ಮಂಗಳೂರು ಬಂದರಿಗೆ ಆಗಮಿಸಿದ ಮೆಡಿಕಲ್ ಆಕ್ಸಿಜನ್ ಹೊತ್ತ ಕುವೈತ್ ಹಡಗು

* ಕೊರೋನಾ ಕಾಲದಲ್ಲಿ ಭಾರತದ ನೆರವಿಗೆ ಬಂದ ವಿವಿಧ ರಾಷ್ಟ್ರಗಳು
 *   ನವಮಂಗಳೂರು ಬಂದರಿಗೆ ಆಗಮಿಸಿದ ಮೆಡಿಕಲ್ ಆಕ್ಸಿಜನ್ ಹೊತ್ತ ಕುವೈತ್ ಹಡಗು
* ಶಾಸಕ ಡಾ.ವೈ ಭರತ್ ಶೆಟ್ಟಿ, ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆವಿ ಅವರಿಂದ ಸ್ವಾಗತ

MLA Bharath Shetty Well comes medical oxygen from kuwait at Mangaluru rbj

ಮಂಗಳೂರು, (ಮೇ.10): ಭಾರತದೊಂದಿಗಿನ ಸಧೃಡ  ಅಂತರಾಷ್ಟ್ರೀಯ ಭಾಂದವ್ಯದ ದ್ಯೋತಕವಾಗಿ ಕುವೈಟ್ ಸರಕಾರ ಎರಡು ಕಂಟೈನರ್ ಗಳಲ್ಲಿ ಮೆಡಿಕಲ್ ಆಕ್ಸಿಜನ್, ಟ್ಯಾಂಕ್ಸ್, ಆಕ್ಸಿಜನ್ ಕಾನ್ಸೆನ್ಟ್ರೇಟರ್  ಪೂರೈಕೆಗೆ ನಿರ್ಧರಿಸಿದ್ದು, ಒಂದು ಹಡಗು ಸೋಮವಾರ ನವಮಂಗಳೂರು ಬಂದರಿಗೆ ಬಂದು ತಲುಪಿದೆ.

ಮಂಗಳೂರು ನಗರ ಉತ್ತರ ಶಾಸಕರಾದ ಡಾ.ವೈ ಭರತ್ ಶೆಟ್ಟಿ, ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆವಿ ಹಾಗೂ ಪ್ರಮುಖರು ಹಡಗನ್ನು ಇಂದು (ಸೋಮವಾರ) ಬರಮಾಡಿಕೊಂಡರು. ಮಂಗಳವಾರ ಇನ್ನೆರಡು ಹಡಗುಗಳ ಮೂಲಕ ನಾಲ್ಕು ಕಂಟೈನರ್ ಗಳಲ್ಲಿ ವೈದ್ಯಕೀಯ ಆಮ್ಲಜನಕದ ಪೂರೈಕೆಗೆ ಕುವೈತ್ ಮುಂದಾಗಿದೆ.

ಕೊರೋನಾ ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ದಕ್ಷಿಣ ಕೊರಿಯಾ! 

ಕುವೈತ್ ಸರಕಾರ ಮತ್ತು ಪ್ರಧಾನಿ ನರೇಂದ್ರ ಮೋದಿಜಿಯವರಿಗೆ ಶಾಸಕ ಡಾ.ವೈ ಭರತ್ ಶೆಟ್ಟಿಯವರು ಧನ್ಯವಾದ ಅರ್ಪಿಸಿದ್ದಾರೆ.

ಈ ವೇಳೆ ಕೆ.ವಿ,ಎನ್ ಎಂಪಿಟಿ ಚೇಯರ್ ಮನ್ ಎ.ವಿ ರಮಣ್, ಕೋಸ್ಟ್ ಗಾರ್ಡ್ ಡಿಐಜಿ ವೆಂಕಟೇಶ್, ಮಾಜಿ ಸಚಿವ ನಾಗರಾಜ ಶೆಟ್ಟಿ, ರೆಡ್ ಕ್ರಾಸ್ ಸಂಸ್ಥೆಯ ಪದಾಧಿಕಾರಿಗಳು , ಉಮಾನಾಥ ಕೋಟ್ಯಾನ್, ಸಹಾಯಕ ಆಯುಕ್ತ ಮದನ್ ಮೋಹನ್, ನೌಕಾಪಡೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಇನ್ನು ಈ ಹಿಂದೆ ಭಾರತ ಕುವೈತ್‌ಗೆ ಎರಡು ಲಕ್ಷ ಡೋಸ್ ಲಸಿಕೆಯನ್ನು ಕಳುಹಿಸಿಕೊಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು. ಇದೀಗ ಈ ಕುವೈತ್‌ ಸರ್ಕಾರ  ಆಕ್ಸಿಜನ್ ನೀಡುವ ಮೂಲಕ ಋಣ ತೀರಿಸಿದೆ ಎಂದು ಹೇಳಬಹುದು.
MLA Bharath Shetty Well comes medical oxygen from kuwait at Mangaluru rbj
MLA Bharath Shetty Well comes medical oxygen from kuwait at Mangaluru rbj

Latest Videos
Follow Us:
Download App:
  • android
  • ios