ಕೊಪ್ಪಳ(ಮಾ.07): ಸಿಂಗಲ್ ಸರ್ಕಾರ ಬಂದಿದ್ರೆ ನಾನು ಆವತ್ತೇ ಸಚಿವನಾಗುತ್ತಿದ್ದೆ, ಕನಕಗಿರಿಯ ಮಣ್ಣಿನ ಗುಣ ಹಾಗಿದೆ. ಇಲ್ಲಿ ಯಾರೇ ಗೆದ್ರೂ ಮಂತ್ರಿ ಆಗುತ್ತಾರೆ ಎಂದು ಶಾಸಕ ಬಸವರಾಜ್ ದಡೇಸೂಗೂರ್ ಹೇಳಿದ್ದಾರೆ. 

ಶನಿವಾರ ಜಿಲ್ಲೆಯ ಕನಕಗಿರಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದೆ ನಮ್ಮ ಸೌಭಾಗ್ಯವಾಗಿದೆ. ಯಡಿಯೂರಪ್ಪ ಸಿಎಂ ಆದ್ರೆ ನಾನೇ ಮುಖ್ಯಮಂತ್ರಿ ಆದ ಹಾಗೆ. ಈ ಸಮಯದಲ್ಲಿ ನಾನು ಯಾವ ಸ್ಥಾನ ಕೇಳಿದರೂ ಮುಖ್ಯಮಂತ್ರಿ ಕೊಡುತ್ತಾರೆ. ಆದ್ರೆ ನಾನು ಯಡಿಯೂರಪ್ಪಗೆ ಟೆನ್ಶನ್ ಕೊಡುವುದಿಲ್ಲ ಎಂದು ತಿಳಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸಮಾನಾಂತರ ಜಲಾಶಯಕ್ಕೆ ಬಜೆಟ್‌ನಲ್ಲಿ 20 ಕೋಟಿ ಘೋಷಣೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಬಸವರಾಜ್ ದಡೇಸೂಗೂರ್, ಇದು ಒಂದು ಪರ್ಸೆಂಟ್‌ ಅಷ್ಟೇ ಮುಂದೆ ನೋಡಿ ಹೇಗೆ ಬದಲಾವಣೆ ಆಗತ್ತೆ ಎಂದು ಗೊತ್ತಾಗಲಿದೆ. 224 ಕ್ಷೇತ್ರದಲ್ಲಿ ಕನಕಗಿರಿಗೆ ವಿಶೇಷ ಪ್ಯಾಕೇಜ್ ಇದ್ದೇ ಇರತ್ತದೆ. ನಾನು ಕೊಟ್ಟ ಯಾವುದೇ ಮನವಿಗೆ ಯಡಿಯೂರಪ್ಪ ಹಂಗೆ ಸಹಿ ಹಾಕುತ್ತಾರೆ ಎಂದು ಹೇಳಿದ್ದಾರೆ. 

#NewsIn100Seconds ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"