Asianet Suvarna News Asianet Suvarna News

2 ದಿನದಲ್ಲಿ ಎಲ್ಲಾ ವಿಷಯಗಳ ಬಗ್ಗೆ ಜಾರಕಿಹೊಳಿ ಸ್ಪಷ್ಟನೆ: ಬಾಲಚಂದ್ರ

* ರಮೇಶ್‌ ಬದಲು ನನಗೆ ಸಚಿವ ಸ್ಥಾನ ಕೇಳಿಲ್ಲ
* ರಮೇಶ್‌ ಮಂತ್ರಿಯಾಗಬೇಕು ಎಂಬುದೇ ನಮ್ಮಾಸೆ
* ರಾಜಕಾರಣದಲ್ಲಿ ಅಸಮಾಧಾನ, ಬೇಜಾರು ಇದ್ದೇ ಇರುತ್ತೆ
 

MLA Balachandra Jarkiholi Talks Over Ramesh Jarkiholi grg
Author
Bengaluru, First Published Jul 2, 2021, 10:36 AM IST | Last Updated Jul 2, 2021, 10:36 AM IST

ಬೆಳಗಾವಿ(ಜು.02): ರಮೇಶ್‌ ಜಾರಕಿಹೊಳಿ ಬದಲಿಗೆ ತಮಗೆ ಸಚಿವ ಸ್ಥಾನ ನೀಡುವಂತೆ ಪಕ್ಷದ ಹೈಕಮಾಂಡ್‌ ಮುಂದೆ ಯಾವುದೇ ಬೇಡಿಕೆ ಇಟ್ಟಿಲ್ಲ. ರಮೇಶ್‌ ಅವರೇ ಮರಳಿ ಮಂತ್ರಿಯಾಗಬೇಕೆಂಬುದು ನಮ್ಮೆಲ್ಲರ ಆಸೆ ಎಂದು ಕೆಎಂಎಫ್‌ ಅಧ್ಯಕ್ಷರಾಗಿರುವ ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ. ಇನ್ನು ಎರಡು ದಿನದಲ್ಲಿ ಶಾಸಕ ರಮೇಶ್‌ ಜಾರಕಿಹೊಳಿ ಮತ್ತು ನಾನು ಜಂಟಿ ಸುದ್ದಿಗೋಷ್ಠಿ ನಡೆಸಿ ಎಲ್ಲ ವಿಷಯಗಳನ್ನು ಸ್ಪಷ್ಟಪಡಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.

ರಮೇಶ್‌ ಜಾರಕಿಹೊಳಿ ಬದಲಿಗೆ ತಮಗೆ ಸಚಿವ ಸ್ಥಾನ ನೀಡಲಾಗುತ್ತದೆ ಎಂಬ ಸುದ್ದಿ ಕುರಿತು ಬಗ್ಗೆ ಗೋಕಾಕ್‌ನಲ್ಲಿ ಗುರುವಾರ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ನಾವು ಸಚಿವ ಸ್ಥಾನಕ್ಕೆ ಕ್ಲೇಮ್‌ ಮಾಡಿಲ್ಲ. ನನಗೂ ಯಾರೂ ಸಚಿವ ಸ್ಥಾನದ ಆಫರ್‌ ಮಾಡಿಲ್ಲ. ನಮ್ಮ ಪಾಡಿಗೆ ನಾವು ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇವೆ. ಕೆಎಂಎಫ್‌ ಅಧ್ಯಕ್ಷನಾಗಿ ಕೆಲಸ ಮಾಡುತ್ತಿದ್ದೇನೆ ಅಷ್ಟೇ ಎಂದರು.

ರಾಜ್ಯ ರಾಜಕಾರಣದ ಮಹಾಸ್ಫೋಟಕ ಸುದ್ದಿ: ಸಾಹುಕಾರ್‌ ಬೇಡಿಕೆಗೆ ಅಸ್ತು ಎಂದಿದ್ಯಾ ಹೈಕಮಾಂಡ್‌?

ಇನ್ನು ರಮೇಶ್‌ ಜಾರಕಿಹೊಳಿ ಅವರು ದೆಹಲಿಯಿಂದ ಬೆಂಗಳೂರಿಗೆ ಮರಳಿದ್ದು, ಶುಕ್ರವಾರ ಗೋಕಾಕ್‌ಗೆ ಆಗಮಿಸಲಿದ್ದಾರೆ. ಬಳಿಕ ಮತ್ತೊಮ್ಮೆ ಸಭೆ ಮಾಡುತ್ತೇವೆ. ಬಳಿಕ ಎರಡು ದಿನಗಳಲ್ಲಿ ರಮೇಶ್‌ ಜಾರಕಿಹೊಳಿ ಮತ್ತು ನಾನು ಜಂಟಿ ಸುದ್ದಿಗೋಷ್ಠಿ ನಡೆಸಿ ಎಲ್ಲ ವಿಚಾರಗಳನ್ನು ತಿಳಿಸುತ್ತೇವೆ ಎಂದು ಹೇಳಿದರು.

ರಾಜಕಾರಣದಲ್ಲಿ ಅಸಮಾಧಾನ, ಬೇಜಾರು ಇದ್ದೇ ಇರುತ್ತದೆ. ಅಂತಹ ವಿಚಾರ ಏನೂ ಇಲ್ಲ. ರಮೇಶ್‌ ಜಾರಕಿಹೊಳಿ ಮರಳಿ ಮಂತ್ರಿಯಾಗಬೇಕು ಎಂಬುದು ನಮ್ಮೆಲ್ಲರ ಆಸೆ. ಪಕ್ಷದಲ್ಲಿರುವ ಕೆಲವರು ಬೆನ್ನಿಗೆ ಚೂರಿ ಹಾಕಿದ ಬಗ್ಗೆ ಗೊತ್ತಿಲ್ಲ. ಅವರೇ ಮಾತನಾಡಿದ್ದಾರೆ. ರಮೇಶ್‌ ಅವರನ್ನೇ ಸಚಿವರನ್ನಾಗಿ ಮಾಡಲು ಪ್ರಯತ್ನ ಮಾಡಲಾಗುವುದು. ಕೆಲವೊಂದು ಕಾನೂನು ತೊಡಕುಗಳಿವೆ. ಸುದ್ದಿಗೋಷ್ಠಿಯಲ್ಲಿ ಎಲ್ಲಾ ವಿಚಾರಗಳನ್ನು ಸ್ಪಷ್ಟಪಡಿಸುತ್ತೇವೆ ಎಂದು ಹೇಳಿದರು.
 

Latest Videos
Follow Us:
Download App:
  • android
  • ios