ಮೋದಿ, ಯೋಗಿ ಇರೋವರೆಗೂ ಬಾಲ ಬಿಚ್ಚಂಗಿಲ್ಲ: ಶಾಸಕ ಬಸನಗೌಡ ಯತ್ನಾಳ
ಹಿಂದುಗಳ ಪವಿತ್ರ ಹಬ್ಬವಾದ ಗಣೇಶ ಚತುರ್ಥಿಯ ಮೆರವಣಿಗೆಯನ್ನು ಸಹಿಸುವ ಶಕ್ತಿ ಇಲ್ಲಿ ಕೆಲವರಿಗೆ ಇಲ್ಲ. ಮೋದಿ ಮತ್ತು ಯೋಗಿ ಇರುವವರೆಗೂ ನೀವಿಲ್ಲಿ ಬಾಲ ಬಿಚ್ಚಕ್ಕಾಗಲ್ಲ. ಇಲ್ಲಿ ಇರಬೇಕೆಂದರೆ ಚಂದವಾಗಿ ಇರಬೇಕು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ದೇಶ ವಿರೋಧಿ, ಧರ್ಮ ವಿರೋಧಿಗಳಿಗೆ ಎಚ್ಚರಿಕೆ ನೀಡಿದರು.
ವಿಜಯಪುರ (ಸೆ.15): ಹಿಂದುಗಳ ಪವಿತ್ರ ಹಬ್ಬವಾದ ಗಣೇಶ ಚತುರ್ಥಿಯ ಮೆರವಣಿಗೆಯನ್ನು ಸಹಿಸುವ ಶಕ್ತಿ ಇಲ್ಲಿ ಕೆಲವರಿಗೆ ಇಲ್ಲ. ಮೋದಿ ಮತ್ತು ಯೋಗಿ ಇರುವವರೆಗೂ ನೀವಿಲ್ಲಿ ಬಾಲ ಬಿಚ್ಚಕ್ಕಾಗಲ್ಲ. ಇಲ್ಲಿ ಇರಬೇಕೆಂದರೆ ಚಂದವಾಗಿ ಇರಬೇಕು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ದೇಶ ವಿರೋಧಿ, ಧರ್ಮ ವಿರೋಧಿಗಳಿಗೆ ಎಚ್ಚರಿಕೆ ನೀಡಿದರು. ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನ ಮುಂಭಾಗದ ಸರ್ದಾರ ವಲ್ಲಭಬಾಯಿ ಪಟೇಲ್ ವೇದಿಕೆಯಲ್ಲಿ ಸ್ವಾಮಿ ವಿವೇಕಾನಂದ ಸೇನೆಯ ಶ್ರೀ ಗಜಾನನ ಮಹಾಮಂಡಳ ಹಮ್ಮಿಕೊಂಡಿದ್ದ ೭ನೇ ದಿನದ ಗಣೇಶ ವಿಸರ್ಜನಾ ಮೆರವಣಿಗೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇನ್ನು ಮುಂದೆ ನಾವೆಲ್ಲ ಒಂದಾಗಿರಬೇಕು. ಗಣಪತಿ ಪ್ರತಿಷ್ಠಾಪನೆಗೆ ಪರವಾನಗಿ ಇಲ್ಲದೆ ಇಡುವ ಹಾಗೂ ಗಣಪತಿ ಮೇಲೆ ಕಲ್ಲು ಹಾಕಿದರೆ ಅವರ ಮೇಲೆ ಬುಲ್ಡೋಜರ್ ಹಾಕೋ ಮುಖ್ಯಮಂತ್ರಿ ಬೇಕು. ಇದು ಶಿವಾಜಿ ಮಹಾರಾಜರ ನೆಲ, ಯಾರಿಗೂ ಹೆದರುವ ಅವಶ್ಯಕತೆಯಿಲ್ಲ. ನಾವು ವಿಜಯಪುರದಲ್ಲಿ ಆವಾಜ್ ಹಾಕಿದ್ದಕ್ಕೆ ಇಡೀ ಕರ್ನಾಟಕದಲ್ಲಿ ಡಿಜೆ ಹಾಕುವಂತಾಯಿತು. ಹಿಂದೆ ಬನಾಯೇಂಗೆ ಮಂದಿರ ಹಾಡನ್ನು ನಿಷೇಧ ಮಾಡಿದ್ದನ್ನು ಬಿಡಲಿಲ್ಲ, ಹೀಗಾಗಿ ರಾಮ ಮಂದಿರ ಹಾಡಿನ ನಿಷೇಧ ತೆರವಾಯಿತು ಎಂದರು.
ಸ್ಯಾಂಡಲ್ವುಡ್ನಲ್ಲಿ ಲೈಂಗಿಕ ಶೋಷಣೆ: ಫಿಲ್ಮ್ ಚೇಂಬರ್‌ನಲ್ಲಿ ನಾಳೆ ಮಹತ್ವದ ಸಭೆ
ಹಿಂದೂವೋಂಕೆ ವಿಕಾಸ್: ಸಿದ್ದರಾಮಯ್ಯನವರನ್ನು ಟಚ್ ಮಾಡಿದರೆ ಮೋದಿ ಅವರ ಮನೆಗೆ ಹೋಗುತ್ತೇವೆ ಎಂಬ ಶಾಸಕರ ಹೇಳಿಕೆಗೆ ನಮ್ಮ ದೇಶದಲ್ಲಿನ ಹಿಂದುಗಳು ಶೆಂಡರಾ ...? ಎಂದು ಪ್ರಶ್ನಿಸಿದರು. ಮುಂದಿನ ದಿನಗಳಲ್ಲಿ ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಬದಲಾಗಿ ಹಿಂದುವೋಂಕೆ ಸಾತ್, ಹಿಂದೂವೋಂಕೆ ವಿಕಾಸ್ ಎಂದು ನಾವು ಮಾಡುತ್ತೇವೆ. ನಾವೇಲ್ಲ ಗಟ್ಟಿ ಇದ್ದೇವೆ. ನಿಮ್ಮನ್ನೆಲ್ಲ ಮುಗಿಸಿ ಬಿಡುತ್ತೇವೆ ಎಂದು ಎಚ್ಚರಿಸಿದರು. ಬಾಂಗ್ಲಾ ಮಾಡಲು ಬಂದರೆ ನಾವು ಬಿಡುವುದಿಲ್ಲ. ನಮ್ಮ ಮನೆಯಲ್ಲಿರುವ ಚಾಕುಗಳು ಈರುಳ್ಳಿ ಕಟ್ ಮಾಡಲಿಕ್ಕೆ ಇಟ್ಟಿಲ್ಲ. ಎಲ್ಲದಕ್ಕೂ ನಾವು ರೆಡಿಯಾಗಿದ್ದೇವೆ. ಶಿವಾಜಿ, ಮಹಾರಾಣಾ ಪ್ರತಾಪ್, ಚೆನ್ನಮ್ಮರ ಖಡ್ಗ ಕೂಡ ನಮ್ಮ ಹತ್ರ ಇದೆ. ಎಲ್ಲರೂ ತಮ್ಮ ಮನೆಯಲ್ಲಿ ತಯಾರಾಗಿ ಇಟ್ಟುಕೊಳ್ಳಿ ಮುಂದೆ ಹೆಂಗೆ ಕಾಲ ಬರುತ್ತದೆ. ನಮ್ಮ ಆತ್ಮ ರಕ್ಷಣೆಗಾಗಿ ನಾವು ಸನ್ನದ್ಧರಾಗಬೇಕು ಎಂದು ಕರೆ ನೀಡಿದರು.
ಹಿಂದುಗಳ ಬಳಿ ಖರೀದಿ ಮಾಡಿ: ಹಿಂದುಗಳ ಹತ್ತಿರ ವ್ಯವಹಾರ ಮಾಡಿ ದೇವರಿಗೆ ತೆಂಗು ಹಾರ ಹಿಂದುಗಳ ಹತ್ತಿರ ಮಾತ್ರ ಖರೀದಿಸಬೇಕು. ಸ್ವಚ್ಛವಾಗಿ ಸ್ನಾನ ಮಾಡಿ ಹಣೆಗೆ ವಿಭೂತಿ ಕುಂಕುಮ ಇಟ್ಟವರ ಹತ್ತಿರ ಮಾತ್ರ ಖರೀದಿ ಮಾಡಿ. ರಾತ್ರಿ ಮಾಂಸಹಾರ ಸೇವನೆ ಮಾಡಿ ಬೆಳಗ್ಗೆ ಸ್ನಾನ ಮಾಡದೆ ಹಾರ ಕಟ್ಟುವವರ ಹತ್ತಿರ ಹಾರ ಖರೀದಿಸಬೇಡಿ. ಖರೀದಿ ಮುಂಚೆ ಜೈ ಶ್ರೀರಾಮ್ ಎಂದು ಹೇಳಿ ಅವರು ಪ್ರತಿಯಾಗಿ ಜೈ ಶ್ರೀರಾಮ್ ಎಂದರೆ ಖರೀದಿ ಮಾಡುವಂತೆ ಸೂಚಿಸಿದರು.
ಸ್ವಾಮಿ ವಿವೇಕಾನಂದ ಸೇನೆಯ ರಾಜ್ಯಾಧ್ಯಕ್ಷ ರಾಘವ್ ಅಣ್ಣಿಗೇರಿ ಮಾತನಾಡಿದರು. ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪರಶುರಾಮ ಸಿಂಗ್ ರಜಪೂತ, ಗೂಳಪ್ಪ ಶಟಗಾರ, ಸಿದ್ದೇಶ್ವರ ಸಂಸ್ಥೆ ಉಪಾಧ್ಯಕ್ಷ ಸಂಗನಬಸಪ್ಪ ಸಜ್ಜನ, ಸಿದ್ದೇಶ್ವರ ಬ್ಯಾಂಕ್ ನಿರ್ದೇಶಕ ಗುರು ಗಚ್ಚಿನಮಠ, ಮಹಾನಗರ ಪಾಲಿಕೆ ಸದಸ್ಯರಾದ ರಾಜಶೇಖರ ಮಗಿಮಠ, ಎಂ.ಎಸ್.ಕರಡಿ, ರಾಜಶೇಖರ ಕುರಿಯವರ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಂಕರ ಹೂಗಾರ, ಗಜಾನನ ಮಹಾ ಮಂಡಳದ ಅಧ್ಯಕ್ಷ ಸಂದೀಪ ಪಂಗಡವಾಲೆ, ಉಪಾಧ್ಯಕ್ಷ ಪ್ರಶಾಂತ ದೇಸಾಯಿ, ಪ್ರಧಾನ ಕಾರ್ಯದರ್ಶಿ ಸಚಿನ ಬಡಾವಣೆ, ಸಂತೋಷ ತೆಲಸಂಗ, ರವಿ ಅಗಸರ, ಶಿವು ಭಜಂತ್ರಿ, ಮನೋಜ ಸುರಪುರ, ಮುಖಂಡರಾದ ಸಂತೋಷ ಪಾಟೀಲ, ವಿಠ್ಠಲ ನಡುವಿನಕೇರಿ, ಬಾಬು ಶಿರಶ್ಯಾಡ, ರಾಜಶೇಖರ ಭಜಂತ್ರಿ ಸೇರಿದಂತೆ ಮುಂತಾದವರು ಇದ್ದರು.
ಭಗವದ್ಗೀತೆ ಪುಸ್ತಕ ಹಂಚಿಕೆ: ೭ನೇ ದಿನದ ಗಣೇಶ ವಿಸರ್ಜನಾ ಮೆರವಣಿಗೆ ನಗರದ ವಿವಿಧ ಬಡಾವಣೆ, ಕಾಲೊನಿಗಳ ಗಣೇಶ ಮೂರ್ತಿಗಳು ಸಾಲು ಸಾಲಾಗಿ ಡಿಜೆ ಹಾಗೂ ನೃತ್ಯ ಸಡಗರ ಸಂಭ್ರಮದೊಂದಿಗೆ ನಡೆಯಿತು. ವಿಸರ್ಜನೆ ಮೆರವಣಿಗೆ ಸಿದ್ದೇಶ್ವರ ದೇವಸ್ಥಾನ ಎದುರು ಆಗಮಿಸಿದವು. ಪ್ರತಿ ಗಜಾನನ ಮಂಡಳಿಗಳ ಅಧ್ಯಕ್ಷರಿಗೆ ಸ್ವಾಮಿ ವಿವೇಕಾನಂದ ಸೇನೆಯ ಶ್ರೀ ಗಜಾನನ ಮಹಾಮಂಡಳದಿಂದ ಕೇಸರಿ ಶಾಲು ಹೊದಿಸಿ, ಹಿಂದೂಗಳ ಪವಿತ್ರ ಗ್ರಂಥ ಭಗವದ್ಗೀತೆ ಪುಸ್ತಕ ನೀಡಿ ಸತ್ಕರಿಸಲಾಯಿತು.
10 ವರ್ಷದಿಂದ ಒಂದು ಲೆಕ್ಕ, ಈಗಿಂದ ಬೇರೆನೇ ಲೆಕ್ಕ ಎಂದ ಕಿಚ್ಚ ಸುದೀಪ್: ಸೆ.29 ರಿಂದ ಬಿಗ್‌ಬಾಸ್ ಹೊಸ ಅಧ್ಯಾಯ ಶುರು
ನಾಗಮಂಗಲದಲ್ಲಿ ನಡೆದ ಘಟನೆ ಗಮನಿಸಿದರೆ, ಈ ಸರ್ಕಾರ ಬಹಳ ದಿನ ಬದುಕಲ್ಲ. ಕರ್ನಾಟಕದಲ್ಲಿ ಮುಂದಿನ ದಿನಗಳಲ್ಲಿ ನಾವೇ ಬರುತ್ತೇವೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ನನ್ನನ್ನು ಸೋಲಿಸಲು ತಂತ್ರ ಮಾಡಿದರು. ಕೆಲವರು ಚುನಾವಣೆ ಹೆಸರಲ್ಲಿ ಕಾರು ತೆಗೆದುಕೊಂಡರು, ಜಮೀನಿನಲ್ಲಿ ಬೋರ್‌ವೆಲ್ ಹಾಕಿಸಿದರು. ನಕಲಿ ಮತದಾನ ಮಾಡಿದ್ದೇನೆಂದು ಆರೋಪಿಸಿ ನ್ಯಾಯಾಲಯದ ಮೊರೆ ಹೋಗಿ, ತಾನೇ ದಂಡ ಹಾಕಿಸಿಕೊಂಡ.
-ಬಸನಗೌಡ ಪಾಟೀಲ ಯತ್ನಾಳ, ನಗರ ಶಾಸಕ