ಬಸವನಬಾಗೇವಾಡಿ(ಏ.20): ಹಲವು ಬಾರಿ ಮನವಿ ಮಾಡಿಕೊಂಡರೂ ಸಾರ್ವಜನಿಕರು ಸಾಮಾಜಿಕ ಅಂತರವನ್ನ ಕಾಯ್ದುಕೊಳ್ಳುವಳ್ಳಿ ಅನೇಕ ಕಡೆ ವಿಫರಾಗುತ್ತಿದ್ದಾರೆ. ಆದರೆ ಬಸವನಾಡಿನಲ್ಲಿ ದೇವರ ಹಸುವೊಂದು ಸಾಮಾಜಿಕ ಅಂತರ ಕಾಯ್ದುಕೊಂಡು ಕಿರಾಣಿ ಅಂಗಡಿ ಮುಂದೆ ನಿಂತಿರುವ ವಿಡಿಯೋವೊಂದು ವೈರಲ್ ಆಗಿದೆ. 

ಬಸವನಬಾಗೇವಾಡಿ ಪಟ್ಟಣದ ಕಿರಾಣಿ ಅಂಗಡಿಯೊಂದರ ಮುಂಭಾಗದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಅನುಕೂಲವಾಗಲು ರಚನೆ ಮಾಡಲಾಗಿರುವ ನಿರ್ಧಿಷ್ಟ ಬಾಕ್ಸ್‌ನಲ್ಲಿಯೇ ಹಸು ನಿಲ್ಲುವ ಮೂಲಕ ಸಾಮಾಜಿಕ ಅಂತರ ಕಾಯ್ದುಕೊಂಡು ಜನರಿಗೆ ಸಂದೇಶ ನೀಡಿದೆ.

ವಿಜಯಪುರದಲ್ಲಿ ಐವರ ಮೇಲೆ ಕೊರೋನಾ ಪಾಸಿಟೀವ್ ಶಂಕೆ; ಹೋಂ ಕ್ವಾರಂಟೈನ್‌ನಲ್ಲಿ

ಈ ರೀತಿ ಶಿಶ್ತುಬದ್ಧವಾಗಿ ನಿಂತು ಸಾಮಾಜಿಕ ಅಂತರ ಮಾಡುತ್ತಿರುವ ಹಸುವಿನ ಫೊಟೋವನ್ನು ಕ್ಲಿಕ್ಕಿಸಿದ್ದು, ಈ ಫೋಟೋ ಹಾಗೂ ವಿಡಿಯೋ ಹೆಚ್ಚು ಶೇರ್‌ ಆಗುವ ಮೂಲಕ ಜನ ಮೆಚ್ಚುಗೆಗೆ ಪಾತ್ರವಾಗಿದೆ.