Asianet Suvarna News Asianet Suvarna News

ಹಸಿರೀಕರಣಕ್ಕೆ 17 ಲಕ್ಷ ರು. ಬಹುಮಾನ ಘೋಷಿಸಿದ ಶಾಸಕ!

ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಕನಿಷ್ಠ ಐದು ಸಸಿ ನೆಟ್ಟು ಬೆಳೆಸಿದ ಪಕ್ಷದ ಬೂತ್‌ಗೆ ಶಾಸಕ ಡಾ. ಭರತ್‌ ಶೆಟ್ಟಿಅವರು ಪ್ರಥಮ, ದ್ವಿತೀಯ, ತೃತೀಯ ಬಹುಮಾನವಾಗಿ ತಲಾ 10, 5 ಮತ್ತು 2 ಲಕ್ಷ ರು. ಬಹುಮಾನ ಘೋಷಿಸಿದ್ದಾರೆ.

MLA Announce 17 lakh rupees prize money for those who plant tree in Mangalore
Author
Bangalore, First Published Aug 2, 2020, 3:02 PM IST

ಮಂಗಳೂರು(ಆ.02): ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಕನಿಷ್ಠ ಐದು ಸಸಿ ನೆಟ್ಟು ಬೆಳೆಸಿದ ಪಕ್ಷದ ಬೂತ್‌ಗೆ ಶಾಸಕ ಡಾ. ಭರತ್‌ ಶೆಟ್ಟಿಅವರು ಪ್ರಥಮ, ದ್ವಿತೀಯ, ತೃತೀಯ ಬಹುಮಾನವಾಗಿ ತಲಾ 10, 5 ಮತ್ತು 2 ಲಕ್ಷ ರು. ಬಹುಮಾನ ಘೋಷಿಸಿದ್ದಾರೆ.

ವಿಶ್ವ ಪರಿಸರ ದಿನಾಚರಣೆಯನ್ನು ಕೇವಲ ಕಾಟಾಚಾರಕ್ಕೆ ನಡೆಸದೆ ಇದರ ಪ್ರಯೋಜನ ಪ್ರಕೃತಿಗೆ ಆಗಬೇಕು ಎನ್ನುವ ನಿಟ್ಟಿನಲ್ಲಿ ಬಿಜೆಪಿ ಪಕ್ಷದ ಪ್ರತಿ ಬೂತ್‌ನಲ್ಲಿ ಕನಿಷ್ಠ ಐದು ಗಿಡ ನೆಟ್ಟು ಬೆಳೆಸುವ ಗುರಿಯನ್ನು ಶಾಸಕರು ನಿಗದಿ ಪಡಿಸಿದ್ದಾರೆ.

ಕೆಸರು ಗದ್ದೆಯಲ್ಲಿ RSS ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್..! ನೇಜಿ ನೆಡೋ ಚಂದ ನೋಡಿ

ಪ್ರತಿ ಬೂತ್‌ನಲ್ಲಿ ನೆಟ್ಟಗಿಡಗಳನ್ನು ವಾರ್ಷಿಕವಾಗಿ ಮೌಲ್ಯ ಮಾಪನ ಮಾಡಲಾಗುತ್ತದೆ. ಗಿಡಗಳನ್ನು ಅತ್ಯುತ್ತಮವಾಗಿ ಪೋಷಣೆ ಮಾಡಿದ ಬೂತ್‌ಗೆ ಪ್ರಥಮ ಬಹುಮಾನವಾಗಿ 10 ಲಕ್ಷ ರು., ಎರಡನೇ ಸ್ಥಾನ ಪಡೆಯುವ ಬೂತ್‌ಗೆ 5 ಲಕ್ಷ ರು. ಮತ್ತು ಮೂರನೇ ಸ್ಥಾನ ಪಡೆಯುವ ಬೂತ್‌ಗೆ 2 ಲಕ್ಷ ರು. ಬಹುಮಾನ ಮೊತ್ತವನ್ನು ಶಾಸಕ ನಿ​ಧಿಯಿಂದ ನೀಡಿ ಹೆಚ್ಚುವರಿಯಾಗಿ ಆ ಪ್ರದೇಶದ ಅಭಿವೃದ್ಧಿಗೆ ಕೊಡುಗೆ ನೀಡಲು ನಿರ್ಧರಿಸಿದ್ದಾರೆ. ಈ ಬಹುಮಾನದ ಹಣವನ್ನು ಆಯಾ ಬೂತ್‌ನ ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗಿಸುವ ಅವಕಾಶ ನೀಡಲಾಗುವುದು. ಈ ಮೂಲಕ ಪ್ರತೀ ಬೂತ್‌ನಲ್ಲಿ ಹಸುರೀಕರಣ ಯೋಜನೆ ಪ್ರಯೋಜನಕಾರಿಯಾಗಿ ಅನುಷ್ಠಾನಕ್ಕೆ ಬರಲಿದೆ ಎಂಬುದು ಶಾಸಕರ ವಿಶ್ವಾಸ.

ನೊರೆ ಹಾಲಿನಂತ ಜಲಧಾರೆ, ಮಳೆಗಾಲದಲ್ಲಿ ಮೈದುಂಬಿ ನಿಂತ ಕಲ್ಲೇರಿಮೂಲೆ ಜಲಪಾತ

ಪ್ರತಿ ಬಾರಿ ವನಮಹೋತ್ಸವ, ವಿಶ್ವ ಪರಿಸರ ದಿನಾಚರಣೆ ಮಾಡುತ್ತೇವೆ. ಪ್ರಯೋಜನ ಎಷ್ಟುಎಂಬುದು ಹೇಳುವುದು ಕಷ್ಟ. ಅದಕ್ಕಾಗಿ ಈ ಬಾರಿ ವಿಶೇಷ ಗುರಿಯೊಂದನ್ನು ನನ್ನ ಕ್ಷೇತ್ರದಲ್ಲಿ ಬೂತ್‌ ಮಟ್ಟದಲ್ಲಿ ಪಕ್ಷದ ಕಾರ್ಯಕರ್ತರಿಗೆ ನೀಡಿದ್ದೇನೆ. ಗರಿಷ್ಠ ಎಷ್ಟುಆದರೂ ಆಗಬಹುದು, ಕನಿಷ್ಠ 5 ಸಸಿಗಳನ್ನು ನೆಟ್ಟು ಪೋಷಿಸಿ ಬೆಳೆಸಬೇಕು. ಇದನ್ನು ನಾನೇ ಮೌಲ್ಯ ಮಾಪನ ಮಾಡುತ್ತೇನೆ. ಅರ್ಹವಾದ ಬೂತ್‌ಗೆ ಬಹುಮಾನವಾಗಿ ಶಾಸಕ ನಿ​ಧಿಯಿಂದ ನೀಡುತ್ತೇನೆ. ಇದರಿಂದ ಕಾರ್ಯಕರ್ತರಲ್ಲಿ ಸ್ಪರ್ಧಾತ್ಮಕ ದೃಷ್ಟಿಕೋನ ಬೆಳೆಯುತ್ತದೆ ಎಂದು ಶಾಸಕ ಡಾ. ಭರತ್‌ ಶೆಟ್ಟಿ ತಿಳಿಸಿದ್ದಾರೆ.

Follow Us:
Download App:
  • android
  • ios