Asianet Suvarna News Asianet Suvarna News

ಮಹಿಷ ದಸರಾವನ್ನು ಬೆಂಗಳೂರಲ್ಲೂ ಆಚರಣೆ ಮಾಡ್ತೀವಿ: ಭಾಸ್ಕರ್‌ ಪ್ರಸಾದ್‌ ಸವಾಲು

ಮೈಸೂರಿನಲ್ಲಿ ಮಾತ್ರ ಆಚರಣೆ ಮಾಡುವ ಮಹಿಷ ದಸರಾವನ್ನು ಮುಂದಿನ ವರ್ಷ ಬೆಂಗಳೂರಿನಲ್ಲಿಯೂ ಆಚರಣೆ ಮಾಡುತ್ತೇವೆ ಎಂದು ಬಿ.ಆರ್. ಭಾಸ್ಕರ್‌ ಪ್ರಸಾದ್‌ ಹೇಳಿದ್ದಾರೆ.

Mahisha Dasara will be celebrated in Bengaluru too social Activist Bhaskar Prasad sat
Author
First Published Oct 13, 2023, 2:21 PM IST

ಮೈಸೂರು (ಅ.13): ರಾಜ್ಯದಲ್ಲಿ ಈ ವರ್ಷ ಮೈಸೂರಿನಲ್ಲಿ ಮಾತ್ರ ಆಚರಣೆ ಮಾಡುವ ಮಹಿಷ ದಸರಾವನ್ನು ಮುಂದಿನ ವರ್ಷ ಬೆಂಗಳೂರಿನಲ್ಲಿಯೂ ಆಚರಣೆ ಮಾಡುತ್ತೇವೆ ಎಂದು ಸಾಮಾಜಿಕ ಹೋರಾಟಗಾರ ಬಿ.ಆರ್. ಭಾಸ್ಕರ್‌ ಪ್ರಸಾದ್‌ ಹೇಳಿದ್ದಾರೆ.

ಮೈಸೂರಿನಲ್ಲಿ ನಡೆಯುತ್ತಿರುವ ಮಹಿಷ ದಸರಾ ಆಚರಣೆ ವೇಳೆ ಮಾತನಾಡಿದ ಅವರು, ಮಹಿಷ ಉತ್ಸವದ ಜನಸಾಗರಕ್ಕೆ ಕಾರಣವಾದ ವ್ಯಕ್ತಿಗೆ ನಾನು ಧನ್ಯವಾದ ಸಲ್ಲಿಸುತ್ತೇನೆ. ಅವರ ಮೆದುಳಿನಲ್ಲಿರುವ ಅಸತ್ಯ ತೊಲಗಲಿ ಎಂದು ಆಶಿಸುತ್ತೇನೆ. ಸತ್ಯ ರಬ್ಬರಿದ್ದಂತೆ, ಎಷ್ಟೆ ಎಳೆದರು ಚಿಮ್ಮುತ್ತದೆ. ಮುಂದಿನ ವರ್ಷ ಬೆಂಗಳೂರಿನಲ್ಲಿ ಮಹಿಷ ದಸರಾ ಆಚರಣೆ ಮಾಡಲು ನಿರ್ಧಾರ ಮಾಡಿದ್ದೇವೆ ಎಂದು ಹಾಡು ಹೇಳುತ್ತಾ ಸಂಸದ ಪ್ರತಾಪ್ ಸಿಂಹ ಅವರನ್ನ ಭಾಸ್ಕರ್ ಪ್ರಸಾದ್‌ ಕುಟುಕಿದರು.

ಪಡಿತರ ಚೀಟಿದಾರರಿಗೆ ಗುಡ್‌ ನ್ಯೂಸ್‌: ಮನೆ ಬಾಗಿಲಿಗೆ ಪಡಿತರ ವಿತರಣೆಗೆ ಪಟ್ಟಿ ಸಿದ್ಧಪಡಿಸಿದ ಸರ್ಕಾರ

ಮಹಿಷ ದಸರಾ ಮಾಡುವವರನ್ನು ತುಳಿತೀವಿ, ಹೊಸಕ್ತೀವಿ ಎಂದವರು ಅಡ್ರೆಸ್‌ಗೆ ಇಲ್ಲದಂಗೆ ಆಗಿದ್ದಾರೆ. ಕೋಮುವಾದಿಗಳ ವಿರುದ್ದ ಇಂದು ಸಾಂಸ್ಕೃತಿಕ ಪ್ರತಿರೋಧವಾಗಿದೆ. ಅದು ಕೆಲವರಿಗೆ ವಿಲಕ್ಷಣ, ವಿಚಿತ್ರವಾಗಿ ಕಾಣುತ್ತದೆ. ಇಂದು ಕ್ರಾಂತಿ ಮೈಸೂರಿನಿಂದ ಆರಂಭವಾಗಿದ್ದು, ಇಡೀ ರಾಜ್ಯ ಹಬ್ಬಲಿದೆ. ನೈಜ ಇತಿಹಾಸವನ್ನ ವಿಸ್ತರಿಸಲಿದೆ.  ನಾವು ಸಿಧ್ದನಾಕನ ರಕ್ತದವರು ಎಂದು ಕೇವಲ ಸಿದ್ದನಾಕನ ಕತೆ ಹೇಳಿಕೊಂಡು ಕೂತರಷ್ಟೇ ಸಾಲದು. ಅವನ ಹೋರಾಟದ ಪ್ರೇರಣೆಯೂ ಆಗಬೇಕು‌. ಬನ್ನಿ, ಮಹಿಷ ದಸರಾ ಆಚರಿಸೋಣ. ಮಹಿಷನೂ ನಮ್ಮವನೇ, ಚಾಮುಂಡಿಯೂ ನಮ್ಮವಳೇ. ನಮಗೆ ಬೇಕಾದ್ದು ನಾವು ಮಾಡುತ್ತೇವೆ‌ ಅದು ಬೇಡ, ಇದು ಬೇಡ ಎನ್ನಲು ನೀವ್ಯಾವ ಪುಡಂಗುಗಳ್ರೋ..... ಮಕ್ಕಳಾ ಎಂದು ತಿರುಗೇಟು ನೀಡಿದ್ದಾರೆ.

ಪ್ರಗತಿಪರ ಚಿಂತಕ ಪ್ರೊ.ಜಿ.ಪಾಟೀಲ್ ಮಾತನಾಡಿ, ಬಲ ಪಂಥಿಯರಲ್ಲಿ ವಿದ್ವಾಂಸರು, ಚಿಂತಕರು ಇಲ್ಲ. ಅಲ್ಲಿ‌ ಇರೋದು ದಂಗೆಕೋರರು, ವಿಷಯ ತಿರುಚುವವರು ಮಾತ್ರ. ಬಲ ಪಂಥಿಯರಿಗೆ ಇತಿಹಾಸ ಗೊತ್ತಿಲ್ಲ. ಸಮಾಜವನ್ನು ದಿಕ್ಕು ತಪ್ಪಿಸುವ ಕೆಲಸ ಮಾಡ್ತಾರೆ. ಅದಕ್ಕಾಗಿ‌ ಮಹಿಷನನ್ನು ಅವರು ಅಸಹ್ಯ ಅಂತಾರೆ. ನಮ್ಮ ಸಂಸ್ಕೃತಿಯನ್ನು ಅಸಹ್ಯ ಎನ್ನುವವರು ಅವರ ಸಂಸ್ಕೃತಿ ನೋಡಿಕೊಳ್ಳಬೇಕು. ಅವರು ಎಂತಹ ಸಂಸ್ಕೃತಿಯಲ್ಲಿ ಇದ್ದಾರೆ ಎಂದು‌ ತಿಳಿದುಕೊಳ್ಳಬೇಕು. ಒಂದೊಂದು ಸಲ ನಾವು ಮಾಡದ ಕೆಲಸವನ್ನು ನಮ್ಮ ಸೈದ್ಧಾಂತಿಕ ವಿರೋಧಿಗಳು ಮಾಡ್ತಾರೆ. ನಮ್ಮ ಸೈದ್ಧಾಂತಿಕ ವಿರೋಧಿಗಳಿಂದ ಈ ಕಾರ್ಯಕ್ರಮ ಯಶಸ್ವಿಯಾಗಿದೆ. ನಮ್ಮ ಸೈದ್ಧಾಂತಿಕ ವಿರೋಧಿಗಳನ್ನು ಸೋಲಿಸಲು ಎಲ್ಲರೂ ಪ್ರಯತ್ನ ಮಾಡಬೇಕು ಎಂದರು.

ಬರಪೀಡಿತ ತಾಲೂಕುಗಳ ಸಂಖ್ಯೆ 195ರಿಂದ 216ಕ್ಕೆ ಏರಿಕೆ: 20 ತಾಲೂಕುಗಳಲ್ಲಿ ಮಾತ್ರ ಮಳೆ

ಇತಿಹಾಸ ತಜ್ಞ ಪ್ರೊ.ಚಿಕ್ಕರಂಗೇಗೌಡ ಮಾತನಾಡಿ, 500 ವರ್ಷಗಳಲ್ಲಿ ಸುಳ್ಳು ಊರೇಲ್ಲ ಸುತ್ತಿ ಸುಸ್ತಾಗಿ ಈಗ ಮಲಗಿದೆ. ಇದೀಗ ಆ ನಿಜವನ್ನು ನಾವು ಊರಿಗೆಲ್ಲ ಹೇಳಬೇಕಿದೆ. ಇಡೀ ಭರತ ಖಂಡ ಮಹಿಷ ನಾಡು. ಧಾರವಾಡ ಕೊಡಲೂರಿನಲ್ಲಿ 1962ರಲ್ಲಿ‌ ದೊರೆತ ಶಾಸನದಲ್ಲಿ ಮೈಸೂರಿನ ಉಲ್ಲೇಖವಿದೆ. ಆ ಶಾಸನದಲ್ಲಿ ವೈಷ್ಣವಿ ದೇವಿ, ಕಾವೇರಿ‌ ನದಿ ಬಗ್ಗೆ ಉಲ್ಲೇಖ ಇದೆ. ಮೂರು ಮಹಿಳೆಯರು ಮಹಿಷನ ನಾಡಿನಲ್ಲಿ ದಾನ ಮಾಡ್ತಾ ಇದ್ದರು. ಅಲ್ಲಿಗೆ ಆಗ ಮಹಿಷ ಮಹಿಳೆಯರ ಉದ್ಧಾರಕ ಎಂದು ಅರ್ಥವಾಗಲಿದೆ. ಮಹಿಷ ಯಾರಿಗೂ‌ ಕಿರುಕುಳ‌ ಕೊಟ್ಟಿಲ್ಲ ಎಂದು‌ ತಿಳಿಯುತ್ತದೆ ಎಂದರು.

Follow Us:
Download App:
  • android
  • ios