿರುವ ಗುತ್ತಿಗೆದಾರರು ಯಾರು? ಅವರ ಹಿನ್ನಲೆ ಏನು? ಬಾಕಿ ಬಿಲ್ಲುಗಳ ವಿವರ!
- 2. 650 ಕೋಟಿ ರೂಗಳಿಗೆ ಎಷ್ಟು ಪರ್ಸೆಂಟೇಜ್ ಫಿಕ್ಸ್ ಮಾಡಲಾಗಿತ್ತು?
- 3. ಈ ಹಣ ತಮಿಳುನಾಡಿನಿಂದ ತೆಲಂಗಾಣಕ್ಕೆ ಕಳುಹಿಸಲು ಯಾಕೆ ಯೋಜನೆ ಮಾಡಲಾಗಿತ್ತು?
- 4. ತೆಲಂಗಾಣಕ್ಕೆ ಕಳುಹಿಸುವುದಾದರೆ ಚುನಾವಣೆಗಾಗಿ ಅಲ್ಲವೇ?
- 5. ಕುಮಾರಕೃಪಾ ಗೋಡೆಗಳನ್ನು ಕೇಳಿದರು ಹೇಳುವುದು ಈ ಹಣ ನೀಡಿರುವ ಸುಮಾರು 23 ಗುತ್ತಿಗೆದಾರರು ಯಾರೆಂದು!
- 6. ಕೆಂಪಣ್ಣ ಆಂಡ್ ಕಂಪನಿಗೆ ಈ ಮಾಹಿತಿ ಇಲ್ಲವಾ? ಎಂದು ಟೀಕೆ ಮಾಡಿದ್ದಾರೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಕಲೆಕ್ಷನ್ ಜಾತ್ರೆ! ಮಹದೇವಪ್ಪನ ದುಡ್ಡು, ಕಾಕಪಾಟಿಲನ ದುಡ್ಡು, ದಯಾನಂದನ ದುಡ್ಡು ಕಲೆಕ್ಷನ್ ಮಾಡಲಾಗಿದೆ. ಇದರಲ್ಲಿ 1/4ರಷ್ಟು ರಾಜಸ್ಥಾನಕ್ಕೆ, 1/4ರಷ್ಟು ಮಧ್ಯಪ್ರದೇಶಕ್ಕೆ, 1/4ರಷ್ಟು ತೆಲಂಗಾಣಕ್ಕೆ ಹಾಗೂ 1/4 ರಷ್ಟು ಛತ್ತೀಸಘಡಕ್ಕೆ! ಅವರಿಗೆ ವಿಧಾನಸೌಧ, ಜನರಿಗೆ ಲಾಲಬಾಗ್! ಎಂದು ಸಾಮಾಜಿಕ ಜಾಲತಾಣದ ಪೋಸ್ಟ್ ಮೂಲಕ ಕಾಂಗ್ರೆಸ್ ಸರ್ಕಾರದ ಬಗ್ಗೆ ಕಿಡಿಕಾರಿದ್ದಾರೆ.
ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: ಮನೆ ಬಾಗಿಲಿಗೆ ಪಡಿತರ ವಿತರಣೆಗೆ ಪಟ್ಟಿ ಸಿದ್ಧಪಡಿಸಿದ ಸರ್ಕಾರ
ಕಾಂಗ್ರೆಸ್ ನಾಯಕಿ, ಮಾಜಿ ಕಾರ್ಪೋರೇಟೋರ್ ಅಶ್ವತ್ಥಮ್ಮ ಅವರ ಪತಿ ಅಂಬಿಕಾಪತಿಯ ಮಗಳ ಮನೆಯಲ್ಲಿ ಐಟಿ ಅಧಿಕಾರಿಗಳು ಸೀಜ್ ಮಾಡಿರುವುದು 42 ಕೋಟಿ ಹಣ! ಈತ ಯಾರ "ಚಿರಂಜೀವಿ" ಯವರ ಪರವಾಗಿ ಹಣ ಸಂಗ್ರಹ ಮಾಡುತ್ತಿದ್ದ ಎಂದು ಗುತ್ತಿಗೆದಾರರ ಬಳಿ ಕೇಳಿದರೆ ನಿಜ ಹೊರಬರಬಹುದು. ಗುತ್ತಿಗೆದಾರರ ಸಂಘದ ಉಪಾಧ್ಯಕ್ಷನೇ ಸರ್ಕಾರದ ಪರವಾಗಿ ವಸೂಲಿಗೆ ಇಳಿದರೆ, ಗುತ್ತಿಗೆದಾರರನ್ನು ಕಾಪಾಡುವವರು ಯಾರು? ಈ ಹಣ ಯಾರದ್ದು ಎಂಬ ತನಿಖೆಯಾಗಲಿ ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದ್ದಾರೆ.